Bengaluru 23°C
Ad

ಕುವೆಂಪು ಅವರಿಗೂ ನೊಬೆಲ್ ಸಿಗಬೇಕಿತ್ತು: ಮಡ್ಡಿಕೆರೆ ಗೋಪಾಲ್

ರವೀಂದ್ರನಾಥ್ ಟಾಗೋರರಂತೆ ರಾಷ್ಟ್ರಕವಿ ಕುವೆಂಪು ಅವರಿಗೂ ನೊಬೆಲ್ ಪ್ರಶಸ್ತಿ ಲಭಿಸಬೇಕಿತ್ತು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅಭಿಪ್ರಾಯಪಟ್ಟರು.

ಮೈಸೂರು: ರವೀಂದ್ರನಾಥ್ ಟಾಗೋರರಂತೆ ರಾಷ್ಟ್ರಕವಿ ಕುವೆಂಪು ಅವರಿಗೂ ನೊಬೆಲ್ ಪ್ರಶಸ್ತಿ ಲಭಿಸಬೇಕಿತ್ತು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅಭಿಪ್ರಾಯಪಟ್ಟರು.

ನಗರದ ಶ್ರೀ ನಟರಾಜ ಶಿಕ್ಷಣ ಸಂಸ್ಥೆಗಳ ಸೆಮಿನಾರ್ ಹಾಲ್‌ನಲ್ಲಿ ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆ, ನಿಸರ್ಗ ಸಂಗೀತ ವಿದ್ಯಾಲಯ ಸಂಘ, ಲಯನ್ಸ್ ಕ್ಲಬ್ ಆಫ್ ಮೈಸೂರು ಮಿಲೇನಿಯಂ ಹಾಗೂ ಸಂಜನಾ ಬಳಗ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಮುತ್ತು ಯ ವಡ್ಡರ ಇವರ ಸಂಪಾದಕೀಯ ಎಲೆಮರೆ ಕಾಯಿಗಳು ಮತ್ತು ಲಯನ್ ಡಾ.ನ.ಗಂಗಾಧರಪ್ಪ ನಾರಣಾಪುರ ಅವರ ಎರೆನಾಡ ಅಂಕುರ ಕೃತಿ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕುವೆಂಪು ಅವರ ಕನ್ನಡ ಕೃತಿಗಳು ಇಂಗ್ಲಿಷ್‌ಗೆ ಅನುವಾದವಾಗಿದ್ದರೆ, ಅವರಿಗೂ ನೋಬೆಲ್ ಪ್ರಶಸ್ತಿ ಲಭಿಸುತ್ತಿತ್ತು. ಕುವೆಂಪು ತಮ್ಮ ಆರಂಭಿಕ ದಿನಗಳಲ್ಲಿ ಕವನ ಸಂಕಲಗಳನ್ನು ಇಂಗ್ಲಿಷ್‌ ನಲ್ಲಿ ಬರೆಯಲು ಆರಂಭಿಸಿದರು. ಒಮ್ಮೆ ತಮ್ಮ ಒಂದು ಇಂಗ್ಲಿಷ್ ಕೃತಿಯನ್ನು ಆಂಗ್ಲ ಸಾಹಿತಿಗೆ ನೀಡಿದಾಗ ಅವರು ನೀವು ಯಾವ ಭಾಷೆಯವರು ಎಂದು ಪ್ರಶ್ನಿಸಿ, ಉತ್ತಮವಾಗಿ ಬರೆದಿದ್ದೀರಾ ಏಕೆ ನಿಮ್ಮ ಮಾತೃ ಭಾಷೆಯಲ್ಲಿ ಬರೆಯಬಾರದು ನೀನು ವಿಶ್ವಸಾಹಿತಿ ಆಗುತ್ತಿಯಾ ಎಂಬ ಸಲಹೆ ನೀಡಿದರು.

