Bengaluru 23°C
Ad

ಧರ್ಮಾಪುರದಲ್ಲಿ ವಿಜೃಂಭಣೆಯ ಕಾರ್ತಿಕ ಜಾತ್ರಾ ಮಹೋತ್ಸವ

ಕಡೇ ಕಾರ್ತಿಕದ ಅಂಗವಾಗಿ ಹುಣಸೂರು ತಾಲೂಕಿನ ಧರ್ಮಾಪುರದಲ್ಲಿ ಎಲ್ಲಾ ಜನಾಂಗದವರು ಒಟ್ಟಾಗಿ ಸೇರಿ ಆಚರಿಸುವ ಈಶ್ವರ, ಮಹದೇಶ್ವರ, ಚನ್ನಕೇಶವ ಸ್ವಾಮಿಯ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.

ಮೈಸೂರು: ಕಡೇ ಕಾರ್ತಿಕದ ಅಂಗವಾಗಿ ಹುಣಸೂರು ತಾಲೂಕಿನ ಧರ್ಮಾಪುರದಲ್ಲಿ ಎಲ್ಲಾ ಜನಾಂಗದವರು ಒಟ್ಟಾಗಿ ಸೇರಿ ಆಚರಿಸುವ ಈಶ್ವರ, ಮಹದೇಶ್ವರ, ಚನ್ನಕೇಶವ ಸ್ವಾಮಿಯ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.

Ad

ಧರ್ಮಾಪುರದ ಗ್ರಾಮದ ಮೂಡಲ ಕೆರೆಯಲ್ಲಿ ಪೂಜೆ ಸಲ್ಲಿಸಿ ಭಾಜಾ ಭಜಂತ್ರಿಯೊಂದಿಗೆ ಮೆರವಣಿಗೆ ಮೂಲಕ ಮಹಿಳೆಯರು ಕಳಸದಲ್ಲಿ ನೀರು ಹೊತ್ತು ತಂದು ಮಾರಿಗುಡಿ ಮುಂದಿನ ಚನ್ನಕೇಶವ ಸ್ವಾಮಿ ದೇವಾಲಯದ ಮುಂದಿನ ಓಕುಳಿ ಕೊಳಕ್ಕೆ ನೀರು ತುಂಬಿಸಿದ ನಂತರ ಮೈ ನವಿರೇಳಿಸುವ ಓಕುಳಿಯಾಡಿದರು. ಎರಡು ದಿನದ ಜಾತ್ರಾ ಮಹೋತ್ಸವದಲ್ಲಿ ಸಂಪ್ರದಾಯದಂತೆ ಗ್ರಾಮೀಣ ಪ್ರದೇಶದ ಸಂಸ್ಕತಿಕ, ಸಾಂಸ್ಕೃತೀಕ ವೈಭವ ಮೇಳೈಸಿತು.

Ad

ಮಂಗಳವಾರ ಬೆಳಿಗ್ಗೆ ನಡೆದ ಕೊಂಡೋತ್ಸವಕ್ಕೆ ಪಕ್ಕದ ನಾಡಪ್ಪನ ಹಳ್ಳಿಯಿಂದ ಆಗಮಿಸಿದ್ದ ಮಹದೇಶ್ವರ ಸ್ವಾಮಿಯ ಉತ್ಸವ ದೇವರು ಹಾಗೂ ಗ್ರಾಮದ ಈಶ್ವರಸ್ವಾಮಿ. ಮಹದೇಶ್ವರ ಸ್ವಾಮಿ, ಮಲ್ಲದೇವರು, ಹುಲಿ ವಾಹನದೊಂದಿಗೆ ಮೂಡಲ ಕೆರೆಗೆ ಆಗಮಿಸಿ ಅಲ್ಲಿ ಪೂಜೆ ಸಲ್ಲಿಸಿದ ನಂತರ ಕುಣಿಯುವ ಗುಡ್ಡರ ಕುಣಿತ, ಮಂಗಳ ವಾದ್ಯಗಳೊಂದಿಗೆ ಕೊಂಡೋತ್ಸವ ನಡೆಯುವ ಸ್ಥಳಕ್ಕೆ ಮೆರವಣಿಗೆಯಲ್ಲಿ ಆಗಮಿಸಿದ ನಂತರ ಪೂಜಾರರಾದ ಚಂದ್ರಪ್ಪ, ಮಾದೇಗೌಡರವರು ದೇವರ ಆವಾಗಾಹನೆಗೆ ಒಳಗಾಗಿ ದೇವರಿಗೆ ಜೈಕಾರ ಹಾಕುತ್ತಾ ಕೊಂಡವನ್ನು ಹಾಯ್ದರು.

