ಮೈಸೂರು: ತಿರುಪತಿ ಲಡ್ಡುವಿನಲ್ಲಿ ಹಂದಿ, ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಹಾಕುವಂತಹ ಕುಕೃತ್ಯ ಮಾಡಿ ಹಿಂದೂಗಳ ನಂಬಿಕೆ ಹೊಡೆಯುವ ಕೆಲಸವನ್ನು ಜಗನ್ ಮೋಹನ್ ರೆಡ್ಡಿ ಎಂಬ ಕ್ರೈಸ್ತ ಮಾಡಿದ್ದಾನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.
ತಿರುಪತಿ ಲಡ್ಡು ವಿವಾದ ಕುರಿತು ಮಾತನಾಡಿದ ಅವರು, ಜಮ್ಮು-ಕಾಶ್ಮೀರ ಒಂದು ರಾಜ್ಯ ಮುಸಲ್ಮಾನರ ಕೈಗೆ ಹೋದ ಕೂಡಲೇ ಅಲ್ಲಿರುವಂತಹ ಕಾಶ್ಮೀರಿ ಪಂಡಿತರನ್ನು ಸಾರಾಸಗಟಾಗಿ ಆಚೆ ದಬ್ಬಿದರು. ಆಂಧ್ರಪ್ರದೇಶ ರಾಜ್ಯ ಕ್ರೈಸ್ತನ ಕೈಗೆ ಸಿಕ್ಕಿತು.
ಪವಿತ್ರವಾದ ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ಹಂದಿ, ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಹಾಕುವಂತಹ ಕುಕೃತ್ಯ ಮಾಡಿ ಹಿಂದೂಗಳ ನಂಬಿಕೆ ಹೊಡೆಯುವ ಕೆಲಸವನ್ನು ಜಗನ್ ಮೋಹನ್ ರೆಡ್ಡಿ ಎಂಬ ಕ್ರೈಸ್ತ ಮಾಡಿದ್ದಾನೆ. ಮುಸಲ್ಮಾನರು ಮತ್ತು ಕ್ರೈಸ್ತರ ಕೈಗೆ ಹೀಗೆಯೇ ಒಂದೊಂದು ರಾಜ್ಯಗಳು ಹೋಗುತ್ತಿದ್ದರೆ, ಮುಂದೊಂದು ದಿನ ಭಾರತದಿಂದ ಹಿಂದೂಗಳೇ ಪಲಾಯನ ಮಾಡುವಂತಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂದರು.
Ad