ನಂತರ ಅವರು ಆಲೋಚಿಸಿ, ಕನ್ನಡದಲ್ಲಿ ಮಕ್ಕಳಿಂದ ಹಿರಿಯರವರೆಗಿನ ಎಲ್ಲಾ ಕೃತಿ, ಕಾದಂಬರಿ ಕವನ ಸಂಕಲ ಬರೆದರು. ಅವರ ಎಲ್ಲಾ ಕೃತಿಗಳು ಇಂಗ್ಲಿಷ್‌ಗೆ ಅನುವಾದವಾಗಿದ್ದರೆ, ಡಾ.ರವೀಂದ್ರ ಟಾಗೋರ್‌ರಂತೆ ಕುವೆಂಪು ಅವರಿಗೂ ನೊಬೆಲ್ ಪ್ರಶಸ್ತಿ ಲಭಿಸುತ್ತಿದ್ದವು. ಆದರೆ, ಅವರು ಕನ್ನಡದಲ್ಲಿ ಬರೆದು ವಿಶ್ವಮಾನವನಾಗಿ ಸಂದೇಶ ಸಾರಿದ್ದಾರೆ ಎಂದರು.

ಎಲೆಮರೆ ಕಾಯಿಗಳ ಕೃತಿಯಲ್ಲಿ ಎಲ್ಲಿಯೂ ಪರಿಚಯವಾಗದ 46 ಮಂದಿ ಸಾಧಕರನ್ನು ಇಲ್ಲಿ ಪರಿಚಯಿಸಿದ್ದಾರೆ. ಈ ರೀತಿ ಕೆಲಸಗಳಾಗಬೇಕು. ಮತ್ತೊಂದೆಡೆ ಡಾ.ನ.ಗಂಗಾಧರಪ್ಪ ನಾರಣಾಪುರ ಅವರ ಎರೆನಾಡ ಅಂಕುರ ಕೃತಿ ಉತ್ತಮವಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹನುಮಸಾಗರದ ಮಲ್ಲಯ್ಯ ಕೋಮಾರಿ ಎಲೆಮರೆ ಕಾಯಿಗಳು ಕೃತಿ ಬಿಡುಗಡೆಗೊಳಿಸಿದರೆ, ಯುವ ಸಾಹಿತಿ ಜ್ಯೋತಿ ಆನಂದ್ ಚಂದುಕರ ಕೃತಿ ಪರಿಚಯ ಮಾಡಿಕೊಟ್ಟರು. ಎರೆನಾಡ ಅಂಕುರ ಕೃತಿಯನ್ನು ಡಾ.ನಾಗರಾಜ ವಿ.ಭೈರಿ ಬಿಡುಗಡೆಗೊಳಿಸಿದರು. ಕನ್ನಡ ಸಾಹಿತ್ಯ ಕಲಾ ಕೂಟದ ಎಂ.ಚಂದ್ರಶೇಖರ್ ಪರಿಚಯಿಸಿದರು.

ಹೊಸಮಠದ ಚಿದಾನಂದ ಸ್ವಾಮಿ ದಿವ್ಯ ಸಾನಿಧ್ಯ ವಹಿಸಿದ್ದರು. ಲಯನ್ಸ್ ಕ್ಲಬ್ ಮಿಲೇನಿಯಂನ ಅಧ್ಯಕ್ಷ ಎ.ಸಿ.ರವಿ ಅಧ್ಯಕ್ಷತೆ, ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂನ ಆರಕ್ಷಕ ನಿರೀಕ್ಷಕಿ ಎಂ.ಗೀತಾ, ಈರಮಂಡ ಹರಿಣಿ ವಿಜಯ್, ಎಂ.ಕೆ.ಜಯಕುಮಾರ್, ಜಗದೀಶ್ ಎಸ್.ಕಾಬನೆ, ಮುತ್ತು ಯ ವಡ್ಡರ, ಎನ್.ಸುನೀಲ್‌ಕುಮಾರ್, ಎಂ.ಜೆ.ರಮೇಶ್, ಸಾಗರ್ ಪಿ.ನಿಂಬಾಳ, ವಿನೋದ್‌ಕುಮಾರ್ ಪಾಟೀಲ್ ಉಪಸ್ಥಿತರಿದ್ದರು.

Ad
Ad
Nk Channel Final 21 09 2023
Ad