Categories: ಮಡಿಕೇರಿ

ನಕಲಿ ಆರ್‌ಟಿಪಿಸಿಆರ್‌ ವರದಿಯೊಂದಿಗೆ ಸಂಚರಿಸುತಿದ್ದ ದಂಪತಿ ಬಂಧನ

ಮಡಿಕೇರಿ ಆ.13 : ನಕಲಿ ಆರ್‌ಟಿಪಿಸಿಆರ್ ವರದಿಯೊಂದಿಗೆ ಕೊಡಗು ಜಿಲ್ಲೆಗೆ ಆಗಮಿಸಿದ್ದ ಕೇರಳ ರಾಜ್ಯದ ದಂಪತಿಗಳನ್ನು ಕಾರು ಸಹಿತ ಪೊಲೀಸರು ವಶಕ್ಕೆ ಪಡೆದ ಪ್ರಕರಣ ವಿರಾಜಪೇಟೆ ಹೊರವಲಯದ ಅಮ್ಮತ್ತಿ ಗ್ರಾಮದಲ್ಲಿ ನಡೆದಿದೆ.
ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲ್ಲೂಕಿನ ಬಲ್ಲಂಗೋಡು ಗ್ರಾಮದ ಉದ್ಯಾವರ ನಿವಾಸಿ ಸೈಯದ್ ಮೊಹಮ್ಮದ್(32) ಮತ್ತು ಪತ್ನಿ ಅಯಿಷತ್ ರೆಹಮಾನ್ ಬಿ.ಎಂ ವಿರುದ್ಧ ನಕಲಿ ದಾಖಲೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಸೈಯದ್ ಮೊಹಮ್ಮದ್ ಕೊಡಗಿನ ಎಮ್ಮೆಮಾಡು ಗ್ರಾಮದಿಂದ ವಿವಾಹವಾಗಿದ್ದು, ಪತ್ನಿ ಅಯಿಷತ್ ರೆಹಮಾನ್ ಸಹಿತ ಅವರ ತವರು ಮನೆಗೆ ಆಗಮಿಸಿದ್ದಾರೆ. ಆ.11ರಂದು ಎಮ್ಮೆಮಾಡು ಅಮ್ಮತ್ತಿ ಮಾರ್ಗವಾಗಿ ಸಿದ್ದಾಪುರದ ಸ್ನೇಹಿತರ ಮನೆಗೆ ಕಾರಿನಲ್ಲಿ ತೆರಳುತ್ತಿದ್ದರು. ತಪಾಸಣೆ ಕೇಂದ್ರದಲ್ಲಿದ್ದ ಕಂದಾಯ ಇಲಾಖೆಯ ಅಮ್ಮತ್ತಿ ಗ್ರಾಮ ಲೆಕ್ಕಿಗರಾದ ಪ್ರವೀಣ್ ಮತ್ತು ಸಿದ್ದಾಪುರ ಗ್ರಾಮ ಲೆಕ್ಕಿಗರಾದ ಓಮಪ್ಪ ಬಣಗಾರ್ ಹಾಗೂ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕಾರಿನಲ್ಲಿ ಪ್ರಯಾಣಿಸುತಿದ್ದ ವ್ಯಕಿಗಳ ಕೋವಿಡ್ ನೆಗೆಟಿವ್ ವರದಿಯನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ. ವರದಿಯಲ್ಲಿ ಹೆಸರು ಸೈಯದ್ ಮೊಹಮ್ಮದ್, ಪತ್ನಿ ಅಯಿಷತ್ ರೆಹಮಾನ್ ಬಿ.ಎಂ ಎಂದು ನಮೂದಾಗಿದೆ. ಈ ವರದಿಯನ್ನು ಕ್ಯುಆರ್ ಬಾರ್ ಕೋಡ್ ಸ್ಕ್ಯಾನ್ ಮಾಡಿದಾಗ ಸ್ಕ್ಯಾನ್ ರಿಪೋರ್ಟ್ ನಲ್ಲಿ ಸರ್ಫುದ್ದೀನ್ ಎಂಬ ಹೆಸರು ನಮೂದಾಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ದಂಪತಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಯಿತು.
ರಾಜ್ಯದ ಗಡಿಯಲ್ಲಿ ಕೋವಿಡ್ ತಪಾಸಣೆ ತೀವ್ರವಾಗಿದೆ. ನೆಗೆಟಿವ್ ವರದಿಯನ್ನು ತೋರಿಸಿದರೆ ಮಾತ್ರ ಗಡಿ ಪ್ರವೇಶಕ್ಕೆ ಅವಕಾಶವಿರುವುದು ಎಂದು ತಿಳಿಯಿತು. ಪತ್ನಿಯ ತವರೂರು ಎಮ್ಮೆಮಾಡು ಗ್ರಾಮಕ್ಕೆ ಬರಬೇಕಿದ್ದ ಕಾರಣದಿಂದ ಮಂಜೇಶ್ವರದಲ್ಲಿ ನಕಲಿ ಆರ್.ಟಿ.ಪಿ.ಸಿ.ಆರ್ ಕೋವಿಡ್ ವರದಿಯನ್ನು ಸಿದ್ದಪಡಿಸಿಕೊಂಡು ಜಾಲ್ಸೂರು, ಸಂಪಾಜೆ, ಮಾರ್ಗವಾಗಿ ಎಮ್ಮೆಮಾಡುವಿಗೆ ಬಂದಿದ್ದೇನೆ. ನಂತರ ಸಿದ್ದಾಪುರ ಸ್ನೇಹಿತರ ಮನೆಗೆ ತೆರಳುತ್ತಿದ್ದೆ ಎಂದು ತನಿಖೆಯಲ್ಲಿ ಸೈಯದ್ ಮೊಹಮ್ಮದ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ದಂಪತಿ ನೀಡಿರುವ ಆರ್.ಟಿ.ಪಿ.ಸಿ.ಆರ್ ವರದಿ ನಕಲಿ ಎಂದು ತಿಳಿದ ಹಿನ್ನೆಲೆಯಲ್ಲಿ ಅಮ್ಮತ್ತಿ ಗ್ರಾಮ ಲೆಕ್ಕಿಗರಾದ ಬಿ.ಕೆ.ಪ್ರವೀಣ್ ಅವರು ನೀಡಿರುವ ದೂರಿನ ಮೇರೆಗೆ ದಂಪತಿ ವಿರುದ್ದ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಅಧಿನಿಯಮ 2020 ರ ಅನ್ವಯ ಪ್ರಕರಣ ದಾಖಲಾಗಿದೆ. ಕೇರಳದಿಂದ ಕೊಡಗಿಗೆ ಆಗಮಿಸಲು ಉಪಯೋಗಿಸಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ದಂಪತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Indresh KC

