ಮೈಸೂರು: ಫೆ 10ರಿಂದ ಟಿ ನರಸೀಪುರದಲ್ಲಿ ಕುಂಭಮೇಳ ಹಿನ್ನೆಲೆ ತಾಲ್ಲೂಕು ಆಡಳಿತ, ಪುರಸಭೆ ಇಲಾಖೆ ಕುಂಭಮೇಳ ಸಿದ್ದತಾ ಕಾರ್ಯ ಕೈಗೊಳ್ಳದಿರುವುದರಿಂದ ಪುರಸಭೆ ಇಲಾಖೆಗೆ ರೈತರು ಮನವಿ ಸಲ್ಲಿಸಿದರು.
ಟಿ ನರಸೀಪುರದ ತ್ರಿವೇಣಿ ಸಂಗಮದಲ್ಲಿ ಮೂರು ವರ್ಷಕ್ಕೊಮ್ಮೆ ಕುಂಭಮೇಳ ನಡೆಯುತ್ತದೆ. ಕುಂಭಮೇಳಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬರುತ್ತಾರೆ. ನರಸೀಪುರ ಪಟ್ಟಣದ ಎಲ್ಲಾ ರಸ್ತೆಗಳು ಗುಂಡಿ ಬಿದ್ದಿವೆ. ತುರ್ತಾಗಿ ರಸ್ತೆ ಸರಿಪಡಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಬೇಕು. ಕುಂಭಮೇಳಕ್ಕೆ ಕೇವಲ ಒಂದು ವಾರ ಮಾತ್ರ ಬಾಕಿ ಇದೆ.
ಈ ನಿಟ್ಟಿನಲ್ಲಿ ಸಿದ್ದತಾ ಕಾರ್ಯಗಳು ಬಿರುಸಿನಿಂದ ಸಾಗಬೇಕು. ತುರ್ತಾಗಿ ರಸ್ತೆಗಳು ದುರಸ್ತಿ ಆಗದಿದ್ದರೆ ನಿರಂತರ ಅನಿರ್ದಿಷ್ಟ ಅವಧಿ ಪ್ರತಿಭಟನೆಯನ್ನು ಕೊಡಬೇಕಾಗುತ್ತದೆ ಎಂದು
ಅಧಿಕಾರಿಗಳಿಗೆ ರೈತ ಮುಖಂಡರ ಎಚ್ಚರಿಕೆ ನೀಡಿ ಮನವಿ ಪತ್ರ ನೀಡಿದರು.