Categories: ಮಡಿಕೇರಿ

ಕೋವಿಡ್ ಸಂಕಷ್ಟದ ನಡುವೆಯೂ ಜಿಲ್ಲೆಯಲ್ಲಿ‌ ಏರಿಕೆ ದಾಖಲಿಸಿದ ವಾಹನ ನೋಂದಾವಣೆ

ಮಡಿಕೇರಿ ; ದೇಶಾದ್ಯಂತ ಕೋವಿಡ್ ಕಾರಣದಿಂದಾದ ಲಾಕ್ ಡೌನ್ ನಿಂದ ಆರ್ಥಿಕತೆ ಕುಸಿದಿದೆ. ಲಕ್ಷಾಂತರ ಉದ್ಯೋಗ ನಷ್ಟವಾಗಿದೆ. ವಿವಿಧ ಉದ್ಯಮಗಳು ನಷ್ಟ ಅನುಭವಿಸಿವೆ. ಆದರೆ ಪುಟ್ಟ ಜಿಲ್ಲೆ ಕೊಡಗಿನಲ್ಲಿ  ಕೋವಿಡ್ ನಿಂದಾಗಿ ಗಣನೀಯವಾದ ಆರ್ಥಿಕ ಹಾನಿ ಸಂಬವಿಸಿಲ್ಲವೆಂಬುದು  ಪ್ರಾದೇಶಿಕ ಸಾರಿಗೆ ಕಚೇರಿಯ  ಅಂಕಿ ಅಂಶ ಸ್ಪಷ್ಟಪಡಿಸಿದೆ. ಏಕೆಂದರೆ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ನೂತನ ವಾಹನಗಳ  ನೋಂದಾವಣಾ ಸಂಖ್ಯೆ  ಏರಿಕೆಯನ್ನೇ ದಾಖಲಿಸುತ್ತಿದೆ.

ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಮಾರ್ಚ್ 31 ಕ್ಕೆ ಕೊನೆಗೊಂಡ  2021-22 ರ ಹಣಕಾಸು ವರ್ಷದಲ್ಲಿ  ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆ ಶೇಕಡಾ 94.65 ರಷ್ಟು ಗುರಿ ಸಾಧಿಸಿದೆ. ಈ ವರ್ಷದಲ್ಲಿ ಇಲಾಖೆಗೆ ಒಟ್ಟು 53.78 ಕೋಟಿ ರೂಪಾಯಿಗಳಷ್ಟು ಆದಾಯ ಬಂದಿದೆ. 2019-20 ನೇ ಸಾಲಿನಲ್ಲಿ  ಇಲಾಖೆ ಒಟ್ಟು 47.38 ಕೋಟಿ ರೂಪಾಯಿಗಳಷ್ಟು ಆದಾಯ ಗಳಿಸಿ ಶೇಕಡಾ 91.51 ರಷ್ಟು ಗುರಿ ಸಾಧಿಸಿತ್ತು. 2020-21 ನೇ ಸಾಲಿನಲ್ಲಿ ಶೇಕಡಾ 84.37 ರಷ್ಟು ಗುರಿ ಸಾದಿಸಿ  43.73 ಕೋಟಿ ರೂಪಾಯಿಗಳಷ್ಟು  ವಾಹನ ತೆರಿಗೆ ಸಂಗ್ರಹ ಮಾಡಿದೆ. ಇನ್ನು ವಾಹನಗಳ ಸಂಖ್ಯೆಯ ಬಗ್ಗೆ ನೋಡುವುದಾದರೆ  2019-20 ನೇ ಸಾಲಿನಲ್ಲಿ  ಒಟ್ಟು 6076  ದ್ವಿ ಚಕ್ರ ವಾಹನಗಳು, 1805 ಕಾರುಗಳು, 482 ಆಟೋ ರಿಕ್ಷಾಗಳು , 374 ಸರಕು ಸಾಗಣೆ ವಾಹನಗಳು, 70 ಟ್ರಾಕ್ಟರ್ ಗಳು , 19 ಜೀಪುಗಳು ಸೇರಿದಂತೆ ಒಟ್ಟು 9110 ನೂತನ ವಾಹನಗಳು ನೋಂದಣಿ ಆಗಿದ್ದವು. 2020-21 ನೇ ಸಾಲಿನಲ್ಲಿ  ದ್ವಿಚಕ್ರ ವಾಹನಗಳ ಸಂಖ್ಯೆಯಲ್ಲಿ ಕುಸಿತ ಆಗಿದ್ದು ಒಟ್ಟು 4960 ದ್ವಿ ಚಕ್ರ ವಾಹನಗಳು , 1886 ಕಾರುಗಳು , 135 ಆಟೋ ರಿಕ್ಷಾಗಳು , 309 ಸರಕು ಸಾಗಾಟ ವಾಹನಗಳು 68 ಟ್ರಾಕ್ಟರ್ ಗಳು  ಸೇರಿದಂತೆ ಒಟ್ಟು 7494 ವಾಹನಗಳು ನೋಂದಣಿ ಆಗಿವೆ.
ಕಳೆದ ಮಾರ್ಚ್ 31 ಕ್ಕೆ ಕೊನೆಗೊಂಡ 2021-22 ರ  ಹಣಕಾಸು ವರ್ಷದಲ್ಲಿ  ಒಟ್ಟು 5268 ದ್ವಿಚಕ್ರ ವಾಹನಗಳು , 2417 ಕಾರುಗಳು , 133 ಆಟೋ ರಿಕ್ಷಾಗಳು, 377 ಸರಕು ಸಾಗಾಟ ವಾಹನಗಳು ಮತ್ತು 90 ಟ್ರಾಕ್ಟರ್ ಗಳೂ ಸೇರಿದಂತೆ ಒಟ್ಟು 8526 ವಾಹನಗಳು ನೋಂದಾವಣೆ ಆಗಿವೆ.

