ಮೈಸೂರು: ಎಂಎಲ್ಸಿ ಎಚ್.ವಿಶ್ವನಾಥ್ ಸುದ್ದಿ ಗೋಷ್ಠಿ ನಡೆಸಿದರು. ವಿಜಯನಗರ ಜಿಲ್ಲೆ ಹಗರಿ ಬೊಮ್ಮನಹಳ್ಳಿ ತಾಲೂಕಿನ ಬಂಡಹಳ್ಳಿಯಲ್ಲಿ ನಡೆದ ಮಾಜಿ ಶಾಸಕ ಸಿರಾಜ್ ಶೇಖರ್ ಅವರ ಮಗನ ಜೊತೆ ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗೆ ನಿಂದನೆ ಮಾಡಿದ ಸಿಎಂ ಸಿದ್ದರಾಮಯ್ಯ ಈ ವಿಚಾರ ಕುರಿತು ಸುದ್ದಿ ಗೋಷ್ಠಿ ನಡೆಸಿದರು.
ಒಬ್ಬ ಐಎಎಸ್ ಅಧಿಕಾರಿಗೆ ಏಕವಚನದಲ್ಲಿ ಬೈದು ಅಲ್ಲಿಂದ ಎದ್ದು ಹೋಗು ಎಂದು ಬೈದುರಿರುವುದು ಖಂಡನೀಯ. ಸಿದ್ದರಾಮಯ್ಯ ಎಲ್ಲರನ್ನೂ ಏಕವಚನದಲ್ಲಿ ಮಾತನಾಡುವುದು ಅಭ್ಯಾಸ ಮಾಡಿಕೊಂಡಿದ್ದಾರೆ. ಅದಕ್ಕೆ ಅವರ ಪಟಾಲಂಗಳು ಕೇಕೆ ಹಾಕುತ್ತಾರೆ. ದುರಂಕಾರ ನಡೆ ಸರಿಯಲ್ಲ ಉತ್ತಮ ಆಡಳಿತ ಕೊಟ್ಟು ದುರಹಂಕಾರ ತೋರಿಸಿ.
ದೇವರಾಜ ಅರಸು ಅವರಿಗಿಂತ ದೊಡ್ಡ ಲೀಡರಲ್ಲಪ್ಪ ನೀನು, ದುರಹಂಕಾರದಿಂದ ನಡೆದುಕೊಳ್ಳೊದ ಮುಂದಾದರು ಬಿಡಿ. ಸಿಎಂ ಸಿದ್ದರಾಮಯ್ಯ ಗೆ ಏಕವಚನದಲ್ಲೇ ಎಂಎಲ್ಸಿ ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಜಾತಿಗಣತಿ ವರದಿ ಬಿಡುಗಡೆ ಎಂಎಲ್ಸಿ ವಿಶ್ವನಾಥ್ ಆಗ್ರಹಿಸಿದರು. ತಯಾರಾಗಿ 10 ವರ್ಷ ಆಯ್ತು ಇಲ್ಲಿ ತನಕ ಅದನ್ನು ಮುಟ್ಟಿಯೂ ನೋಡಿಲ್ಲ. ಜಾತಿ ಗಣತಿ ಮತ್ತು ಅಹಿಂದ ನಿಮಗೆ ಒಂದು ಅಸ್ತ್ರ ಅಷ್ಟೇನೆ. ಅದನ್ನ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದೀರಾ.? ನಿಮ್ಮದು ಏಡಿತನ ಅನ್ನೋದನ್ನ ತೋರಿಸುತ್ತೆ. ಕೂಡಲೇ ಬಿಡುಗಡೆ ಮಾಡಿ ಸಿಎಂ ವಿರುದ್ಧ ಮೈಸೂರಿನಲ್ಲಿ ಎಂಎಲ್ಸಿ ವಿಶ್ವನಾಥ್ ಕಿಡಿ ಕಾರಿದರು.
ಬೆಂಗಳೂರಿನಲ್ಲಿ ಗೋವುಗಳ ಕೆಚ್ಚಲು ಕೋಯ್ದ ಪ್ರಕರಣವಾಗಿ ಎಂಎಲ್ಸಿ ವಿಶ್ವನಾಥ್ ತೀವ್ರ ಖಂಡನೆ ವ್ಯಕ್ತಪಡಿಸಿದರು. ನಾವು ಪೂಜೆ ಮಾಡುವ ದೇವರು ಅದರ ಕೆಚ್ಚಲು ಕೂಯ್ದಿರುವುದು ಬಹಳ ಖಂಡನೆ. ಯಾವ ಆಡಳಿ ಕೊಡ್ತಾ ಇದ್ದೀರಿ.? ಮೈಸೂರು ಮುಡಾ ಪ್ರಕರಣದಲ್ಲಿ ಲೂಟಿ ಮಾಡಿದ್ದ ಆ ಇಬ್ಬರು ಆಯುಕ್ತರನ್ನ ನೀವು ಮುಟ್ಟಲಿಕ್ಕೆ ಆಗಲಿಲ್ಲ.
ಅವರ ವಿರುದ್ಧ ಏನು ಕ್ರಮ ತಗೆದುಕೊಂಡ್ರಿ.? ಸಿದ್ದರಾಮಯ್ಯ ಅವರ ಕಾಲದಲ್ಲಿ 1 ಸಾವಿರಕ್ಕೆ ಒಂದು ಸೈಟು. ನಿಮ್ಮ ಯೋಗ್ಯತೆಗೆ ಬೆಂಕಿಹಾಕ, ನಿಮ್ಮ ಆಡಳಿತಕ್ಕೆ ಒಂದಷ್ಟು ಬೆಂಕಿ ಹಾಕ. ಎರಡು ವರ್ಷಗಳ ಕಳಿತಾ ಬರ್ತಿದೆ ಸಿಎಂ ಆಗಿ ಏನ್ ಮಾಡಿದ್ರಿ ರಾಜ್ಯಕ್ಕೆ.? ಸಿಎಂ ವಿರುದ್ಧ ಎಂಎಲ್ಸಿ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.