News Karnataka Kannada
Friday, April 12 2024
Cricket
ಮಡಿಕೇರಿ

ರಾಷ್ಟ್ರಪತಿಗಳ ಎಡಿಸಿಯಾಗಿ ಲೆ| ಜ| ಕೋದಂಡ ಕಾರ್ಯಪ್ಪ ನಿಯುಕ್ತಿ

Untitled 211
Photo Credit :

ಮಡಿಕೇರಿ: ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥರೂ ಆಗಿರುವ ದೇಶದ ರಾಷ್ಟ್ರಪತಿಗಳ ಪರ್ಸನೆಲ್‌ ಆಫೀಸರ್‌ ಆಗಿ ಕೊಡಗಿನವರಾದ ಲೆಫ್ಟಿನೆಂಟ್‌ ಜನರಲ್‌ ಕೋದಂಡ ಪಿ. ಕಾರ್ಯಪ್ಪ ಅವರು ನಿಯುಕ್ತಿಗೊಂಡಿದ್ದಾರೆ.

ಇದೊಂದು ಗೌರವಯುತವಾದ ಸ್ಥಾನವಾಗಿದ್ದು, ಸೇನಾ ಜಿಲ್ಲೆ ಖ್ಯಾತಿಯ ಕೊಡಗಿಗೆ ಮತ್ತೂಂದು ಹಿರಿಮೆಯಾಗಿದೆ.

ಲೆ| ಜ| ಕೋದಂಡ ಕಾರ್ಯಪ್ಪ ಅವರು ಕೆಲವು ಸಮಯದ ಹಿಂದೆ ಹೊಸದಾಗಿ ಸೃಷ್ಟಿಯಾಗಿರುವ ಮಾಸ್ಟರ್‌ ಜನರಲ್‌ ಸಸ್ಟೆನೆನ್ಸ್‌ (ಎಂಜಿಎಸ್‌) ಆಗಿಯೂ ಅಲ್ಲದೆ ಪ್ರಿನ್ಸಿಪಲ್‌ ಸ್ಟಾಫ್ ಆಫೀಸರ್‌ ಟು ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿಯೂ ನಿಯುಕ್ತಿಗೊಂಡಿದ್ದರು. ಮಾತ್ರವಲ್ಲದೆ ರಜಪೂತ್‌ ರೈಫ‌ಲ್ಸ್‌ನ ಮುಖ್ಯಸ್ಥರೂ ಇವರಾಗಿದ್ದಾರೆ. ಇದೀಗ ಈ ಸ್ಥಾನದೊಂದಿಗೆ ಕಾರ್ಯಪ್ಪ ಅವರು ರಾಷ್ಟ್ರಪತಿಗಳ ಎಡಿಸಿಯಾಗಿಯೂ ನೇಮಕಗೊಂಡಿದ್ದು, ಮಾಸ್ಟರ್‌ ಜನರಲ್‌ ಸಸ್ಟೆನೆನ್ಸ್‌ (ಸಶಸ್ತ್ರ ವಿಭಾಗ) ಪ್ರಥಮ ಅಧಿಕಾರಿಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು