Categories: ಮಡಿಕೇರಿ

ಟಾಟಾ ಸಂಸ್ಥೆಯ ಸ್ವಾಧೀನದಲ್ಲಿರುವ 1300 ಎಕರೆ ಸರಕಾರದ ವಶಕ್ಕೆ ಪಡೆಯಲು ಕೋರ್ಟ್‌ ಆದೇಶ

ಮಡಿಕೇರಿ: ಟಾಟಾ ಸಂಸ್ಥೆಯ ಸ್ವಾಧೀನದಲ್ಲಿರುವ 1300 ಎಕರೆ ಕಾಫಿ ತೋಟವನ್ನು ಈ ಸಂಸ್ಥೆಯಿಂದ ಮರಳಿ ಸರಕಾರದ ವಶಕ್ಕೆ ಪಡೆಯುವಂತೆ ವೀರಾಜಪೇಟೆ, ಸಿವಿಲ್ ನ್ಯಾಯಾಲಯದಿಂದ ಐತಿಹಾಸಿಕವಾದ ಮಹತ್ವದ ತೀರ್ಪು ಹೊರಬಿದ್ದಿದೆ. ಟಾಟಾ ಸಂಸ್ಥೆ ಹಾಗೂ ಸರಕಾರದ ನಡುವಿನ ಈ ಜಾಗದ ವಿವಾದಕ್ಕೆ ತೆರೆ ಬಿದ್ದಂತಾಗಿದ್ದು, ಸರಕಾರದ ‘ಪರವಾಗಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಈ ಕುರಿತಂತೆ ಕಳೆದ ಹಲವು ವರ್ಷಗಳಿಂದ ವ್ಯಾಜ್ಯ ನಡೆಯುತ್ತಿದ್ದ ಟಾಟಾ ಸಂಸ್ಥೆಗೆ ವೀರಾಜಪೇಟೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ ಜಿ ಲೋಕೇಶ ಅವರು ತಾ. 3ರಂದು ತೀರ್ಪು ಪ್ರಕಟಿಸಿದ್ದು, ಅದರ ನಡುವೆ ಈ ಹಿಂದಿನ ದಾಖಲೆಯಲ್ಲಿ ಇದ್ದ ಪೈಸಾರಿ – ಮೀಸಲು ಅರಣ್ಯ ಎಂಬದನ್ನು ಸಂಸ್ಥೆಯು  ರೆಡೀಮ್ಡ್‌  ಸಾಗು ಎಂದು ಬದಲಾಯಿಸಿಕೊಂಡಿತ್ತು.

ದಿನಾಂಕ 7.4.2006ರಲ್ಲಿ ಕರ್ನಾಟಕ ಸರಕಾರದ ಅರಣ್ಯ ಮತ್ತು ಜೀವಶಾಸ್ತ್ರ ಇಲಾಖೆ ಇದನ್ನು ಒಪ್ಪದೆ ಕಾನೂನು ಬಾಹಿರವಾಗಿ ಆರ್‌.ಟಿ.ಸಿಯಲ್ಲಿ, ಎಂಸಿಯಲ್ಲಿ ಟೆನ್ಯೂರ್‌  ನಿಬಂಧನೆಯನ್ನು ರೆಡೀಮ್ ಸಾಗು ಎಂದು ಮಾಡಿದೆ ಎಂದು ಮತ್ತು ಮೂಲವಾಗಿ 1914ರ ಸಂದರ್ಭದಲ್ಲಿ ಗಣಿ ಕೊಡುವಾಗ ಇದ್ದಂತೆ ಇದನ್ನು ಮತ್ತು ಸರಿಪಡಿಸಿ, ಅರಣ್ಯ ಮತ್ತು ಮೀಸಲು ಅರಣ್ಯವೆಂದು
ಸರಿಪಡಿಸುವಂತೆ ಸೂಚಿಸಿದ್ದು, ಅದನ್ನು ಕಂದಾಯ ದಾಖಲೆಗಳಲ್ಲಿ ಅದೇ ರೀತಿಯಾಗಿ ಸರಿಪಡಿಸಲಾಗಿತ್ತು.

ಇದನ್ನು ಪ್ರಶ್ನಿಸಿ  ಟಾಟಾ ಕಂಪನಿ ಹಾಗೂ ಗನ್ ರ್ಲೋ ವಾಂಟೇಷನ್‌ನವರು ರಾಜ್ಯ ಉಚ್ಛನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಸದರಿ ತಿಮ್ಮಾಪಡಿ ಆದೇಶವನ್ನು ರದ್ದುಪಡಿಸುವಂತೆ ಕೋರಿದ್ದರು. ರಾಜ್ಯ ಉಚ್ಚ ನ್ಯಾಯಾಲಯ ಈ ಪ್ರಕರಣವನ್ನು ಮತ್ತೆ ವೀರಾಜಪೇಟೆ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಇದೀಗ ವಿಚಾರಣೆ ಬಳಿಕ ಈ ಅರ್ಜಿ ವಜಾಗೊಂಡಿದೆ.

1914 ಮತ್ತು 1915ರ ಸಂದರ್ಭದಲ್ಲಿ ಆಗಿನ ಬ್ರಿಟಿಷ್ ಸರಕಾರ ಮಕ್ ಡೊಗಲ್ ರೈನ್ ಲೋರ್ನಾ ಲಿಮಿಟೆಡ್‌ಗ ಸುಮಾರು 1300ಕ್ಕೂ ಅಧಿಕ ಎಕರೆ ಪೈಸಾರಿ ಜಾಗವನ್ನು ಟೀ ಸಾಗುವಳಿಗೆ 499 ವರ್ಷಗಳ ಲೀಸ್ ಆಧಾರದಲ್ಲಿ ಒಪ್ಪಂದದಂತೆ ಬಿಟ್ಟುಕೊಟ್ಟಿತ್ತು. ಆ ಸಮಯದಲ್ಲಿ ಇದಕ್ಕೆ ಲೀಸ್‌ರೆಂಟ್ (ಬಾಡಿಗೆ ದರ) ನಿಗದಿ ಮಾಡಲಾಗಿತ್ತು.

ನಂತರದ ದಿನದಲ್ಲಿ ಅದನ್ನು ತಿದ್ದುಪಡಿ ಮಾಡುವ ಮತ್ತು ಲೀಸ್ ಅವಧಿಯನ್ನು ಕಾಲಕಾಲಕ್ಕೆ ಬದಲಾವಣೆ ಮಾಡುವ ಅಧಿಕಾರವನ್ನು ಅಂದಿನ ಸರಕಾರ ತನ್ನ ಬಳಿ ಇಟ್ಟುಕೊಂಡಿತ್ತು, ಇದರೊಂದಿಗೆ ಮರಗಳನ್ನು ಕತ್ತರಿಸಿ ಮರದ ಮೌಲ್ಯವನ್ನು ಅರಣ್ಯ ಇಲಾಖೆಯಿಂದ  ನಿಗಡಿಪಡಿಸಿ ಅದನ್ನು ಸರಕಾರಕ್ಕೆ ಕಟ್ಟುವಂತೆಯೂ  ನಿರ್ಬಂಧವಿತ್ತು. ಇದಲ್ಲದೆ ಸರಕಾರದ ಸ್ಥಳೀಯ ನೀತಿಯಂತೆ    ಸ್ಥಳೀಯ ಕರವನ್ನು ಸಹ ಸದರಿ ಕಂಪನಿ ಪಾವತಿಸಬೇಕಾಗಿತ್ತು.

ಆದರೆ ಈ ನಡುವೆ ಪೈಸಾರಿ ಎಂದು ಆರ್‌ಟಿಸಿಯಲ್ಲಿದ್ದ ಟೆನ್ಯೂರ್‌ (ನಿಬಂಧನೆ) ಅನ್ನು ಕಾನೂನು ಬಾಹಿರವಾಗಿ   ರೆಡೀ ಸಾಗು ಲ್ಯಾಂಡ್ ಎಂದು ಸರಕಾರದ ಯಾವುದೇ   ಆದೇಶವಿಲ್ಲದೆ ಬದಲಾಯಿಸಲಾಗಿದೆ ಎಂದು ಸರಕಾರ   ಪ್ರಸ್ತಾಪಿಸಿತ್ತು.ಟಾಟಾ ಸಂಸ್ಥೆ ಹಾಗೂ ಗ್ರೆನ್ ಲೋರ್ನಾ ಕಂಪೆನಿ ಮೂಲಕ ಹೂಡಿದ್ದ ಎರಡು ದಾವೆಗಳನ್ನು ವಜಾಗೊಳಿಸಿದ್ದಾರೆ.

ಈ ಜಾಗಕ್ಕೆ ಸಂಬಂಧಿಸಿದಂತೆ ಮುಂದಿನ ಸೂಕ್ತ ಕ್ರಮವನ್ನು ವಹಿಸಲು ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ನ್ಯಾಯಾಲಯ ಸೂಚನೆ ನೀಡಿದೆ. ಸರಕಾರದ ಪರವಾಗಿ ಈ ಬಗ್ಗೆ ಅಪರ ಸರಕಾರಿ ವಕೀಲರಾದ ಕಂಜಿತಂತ ಅನಿತ ದೇವಯ್ಯ ಅವರು ವಾದ ಮಂಡಿಸಿದ್ದಾರೆ.

ವಿವಾದಕ್ಕೆ ಸಂಬಂಧಿಸಿದಂತೆ ವೀರಾಜಪೇಟೆ ತಹಶೀಲ್ದಾರರಾದ ಯೋಗಾನಂದ ಅವರು ಸಾಕಷ್ಟು ಆಧಾರಗಳ ಸಹಿತವಾಗಿ ಸಾಕ್ಷಿದಾರರಾಗಿ ಹೇಳಿಕೆ ನೀಡಿದ್ದು, ಇವುಗಳನ್ನು ಹಾಗೂ ವಕೀಲರ ವಾದವನ್ನು ಎತ್ತಿಹಿಡಿದ ನ್ಯಾಯಾಲಯ ಐತಿಹಾಸಿಕವಾದ ತೀರ್ಪನ್ನು ನೀಡಿದ್ದು ಸಾವಿರಗಟ್ಟಲೆ ಎಕರೆ ಜಾಗವನ್ನು ಸರಕಾರದ ವಶಕ್ಕೆ ಪಡೆಯಲು ಆದೇಶ ನೀಡಿದೆ.

Sneha Gowda

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

5 hours ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

5 hours ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

5 hours ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

6 hours ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

6 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

6 hours ago