Categories: ಮಡಿಕೇರಿ

ಮಡಿಕೇರಿ: ಮನೆಯ ಬೆಡ್​ರೂಂನಲ್ಲಿ ಸುರಂಗ ತೋಡಿದ್ದ ಇಬ್ಬರು ಬಂಧನ

ಮಡಿಕೇರಿ : ಯುವಕನೊಬ್ಬ ತನ್ನ ಮನೆಯ ಬೆಡ್​ ರೂಂನಲ್ಲಿ ಯಾರಿಗೂ ತಿಳಿಯದಂತೆ 15 ಅಡಿ ಗುಂಡಿ ತೋಡಿದ್ದ. ಕೋಳಿ ಬಲಿಪೂಜೆಯನ್ನೂ ನೆರವೇರಿಸಿದ್ದವ ದೊಡ್ಡ ಬಲಿ ಕೊಡಲು ನಿರ್ಧರಿಸಿದ್ದ. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಯುವಕನ ಜತೆಗೆ ಮತ್ತೊಬ್ಬ ವ್ಯಕ್ತಿಯನ್ನೂ ಬಂಧಿಸಿದ್ದು, ಮುಂದೆ ನಡೆಯಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.

ಇಂತಹ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಒಳಮಾಳ ಕೋಟೆ ಪೈಸಾರಿಯಲ್ಲಿ ನಡೆದಿದೆ. ಒಳಮಾಳ ಕೋಟೆ ಪೈಸಾರಿ ನಿವಾಸಿ ರಮೇಶ್​ ಎಂಬುವರ ಪುತ್ರ ಎಂ.ಆರ್​.ಗಣೇಶ್​(23) ಹಾಗೂ ಉಡುಪಿ ಜಿಲ್ಲೆ ಪಡುಬಿದ್ರಿ ಹಂಚಿನಡ್ಕದ ಅಬ್ದುಲ್​ ರೆಹಮಾನ್​ ಎಂಬುವರ ಪುತ್ರ ಬಿ.ಕೆ.ಸಾಧಿಕ್​(42) ಬಂಧಿತ ಆರೋಪಿಗಳು.

ಎಂ.ಆರ್​.ಗಣೇಶ್​ ಅವರ ಮನೆಯಲ್ಲಿ ನಿಧಿ ಇರುವುದಾಗಿ ಮಂಗಳೂರು ಹಾಗೂ ಕೇರಳ ಮೂಲದ ವಾಮಾಚಾರಿಗಳು ನಂಬಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳು ಮನೆಯ ಬೆಡ್​ರೂಂನಲ್ಲಿ 15 ಅಡಿಗಳಷ್ಟು ಆಳದ ಸುರಂಗ ತೋಡಿದ್ದರು. ನಿಧಿ ಶೋಧನೆ ಸಂಬಂಧ ಮನೆಯಲ್ಲಿ ಕೋಳಿಯ ಬಲಿಪೂಜೆ ನಡೆಸಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಬಲಿಪೂಜೆಗೆ ನಿರ್ಧರಿಸಲಾಗಿತ್ತು. ಅಷ್ಟರಲ್ಲಿ ದಾಳಿ ಮಾಡಿದ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಮುಂದೆ ನಡೆಯಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಿದಂತಾಗಿದೆ. ಇನ್ನೂ ಕೆಲ ಅಡಿಗಳಷ್ಟು ಮಣ್ಣು ತೆಗೆದಿದ್ದಲ್ಲಿ ಮನೆ ಕುಸಿದು ಮತ್ತೊಂದು ಅವಡ ಸಂಭವಿಸುವ ಸಾಧ್ಯತೆಯಿತ್ತು ಎನ್ನಲಾಗಿದೆ. ಆರೋಪಿಗಳ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾಮಾಚಾರಕ್ಕೆ ಬಳಸಿದ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಉಳಿದ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಮಡಿಕೇರಿ ಡಿವೈಎಸ್​ಪಿ ಗಜೇಂದ್ರಪ್ರಸಾದ್​ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಗುಪ್ತದಳ ಇನ್ಸ್​ಪೆಕ್ಟರ್​ ಐ.ಪಿ.ಮೇದಪ್ಪ, ಮಡಿಕೇರಿ ನಗರ ವೃತ್ತ ನಿರೀಕ ಪಿ.ವಿ.ವೆಂಕಟೇಶ್​, ಡಿಸಿಐಬಿ ಸಿಬ್ಬಂದಿ ವೆಂಕಟೇಶ್​, ಯೋಗೇಶ್​ಕುಮಾರ್​, ನಿರಂಜನ್​, ವಸಂತ, ಸುರೇಶ್​, ಶರತ್​ ರೈ, ಶಶಿಕುಮಾರ್​, ಅಭಿಲಾಷ್​, ಸಿದ್ದಾಪುರ ಠಾಣೆ ಎಎಸ್​ಐ ಮೊಹಿದ್ದೀನ್​, ಸಿಬ್ಬಂದಿ ಬೆಳಿಯಪ್ಪ, ಲಕ್ಷ್ಮೀಕಾಂತ್​, ಮಲ್ಲಪ್ಪ, ಶಿವಕುಮಾರ್​, ಸಿಡಿಆರ್​ ಸೆಲ್​ನ ರಾಜೇಶ್​, ಗಿರೀಶ್​, ಪ್ರವೀಣ್​ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Gayathri SG

Recent Posts

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

6 mins ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

19 mins ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

2 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

2 hours ago

ನಂಜನಗೂಡು ತಾಲ್ಲೂಕಿಗೆ ಶೇ.86.74 ರಷ್ಟು ಫಲಿತಾಂಶ: ವಿದ್ಯಾರ್ಥಿನಿ ಬಾಂಧವ್ಯ ತಾಲೂಕಿಗೆ ಪ್ರಥಮ ‌

ತಾಲ್ಲೂಕಿಗೆ ಶೇ.86.74 ರಷ್ಟು ಫಲಿತಾಂಶ ಬಂದಿದ್ದು, ನಂಜನಗೂಡಿನ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿನಿ ಬಾಂಧವ್ಯ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ…

2 hours ago

ಲೋಕಸಭೆ ಚುನಾವಣೆ: ಭಾಲ್ಕಿ ಕ್ಷೇತ್ರದಲ್ಲಿ ಅತ್ಯಧಿಕ ಮತದಾನ

ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ 65.45ರಷ್ಟು ಮತದಾನ ದಾಖಲಾಗಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಭಾಲ್ಕಿಯಲ್ಲಿ ಅತಿ ಹೆಚ್ಚು…

3 hours ago