Recent Posts

ವಿಶ್ವದಲ್ಲೇ ಮೊದಲ ಬಾರಿಗೆ ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಸಾವು

ವಿಶ್ವದಲ್ಲೇ ಮೊದಲ ಬಾರಿಗೆ ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ 62 ವರ್ಷದ ರಿಚರ್ಡ್​ ಸ್ಲಾಯ್​​ಮನ್ ನಿಧನರಾಗಿದ್ದಾರೆ. ಕಳೆದ ಮಾರ್ಚ್​​ನಲ್ಲಿ ಅವರು…

17 mins ago

ಎಸ್‌ಐಟಿಯವರು ಅಪರಾಧಿಗಳನ್ನ ಬಂಧಿಸುತ್ತಿಲ್ಲ: ಬಸವರಾಜ ಬೊಮ್ಮಾಯಿ

ಪ್ರಜ್ವಲ್ ಪ್ರಕರಣದ ತನಿಖೆ ನಡೆಯುತ್ತಿರುವ ರೀತಿ ಸರಿ ಇಲ್ಲ. ಎಸ್‌ಐಟಿಯ ತನಿಖೆಯ ದಿಕ್ಕು ತಪ್ಪುತ್ತಿದೆ. ಅಪರಾಧಿಗಳನ್ನ ಎಸ್‌ಐಟಿಯವರು ಬಂಧಿಸುತ್ತಿಲ್ಲ. ಎಂದು…

34 mins ago

ಅಮ್ಮನ ಮೇಲಿನ ಪ್ರೀತಿಗಾಗಿ ಹೆಸರು ಬದಲಿಸಿಕೊಂಡ ವಿಜಯ್ ಸೂರ್ಯ

ತಾಯಿ ಎಂದರೆ ಮಮತೆಯ ಆಗರ, ತಾಯಿ ಎಂದರೆ ಕರುಣೆಯ ಕಡಲು, ತಾಯಿ ಎಂದರೆ ಪ್ರೀತಿಯ ಸೆಲೆ... ಹೀಗೆ ತಾಯಿಯ ಬಗ್ಗೆ…

39 mins ago

ಮಲ್ಲಿಕಾರ್ಜುನ ಖರ್ಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪರಿಶೀಲಿಸಿದ ಚುನಾವಣಾ ಅಧಿಕಾರಿಗಳು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.

1 hour ago

ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಸಂಸ್ಕಾರ ಕಲಿಸಿ : ರವಿ ಶಾಸ್ತ್ರಿ

ಮಕ್ಕಳಿಗೆ ಆಸ್ತಿ ಮಾಡಿ ಇರಿಸುವುದರ ಬದಲು ಮಕ್ಕಳನ್ನು ವಿದ್ಯಾವಂತರನ್ನಾಗಿ ಸಂಸ್ಕಾರವಂತರನ್ನಾಗಿ ಮಾಡಿದರೆ ಅದುವೇ ದೊಡ್ಡ ಆಸ್ತಿ ಎಂದು ಶ್ರೀ ಕೃಷ್ಣ…

1 hour ago

ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಲೋಕಾರ್ಪಣೆ

ಮಾಂಡ್ ಸೊಭಾಣ್ ಪ್ರಕಾಶನದ 22 ನೇ ಪುಸ್ತಕ ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಉಲ್ಲಾಳ ಸೋಮೇಶ್ವರದಲ್ಲಿರುವ…

2 hours ago