2020 ರ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ  ಒಟ್ಟು ವಾಹನಗಳ ಸಂಖ್ಯೆ 9110 ಆಗಿದ್ದರೂ  ಕಳೆದ ಹಣಕಾಸು ವರ್ಷದಲ್ಲಿ  8526 ವಾಹನಗಳು ನೋಂದಣಿ ಆಗಿದ್ದು ಕಳೆದ ವರ್ಷದ ಮೇ ಹಾಗೂ ಜೂನ್ ತಿಂಗಳಿನಲ್ಲಿ ಸರ್ಕಾರ ಕೋವಿಡ್ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ  ಎರಡು ತಿಂಗಳ ಕಾಲ ಯಾವುದೇ ವಾಹನ ನೋಂದಾವಣೆ ಆಗಿಲ್ಲ. ಲಾಕ್ ಡೌನ್ ಇಲ್ಲದಿದ್ದರೆ  ಒಟ್ಟು ವಾಹನಗಳ ಸಂಖ್ಯೆ 9 ಸಾವಿರ ಮೀರುತಿತ್ತು ಎಂದು ಆರ್ಟಿಓ
ಅಧಿಕಾರಿಯೊಬ್ಬರು ತಿಳಿಸಿದರು. ಕೊಡಗು ಜಿಲ್ಲೆಯು 6 ವರ್ಷಗಳ ಹಿಂದೆ ನೂತನ ವಾಹನ ನೋಂದಾವಣೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿತ್ತು.ಅಲ್ಲದೆ ಗುರಿ ಮೀರಿದ ಸಾಧನೆ ಮಾಡಿತ್ತು. ಜಿಲ್ಲೆಯ ಜನರು ಕಾರು ಖರೀದಿಯಲ್ಲಿ ಹೆಚ್ಚಿನ ಆಸಕ್ತಿ ತೋರುತಿದ್ದಾರೆ ಎಂದು ಅಂಕಿ ಅಂಶ ತಿಳಿಸಿದೆ.

ಮೂರು ವರ್ಷದ ಹಿಂದೆ 1805 ಹೊಸ ಕಾರುಗಳು ನೋಂದಣಿ ಆಗಿದ್ದರೆ  ಕೋವಿಡ್  ನಡುವೆಯೂ ಕಳೆದ ವರ್ಷ ಈ ಸಂಖ್ಯೆ ಶೇಕಡಾ 33 ಕ್ಕೂ ಹೆಚ್ಚು ಏರಿಕೆ ಆಗಿ 2417 ಹೊಸ ಕಾರುಗಳು ನೋಂದಣಿ ಆಗಿವೆ. ಈ ಹೊಸ ಕಾರುಗಳಲ್ಲಿ 85 ಲಕ್ಷ ರೂಪಾಯಿಗಳಿಗೂ ಅಧಿಕ ಮೌಲ್ಯದ ಬಿಎಂಡಬ್ಲ್ಯೂ ತಯಾರಿಕೆಯ ಹಲವು ಕಾರುಗಳೂ ಜಿಲ್ಲೆಯಲ್ಲಿ ನೋಂದಾಯಿಸಿವೆಯಾದರೂ ಇಲಾಖೆ ಬಳಿ ನಿಖರ ಮಾಹಿತಿ ಲಭ್ಯವಿಲ್ಲ. ಜಿಲ್ಲೆಯಲ್ಲಿ ಈಗ ಒಟ್ಟು 2,11,540 ವಾಹನಗಳಿವೆ ಎಂದು ಸಾರಿಗೆ ಇಲಾಖೆ  ಮಾಹಿತಿ ನೀಡಿದೆ. 2011 ರ ಜನಗಣತಿಯ ಪ್ರಕಾರ ಕೊಡಗಿನ ಜನಸಂಖ್ಯೆ 5.54 ಲಕ್ಷ. ಹತ್ತು ವರ್ಷಗಳಲ್ಲಿ ಕನಿಷ್ಟ 6 ಲಕ್ಷ ಮೀರಿದೆ ಎಂದು ಇಟ್ಟುಕೊಂಡರೂ ಪ್ರತೀ ಮೂರು ಮಂದಿಗೆ ಒಂದು ವಾಹನ ಇದ್ದಂತಾಗಿದೆ. ಇದು ರಾಜ್ಯದಲ್ಲಿ ಅತ್ಯಧಿಕ ವಾಹನ ಸಾಂದ್ರತೆ ಹೊಂದಿರುವ
ಜಿಲ್ಲೆಗಳಲ್ಲಿ ಒಂದಾಗಿದೆ.

Swathi MG

Recent Posts

ಭೂದೇವಿ ಸಮೇತ ಶ್ರೀಲಕ್ಷ್ಮಿವರಾಹಸ್ವಾಮಿಗೆ ಅಭಿಷೇಕ

ವರಹಾ ಜಯಂತಿಯ ಅಂಗವಾಗಿ ಕೃ?ರಾಜಪೇಟೆ ತಾಲ್ಲೂಕಿನ ಕಲ್ಲಹಳ್ಳಿಯ ಭೂದೇವಿ ಸಮೇತ ಶ್ರೀಲಕ್ಷ್ಮಿ ಭೂವರಾಹಸ್ವಾಮಿಯ ಶಿಲಾಮೂರ್ತಿಗೆ ವಿಶೇ? ಅಭಿ?ಕ ನಡೆಯಿತಲ್ಲದೆ, ಸ್ವಾಮಿಯ…

5 hours ago

ನನ್ನ ವಿರುದ್ಧ ದೇವರಾಜೇಗೌಡ ಮಾಡಿರುವ ಆಪಾದನೆಗಳು ಆಧಾರ ರಹಿತ: ಡಿಕೆ ಶಿವಕುಮಾರ್

ಹಾಸನ ವಿಡಿಯೋ ಪೆನ್​ಡ್ರೈವ್​ ಸೂತ್ರಧಾರಿ ಡಿಕೆ ಶಿವಕುಮಾರ್ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿ ಆಡಿಯೋವೊಂದನ್ನು…

5 hours ago

ರಾಜ್ಯದ ಹಲವೆಡೆ ಮುಂದಿನ 5 ದಿನಗಳ ಕಾಲ‌ ಗುಡುಗು ಸಹಿತ ಮಳೆ ಸಾಧ್ಯತೆ

ರಾಜ್ಯದ ಹಲವೆಡೆ ಇಂದಿನಿಂದ ಮೇ 11ರವರೆಗೆ ವರುಣ ಆಗಮನ ಆಗುವ ಮುನ್ಸೂಚನೆ. ಹಾಗೂ ಮುಂದಿನ 5 ದಿನಗಳ ಕಾಲ‌ ಗುಡುಗು…

6 hours ago

ಬೀದರ್ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರು ಮಾವಿನ ಹಣ್ಣಿನ ದರ್ಬಾರ್‌

ಯುಗಾದಿ ಮುಗಿಯುತ್ತಿದ್ದಂತೆ ಎಲ್ಲೆಡೆ ಮಾವಿನ ಹಣ್ಣುಗಳ ದರ್ಬಾರ ಕಂಡುಬರುತ್ತಿದೆದೆ. ಮಾರುಕಟ್ಟೆಗೆ ಮಾವಿನಕಾಯಿ ಹೆಚ್ಚಾಗಿ ಬರುತ್ತಿದೆ. ಸಾಲಾಗಿ ಜೋಡಿಸಿಟ್ಟ ಮಾವಿನ ಹಣ್ಣು…

6 hours ago

ಬಾಲಕಿ ಮೇಲೆ 2 ರಾಟ್‌ವೀಲರ್ ನಾಯಿಗಳಿಂದ ದಾಳಿ: ಮಾಲೀಕ ಅರೆಸ್ಟ್

ಎರಡು ರಾಟ್‌ವೀಲರ್ ನಾಯಿಗಳು ಐದು ವರ್ಷದ ಬಾಲಕಿ ಮೇಲೆ ದಾಳಿ ಮಾಡಿದ ಘಟನೆ ಚೆನ್ನೈನ ಥೌಸಂಡ್ ಲೈಟ್ಸ್ ಪ್ರದೇಶದ ಸಾರ್ವಜನಿಕ…

6 hours ago

ಬೀದರ್: ಬಿಸಿಲಿನ ಝಳಕ್ಕೆ ಚುನಾವಣೆ ಸಿಬ್ಬಂದಿ ತತ್ತರ

ಮಂಗಳವಾರ ನಡೆಯಲಿರುವ ಲೋಕಸಭೆ ಚುನಾವಣೆಗೆ ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸೋಮವಾರ ಮಧ್ಯಾಹ್ನದಿಂದಲೇ ಕರ್ತವ್ಯ ನಿರತ ಸಿಬ್ಬಂದಿ ಮತಗಟ್ಟೆಗೆ…

7 hours ago