Ad

ಮ (2)

ಆ ನಂತರ ದೇವಾಲಯ ಸುತ್ತ ದೇವರುಗಳ ಪ್ರದಕ್ಷಿಣೆ ನಡೆದ ನಂತರ ಉತ್ಸವದ ಮೂಲಕ ಮೈದಾನಕ್ಕಾಗಮಿಸಿ ಎಲ್ಲಾ ಉತ್ಸವ ಮೂರ್ತಿಗಳನ್ನು ಸಾಲಿಗಿಟ್ಟ ನಂತರ ಎಲ್ಲರೂ ಪೂಜೆ ಸಲ್ಲಿಸಿದರು. ವಿವಿಧ ಜನಾಂಗಗಳ ಜಾನಪದ ಕಲಾ ತಂಡಗಳು ನೆರೆದಿದ್ದವರನ್ನು ಮನಸೊರೆಗೊಳಿಸಿದರು. ಈ ಜಾತ್ರಾ ಮಹೋತ್ಸವದಲ್ಲಿ ಸುತ್ತ-ಮುತ್ತಲ ಗ್ರಾಮಸ್ಥರು ಸೇರಿದಂತೆ 10ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಭಾಗವಹಿಸಿ ಪುನೀತರಾದರು. ಶಾಸಕ ಹರೀಶ್ ಗೌಡ, ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್, ಹುಡಾ ಅಧ್ಯಕ್ಷ ಹೆಚ್.ಪಿ.ಅಮರ್ ನಾಥ್, ಜಿ.ಪಂ.ಮಾಜಿ.ಸದಸ್ಯ ಡಿ.ಕೆ.ಕುನೇಗೌಡ ದೇವರ ದರ್ಶನ ಪಡೆದರು.

Ad

ನಾಡ ಯಜಮಾನ ಪುಟ್ಟಮಾದಯ್ಯ, ಚಿಕ್ಕಯಜಮಾನ ಸೋಮಣಶೆಟ್ಟಿ ಹಾಗೂ ವಿವಿಧ ಜನಾಂಗದ ಯಜಮಾನರು ಸೇರಿದಂತೆ ಗ್ರಾ.ಪಂ. ಸದ್ಯಸರಾದ ವಿ.ಮಹದೇವ್, ಮಹದೇವಸ್ವಾಮಿ, ಗೌರಿಪುರ ಗೋವಿಂದಶೆಟ್ಟಿ, ಗೌರಮ್ಮ, ಮಲ್ಲೇಶ್, ವಕೀಲ ಮಹದೇವ್, ಮುಖಂಡರಾದ ವಿಶ್ವನಾಥ್, ರಮೇಶ್, ಡಿ.ಮಹದೇವ್, ರುದ್ರಶೆಟ್ಟಿ. ನಾರಯಣ್ ಸೇರಿದಂತೆ ಹಲವಾರು ಜನ ಪ್ರತಿನಿಧಿಗಳು ದೇವರ ದರ್ಶನ ಪಡೆದರು.

Ad
Ad
Ad
Nk Channel Final 21 09 2023