ಮೈಸೂರು

ಡೈರಿ ಬರೆದು ಟಾರ್ಗೆಟ್ ಮಾಡುವವರನ್ನು ಪಕ್ಷದ ಸಂಘಟನೆಯಿಂದ ದೂರ ಇಡಿ: ಸದಾನಂದ ಗೌಡ

ಮೈಸೂರು: ಪಕ್ಷ ಸಂಘಟನೆ ಕುರಿತು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಡೈರಿ ಬರೆದು ಟಾರ್ಗೆಟ್ ಮಾಡುವವರನ್ನು ಪಕ್ಷದ ಸಂಘಟನೆಯಿಂದ ದೂರವಿಟ್ಟರೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಉದ್ದಾರವಾಗಲಿದೆ ಎಂದು ಸದಾನಂದ ಗೌಡ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗುಂಪುಗಾರಿಕೆ ರಾಜಕಾರಣ ನಿಲ್ಲಬೇಕಿದೆ, ನಮ್ಮ ಗುಂಪುಗಾರಿಕೆಯಿಂದಲೇ ನಾವು ಚುನಾವಣೆ ಸೋತಿರುವುದು. ಹೀಗಾಗಿ ಡೈರಿ ಬರೆದು ಟಾರ್ಗೆಟ್ ಮಾಡುವವರನ್ನು ಸಂಘಟನೆಯಿಂದ ದೂರವಿಡಿ, ಆಗ ರಾಜ್ಯದಲ್ಲಿ ಪಕ್ಷ ಉದ್ದಾರ ಆಗುತ್ತದೆ. ಈ ಬಗ್ಗೆ ನಾನು ವಿಜಯೇಂದ್ರ ಅವರಿಗೆ ಸಲಹೆ ನೀಡಿದ್ದೇನೆ ಎಂದು ಹೇಳಿದರು.

ಮೊದಲು ಅಸಮಾಧಾನ ಇರುವವರನ್ನು ಮನವೊಲಿಸಿ, ಸೋಮಣ್ಣ ಅವರ ಬಳಿ ಹೋಗಿ, ಯತ್ನಾಳ್ ಅವರನ್ನು ಭೇಟಿ ಮಾಡಿದ ಬಳಿಕ ಮಠ, ಮಂದಿರಕ್ಕೆ ಹೋಗಿ ಎಂದು ಸಲಹೆ ಮಾಡಿದರು.

ನನಗೆ ರಾಜ್ಯಾಧ್ಯಕ್ಷರಾಗಿರುವವರ ಕಷ್ಟ ಏನೆಂಬುದು ಗೊತ್ತಿದೆ. ನನ್ನ ಅವಧಿಯಲ್ಲಿಯೂ ಅನಂತ ಕುಮಾರ್, ಯಡಿಯೂರಪ್ಪ ಅವರ ಗುಂಪುಗಳಿದ್ದವು. ನಾನು ಪ್ರತಿ ದಿನ ಎಲ್ಲರ ಮನೆಗೆ ಹೋಗಿ ಬೆಣ್ಣೆ ಹಿಡಿದು ನೈಸ್ ಮಾಡಿದ್ರೆ ಅದೇ ರೀತಿ ಎಲ್ಲರ ಮನವೊಲಿಸಿ, ನಿಮ್ಮ ತಂದೆಯ ಜತೆಗೆ ಉಳಿದ ಹಿರಿಯರ ಸಲಹೆ ಪಡೆಯಿರಿ ಎಂದ ಅವರು, ಮುಂದಿನ ಲೋಕಸಭೆಯಲ್ಲಿ ಯುವಕರಿಗೆ ಅವಕಾಶ ನೀಡುವ ಮೂಲಕ ಹೊಸ ರಾಜತಂತ್ರ ಜಾರಿಗೆ ತನ್ನಿ ಎಂದು ಹೇಳಿದರು.

Ashika S

Recent Posts

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

9 mins ago

ಬೀದರ್: ಸಾಯಿಜ್ಞಾನ ಪಬ್ಲಿಕ್ ಶಾಲೆಗೆ ಶೇ. 100 ಫಲಿತಾಂಶ

ಸಾಯಿಜ್ಞಾನ ಪಬ್ಲಿಕ್ ಶಾಲೆಯು ಪ್ರಸಕ್ತ ಸಾಲಿನ ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ 100ಕ್ಕೆ 100 ರಷ್ಟು ಫಲಿತಾಂಶ ಪಡೆದಿದೆ.…

46 mins ago

ಎಸಿಯಲ್ಲಿ ಬೆಂಕಿ: ತುರ್ತು ಭೂಸ್ಪರ್ಶ ಮಾಡಿದ ಏರ್ ಇಂಡಿಯಾ ವಿಮಾನ

ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

1 hour ago

ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಮೃತ್ಯು

ಹೊಳೆಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಇಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕಡವಿನಕಟ್ಟೆಯಲ್ಲಿ ನಡೆದಿದೆ.

1 hour ago

ರಸ್ತೆ ತಿರುವಿನ ಅಪಾಯಕಾರಿ ವಿದ್ಯುತ್ ತಂತಿಗಳು: ಸುರಕ್ಷಿತ ಎತ್ತರಕ್ಕೆ ಏರಿಕೆ

ಸಾಣೂರಿನ ಲೈನ್ ಮ್ಯಾನ್  ಸುಭಾಷ್ ರವರು ತಮ್ಮ ತಂಡದೊಂದಿಗೆ ಮೇ 17 ರಂದು ಮುರತಂಗಡಿ ಇರುವತ್ತೂರು ರಸ್ತೆ ತಿರುವಿನಲ್ಲಿರುವ ವಿದ್ಯುತ್…

2 hours ago

ಕೇಸ್​ನಲ್ಲಿ ರಿಕವರಿ ಮಾಡಿದ್ದ ಅರ್ಧ ಕೆ.ಜಿ ಚಿನ್ನ ಕದ್ದ ಪೊಲೀಸ್​ ಪೇದೆ

ರಕ್ಷಕರೇ ಭಕ್ಷಕರಾದ ಘಟನೆಯೊಂದು ಕೋಲಾರದಲ್ಲಿ ನಡೆದಿದೆ . ಕಳವು ಕೇಸ್​ನಲ್ಲಿ ರಿಕವರಿ ಮಾಡಿದ್ದ 1 ಕೆಜಿ 408 ಗ್ರಾಂ ಚಿನ್ನದಲ್ಲಿ…

2 hours ago