News Karnataka Kannada
Tuesday, April 23 2024
Cricket
ಮಡಿಕೇರಿ

ಮೂಕನಮನೆ ಜಲಪಾತಕ್ಕೆ ಪ್ರವಾಸ ತೆರಳಿದ್ದ ಜಿಲ್ಲೆಯ ಇಬ್ಬರು ಯುವಕರು ನೀರು ಪಾಲು

Pete
Photo Credit :

ಮಡಿಕೇರಿ  ; ಸಕಲೇಶಪುರ ತಾಲ್ಲೂಕಿನ ಮೂಕನಮನೆ ಜಲಪಾತಕ್ಕೆ ಪ್ರವಾಸ ತೆರಳಿದ್ದ ಈರ್ವರು ಯುವಕರು ನೀರು ಪಾಲಾಗಿರುವ ಘಟನೆ ಸೋಮವಾರ ನಡೆದಿದೆ.

ಕೊಡ್ಲಿಪೇಟೆಯಿಂದ ಸುಮಾರು 35 ಕಿಲೋಮೀಟರ್ ದೂರ ಇರುವ ಜಲಪಾತ ವೀಕ್ಷಣೆಗೆ ನಾಲ್ಕು ಜನರ ತಂಡವು ತೆರಳಿತ್ತು. ಅಲ್ಲಿಯೇ ಊಟ ಮಾಡಿದ ತಂಡ ದಟ್ಟಾರಣ್ಯದಲ್ಲಿರುವ ಮೂಕನಮನೆ ಜಲಪಾತದ ಸಮೀಪದ ಸೇತುವೆ ಬಳಿ ಈಜಲು ತೆರಳಿತ್ತು.

ಆಧರೆ ಈಜಲು ಬಾರದಿದ್ದ ಓರ್ವ ಯುವಕ ನೀರಿನಲ್ಲಿ ಮುಳುಗತೊಡಗಿದ ಎನ್ನಲಾಗಿದೆ. ಆಗ ಆತನನ್ನು ರಕ್ಷಿಸಲು ತೆರಳಿದ ಮತ್ತೋರ್ವ ಯುವಕನೂ ನೀರು ಪಾಲಾಗಿದ್ದಾನೆ ಎನ್ನಾಳಗಿದೆ. ಮೃತರನ್ನು ಕೊಡ್ಲಿಪೇಟೆ ಪಟ್ಟಣ ನಿವಾಸಿ ಕುಮಾರ ಬಿನ್ ಸ್ವಾಮಿಗೌಡ, 38 ವರ್ಷ, ಒಕ್ಕಲಿಗ ಹಾಗೂ ಕೊಡ್ಲಿಪೇಟೆ ಪಟ್ಟಣ ನಿವಾಸಿ ಕಿಶೋರ ಬಿನ್ ಶ್ರೀನಿವಾಸ, 34 ವರ್ಷ ಎಂದು ಗುರುತಿಸಲಾಗಿದೆ.

ಈ ಘಟನೆ ಮದ್ಯಾಹ್ನ 1.30-2 ಘಂಟೆ ಸುಮಾರಿಗೆ ನಡೆದಿದೆ. ಸ್ಥಳಕ್ಕೆ ಯಸಳೂರು ಪೋಲೀಸ್‌ ಸಬ್‌ ಇನ್ಸ್ ಪೆಕ್ಟರ್‌ ಬ್ಯಾಟರಾಯ ಗೌಡ ಅವರು ಭೇಟಿ ನೀಡಿ ಮೃತ ದೇಹಗಳನ್ನು ಹೊರ ತೆಗೆಯುವ ಕಾರ್ಯಾಚರಣೆ ಕೈಗೊಂದರು.

ಸ್ಥಳೀಯ ಗ್ರಾಮಸ್ಥರು ಹಾಗೂ ಪೋಲೀಸರ ತಂಡ ಮೃತ ದೇಹಕ್ಕಾಗಿ ಹುಡುಕಾಟ ನಡೆಸಿ ಸಂಜೆ 6 ಘಂಟೆಯ ವೇಳೆಗೆ ಮೃತ ದೇಹಗಳನ್ನು ಪತ್ತೆ ಹಚ್ಚಿ ಹೊರತೆಗೆದು ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಲು ಕೊಂಡೊಯ್ಯಲಾಗಿದೆ.

ಯಸಳೂರು ಪೋಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಮೇಲ್ನೋಟಕ್ಕೆ ಸೌಮ್ಯವಾಗಿ ಕಾಣುವ ಜಲಪಾತದ ಕೆಳಗೆ ನೀರಿನ ಅಳವು ಹೆಚ್ಚಾಗಿದ್ದು ಎಷ್ಟು ಎಚ್ಚರಿಕೆ ನೀಡಿದ್ದರು ಸಹ ಜನರು ನೀರಿಗಿಳಿದು ಪ್ರಣ ಕಳೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು