News Karnataka Kannada
Wednesday, April 17 2024
Cricket
ಮಡಿಕೇರಿ

ಮಡಿಕೇರಿ ವಿಧಾನ ಸಭಾ ಕ್ಷೇತ್ರ    ಕಾಂಗ್ರೆಸ್‌ ಅಭ್ಯರ್ಥಿಯಾಗಿ  ಬಿ ಏ ಜೀವಿಜಯ

Madikeri
Photo Credit :

ಮಡಿಕೇರಿ ಏಪ್ರಿಲ್‌ 12 ;  ಮುಂದಿನ ವಿಧಾನ ಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಸಮಯ ಇರುವಾಗಲೇ ಚುನಾವಣೆ ಗೆಲ್ಲಲು ಕಾಂಗ್ರೆಸ್‌ ಪಕ್ಷ ಈಗಲೇ ರಣ ತಂತ್ರವನ್ನು ರೂಪಿಸಲು ಮುಂದಾಗಿದೆ.

ಚುನಾವಣಾ ಸಂದರ್ಭದಲ್ಲಿ ಒಬ್ಬರಿಗಿಂತ  ಹಚ್ಚು ಟಿಕೆಟ್‌ ಆಕಾಂಕ್ಷಿಗಳು  ಟಿಕೆಟ್‌ಗಾಗಿ ಲಾಬಿ ನಡೆಸುವುದು ಮತ್ತು ಕೊನೆ ಕ್ಷಣದಲ್ಲಿ ಪಕ್ಷದ ಹೈಕಮಾಂಡ್‌ ಟಿಕೆಟ್‌ ಘೋಷಣೆ ಮಾಡುವುದರಿಂದ ಗೆಲ್ಲಲು ಹಿನ್ನಡೆ ಆಗುವ  ಹಿನ್ನೆಲೆಯಲ್ಲಿ ಒಮ್ಮತದ ಅಭ್ಯರ್ಥಿಯಾಗಿ ಹಿರಿಯ ಮಾಜಿ ಸಚಿವ ಬಿ ಏ ಜೀವಿಜಯ ಅವರನ್ನ ಒಮ್ಮತದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು
ನಿರ್ಧರಿಸಿರುವುದಾಗಿ  ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾದ್ಯಕ್ಷ ಕೆ ಎಂ ಲೋಕೇಶ್‌  ಕುಮಾರ್‌ ತಿಳಿಸಿದರು.

ಸೋಮವಾರಪೇಟೆಯಲ್ಲಿ ಪತ್ರಿಕಾ ಗೋ಼ಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾವು ಮತ್ತು ಕೆಪಿಸಿಸಿ ಸದಸ್ಯೆ  ಕೆ ಪಿ ಚಂದ್ರಕಲಾ ಅವರೂ  ಟಿಕೆಟ್‌ ಆಕಾಂಕ್ಷಿಗಳಾಗಿದ್ದು  ಈಗ ಇಬ್ಬರೂ  ಜೀವಿಜಯ ಅವರನ್ನು ಬೆಂಬಲಿಸಿ ಟಿಕೆಟ್‌ ಗಾಗಿ  ಪ್ರಯತ್ನಿಸದಿರಲು ನಿರ್ಧರಿಸಿರುವುದಾಗಿ ಹೇಳಿದರು.

ಅಲ್ಲದೆ ಇನ್ನೋರ್ವ ಟಿಕೆಟ್‌ ಆಕಾಂಕ್ಷಿ ಮಾಜಿ ಅಡ್ವೋಕೇಟ್‌ ಜನರಲ್‌ ಹೆಚ್‌ ಎಸ್‌ ಚಂದ್ರ ಮೌಳಿ ಅವರೂ ಜೀವಿಜಯ ಅವರನ್ನು ಬೆಂಬಲಿಸಲಿರುವುದಾಗಿ ತಿಳಿಸಿದರು. ಕುಶಾಲನಗರ ಬ್ಲಾಕ್‌ ಕಾಂಗ್ರೆಸ್‌ ಅದ್ಯಕ್ಷ  ಅನಂತ್‌ ಮತ್ತು ಸೋಮವಾರಪೇಟೆ ಬ್ಲಾಕ್‌  ಕಾಂಗ್ರೆಸ್‌ ಅದ್ಯಕ್ಷ ಬಿ ಬಿ ಸತೀಷ್‌ ಅವರೂ ಜೀವಿಜಯ ಅವರ ಉಮೇದುವಾರಿಕೆಗೆ ಬೆಂಬಲ ವ್ಯಕ್ತಪಡಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಜೀವಿಜಯ ಅವರು  ಕಾಂಗ್ರೆಸ್‌ ಪಕ್ಷವು ಸರ್ವ ಜನಾಂಗವನ್ನೂ ಸಮನಾಗಿ ಕಾಣುವ  ಜಾತ್ಯಾತೀತ ಪಕ್ಷವಾಗಿದೆ ಎಂದರಲ್ಲದೆ ದೇಶದಲ್ಲಿ ಇಂದು ತಲೆ ದೋರಿರುವ ಧಾರ್ಮಿಕ ಸಂಘರ್ಷದ ಕುರಿತು ಕಳವಳ ವ್ಯಕ್ತಪಡಿಸಿದರು.

ಸಂಘರ್ಷ ಸೃಷ್ಟಿಸುವ  ಮೂಲಕ ಬಿಜೆಪಿ ವಿಧಾನ ಸಭಾ ಚುನಾವಣೆ ಗೆಲ್ಲಲು ಹೊರಟಿದೆ ಎಂದು ಆರೋಪಿಸಿದ ಅವರು  ರಾಜ್ಯದಲ್ಲಿ ಅಭಿವೃದ್ದಿಯೇ ಕುಂಠಿವಾಗಿದೆ ಎಂದು  ಹೇಳಿದರು.

ಪ್ರಧಾನಿ ನರೇಂಧ್ರ ಮೋದಿ ಅವರು ಸಬ್‌ ಕಾ ಸಾಥ್‌ ಸಬ್‌ ಕಾ ವಿಶ್ವಾಸ್‌ ಎಂಬ ಘೋಷಣೆ ಮಾಡಿದ್ದರೂ ಆ ರೀತಿ ಆಗುತ್ತಿಲ್ಲ , ಜನರು ಈ ಬಾರಿ ಕಾಂಗ್ರೆಸ್‌ ಆಡಳಿತವನ್ನೇ ಎದುರು ನೋಡುತಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಸದಾಯೆ ಕೆ ಪಿ ಚಂದ್ರಕಲಾ ಅವರು ಮಾತನಾಡಿ 2013 ಮತ್ತು 2018 ರ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷವು ಕಡೇ  ಕ್ಷಣದಲ್ಲಿ ಅಭ್ಯರ್ಥಿಗಳನ್ನು ಘೋಷಿಸುತ್ತಿರುವುದರಿಂದ ಪಕ್ಷವು ಗೆಲುವು ಸಾಧಿಸಲು ಹಿನ್ನಡೆ ಆಗುತಿದ್ದು ತಾವು ಟಿಕೆಟ್‌ ಆಕಾಂಕ್ಷಿ ಆಗಿದ್ದರೂ ಈ ಬಾರಿ ಜೀವಿಜಯ ಅವರ ಉಮೇದುವಾರಿಕೆಗೆ ಬೇಂಬಲ ನೀಡುತ್ತಿರುವುದಾಗಿ ಹೇಳಿದರು.

ತಾವು 2018 ರಲ್ಲಿ  ಸ್ಪರ್ದಿಸಿದಾಗ 41 ಸಾವಿರಕ್ಕೂ ಅಧಿಕ ಮತ ಪಡೆದಿದ್ದನ್ನು ಸ್ಮರಿಸಿದ ಅವರು ಈ ಬಾರಿ  ಜೀವಿಜಯ ಅವರು ಪಕ್ಷಕ್ಕೆ ಬಂದಿದ್ದು  ಅವರದೇ ಬೆಂಬಲಿಗರ  50 ಸಾವಿರ ಮತಗಳಿದ್ದು ಕಾಂಗ್ರೆಸ್‌ ಗೆಲುವು  ನಿಶ್ಚಿತ ಎಂದು ಹೇಳಿದರು.

ಯುವ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ  ಹೆಚ್‌ ಮಿಥುನ್‌ , ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ  ಪಧಾದಿಕಾರಿ  ಕೆ ಏ ಯಾಕೂಬ್‌ ,  ರೈತ ಘಟಕದ ಪಧಾಧಿಕಾರಿ ಜಯೇಂದ್ರ, ಬಸವರಾಜ್‌ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು