Bengaluru 21°C
Ad

ಒಳ ಮೀಸಲಾತಿ ವರದಿ ಅವೈಜ್ಞಾನಿಕ, ಹೊಸ ಸಮೀಕ್ಷೆಗೆ ಒತ್ತಾಯ

ಒಳ ಮೀಸಲಾತಿ ವರದಿ ಅವೈಜ್ಞಾನಿಕವಾಗಿದ್ದು, ಅದನ್ನು ಕೈ ಬಿಟ್ಟು, ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಹೊಸದಾಗಿ ಸಮೀಕ್ಷೆ ನಡೆಸಿ ಆ ವರದಿಯ ಆಧಾರದ ಮೇಲೆ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಡಿ.ಚಂದ್ರಶೇಖರಯ್ಯ ಒತ್ತಾಯಿಸಿದರು.

ಮೈಸೂರು: ಒಳ ಮೀಸಲಾತಿ ವರದಿ ಅವೈಜ್ಞಾನಿಕವಾಗಿದ್ದು, ಅದನ್ನು ಕೈ ಬಿಟ್ಟು, ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಹೊಸದಾಗಿ ಸಮೀಕ್ಷೆ ನಡೆಸಿ ಆ ವರದಿಯ ಆಧಾರದ ಮೇಲೆ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಡಿ.ಚಂದ್ರಶೇಖರಯ್ಯ ಒತ್ತಾಯಿಸಿದರು.

Ad

ನಗರದ ಮಾನಸ ಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ, ಕರ್ನಾಟಕ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಸಹಯೋಗದಲ್ಲಿ ನಡೆದ ವೈಜ್ಞಾನಿಕವಾಗಿ ಒಳ ಮೀಸಲಾತಿ ಜಾರಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಹೊಲೆಯ ಸಮುದಾಯ ಮೀಸಲಾತಿಗೆ ವಿರುದ್ಧವಾಗಿದೆ ಎಂದು ಸೋದರ ಮಾದಿಗ ಸಮುದಾಯ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದೆ.

Ad

ಆದರೆ, ಎರಡು ಸಮುದಾಯಗಳ ಹಿತ ದೃಷ್ಟಿಯಿಂದ ಒಳ ಮೀಸಲಾತಿ ಜಾರಿಗೆ ಬರಬೇಕು. ಸರ್ಕಾರಕ್ಕೂ ನಾವು ಇದನ್ನೇ ಮನವರಿಕೆ ಮಾಡಿದ್ದೇವೆ. ಆದರೆ, ಈಗಿನ ವರದಿ ಆಧಾರದ ಮೇಲೆ ಅಲ್ಲ. ಏಕೆಂದರೆ ಈ ವರದಿ ಅವೈಜ್ಞಾನಿಕವಾಗಿದೆ. ಹೀಗಾಗಿ ಹೊಸದಾಗಿ ಜಾತಿ ಸಮೀಕ್ಷೆ ನಡೆಸಿ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದರು.

Ad

ಜಾತಿ ಸಮೀಕ್ಷೆ ನಡೆಸಲು ಖಂಡಿತ ಸಾಧ್ಯವಿದೆ. ಹೊಸದಾಗಿ ಜಾತಿ ಸಮೀಕ್ಷೆ ನಡೆಸಿರುವುದರಿಂದ ಸರ್ಕಾರಕ್ಕೆ ದೊಡ್ಡ ವೆಚ್ಚವೇನು ಆಗುವುದಿಲ್ಲ. ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ಅನ್ಯ ಯೋಜನೆಗೆ ಬಳಸುವುದನ್ನು ನಿಲ್ಲಿಸಿ 250 ಕೋಟಿ ರೂ. ವೆಚ್ಚದಲ್ಲಿ ಮೂರು ತಿಂಗಳಲ್ಲಿ ಜಾತಿ ಸಮೀಕ್ಷೆ ನಡೆಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು.

Ad

ಒಳ ಮೀಸಲಾತಿ ಜಾರಿಗೆ ಪರಿಶಿಷ್ಟ ಪಂಗಡ ಕಾನೂನಿನ ತೊಡಕುಗಳನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕವಾಗಿ ಒಳ ಜಾತಿಗಳನ್ನು ವರ್ಗೀಕರಿಸಿ, ಆದ್ಯತೆ ಮೇರೆಗೆ ಮೀಸಲಾತಿ ನೀಡಬೇಕು. ಇದಕ್ಕಾಗಿ ಆಳ ಅಧ್ಯಯನ ಆಗಬೇಕಿದೆ. ಇಂತಹ ಅಧ್ಯಯನದ ಮೇಲೆ ಒಳ ಮೀಸಲಾತಿ ಜಾರಿಗೆ ತರಬೇಕು. ಹೀಗಾಗಿ ಜಸ್ಟೀಸ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ಎಸ್‌ಸಿಪಿ ಅನುದಾನ ಬಳಕೆ ಮಾಡಿ ಮೂರು ತಿಂಗಳೊಳಗೆ ಸಮಗ್ರ ವರದಿ ಸ್ವೀಕರಿಸಿ ಒಳ ಮೀಸಲಾತಿ ಜಾರಿ ಮಾಡಿ. ಇದಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದರು.

Ad

ತಪ್ಪು ದತ್ತಾಂಶಗಳಿಂದ ರೂಪಿಸಲಾಗಿರುವ ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದ್ದು ತಿರಸ್ಕಾರ ಯೋಗ್ಯ. ಈ ವರದಿಯನ್ನು ಹಿಂದಿನ ಬಿಜೆಪಿ ತಿರಸ್ಕಾರ ಮಾಡಿದೆ. ಈಗಿನ ಕಾಂಗ್ರೆಸ್ ಸರ್ಕಾರವೂ ಪರಿಗಣಿಸಿಲ್ಲ. ತಪ್ಪು ಮಾಹಿತಿಯ ವರದಿ ಸ್ವೀಕರಿಸಲು ಸಾಧ್ಯವೇ? ಈ ವರದಿ ಅನ್ವಯ ಮೀಸಲಾತಿ ಹಂಚಿಕೆ ಮಾಡಿದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

Ad

ಸರ್ಕಾರಿ ನೌಕರರ ಅಂಕಿ ಅಂಶ ತಪ್ಪಿದೆ. ಭೂಮಿ ಹಂಚಿಕೆಯ ಮಾಹಿತಿಯೇ ತಪ್ಪಾಗಿದೆ. ಸಮೀಕ್ಷೆ ವೇಳೆ ಉಪ ಜಾತಿ ಬರೆಯದವರನ್ನು ವರದಿಯಿಂದ ಕೈ ಬಿಡಲಾಗಿದೆ. ಆದಿ ಕರ್ನಾಟಕ, ಆದಿ ದ್ರಾವಿಡ ಜಾತಿಗಳ ಗೊಂದಲ ಇತ್ಯರ್ಥಪಡಿಸಿಲ್ಲ. ಆದರೂ ಕಡ್ಲೆಪುರಿಯಂತೆ ಮೀಸಲು ಹಂಚಿಕೆ ಮಾಡಿದ್ದಾರೆ. ಇದನ್ನು ಒಪ್ಪಲು ಸಾಧ್ಯವೇ ಎಂದು ಪ್ರಶ್ನಿಸಿದರು.

Ad

ಸದಾಶಿವ ಆಯೋಗದ ವರದಿಯ ಮೂರು ಪುಟವನ್ನು ಕೈಯಲ್ಲಿ ಬರೆಯಲಾಗಿದೆ. ಬರೆದವರು ಯಾರೆಂಬುದು ಗೊತ್ತಿದೆ. ಶಿಫಾರಸ್ಸು ಸಂವಿಧಾನ ವಿರೋದಿಯಾಗಿದ್ದು, ಮೀಸಲಾತಿ ವರ್ಗೀಕರಣವೂ ಅವೈಜ್ಞಾನಿಕವಾಗಿದೆ. ಗೃಹಮಂತ್ರಿ ಪರಮೇಶ್ವರ್ ಆದಿ ದ್ರಾವಿಡ ಎಂದು ದಾಖಲಿಸಿದ್ದಾರೆ. ಹಾಗಾದರೆ ಅವರು ಯಾವ ಹೊಲೆಯ, ಮಾದಿಗ ಜಾತಿ? ಹೊಲೆಯ ಸಮಾಜ ಒಳ ಮೀಸಲು ವಿರೋಧಿಸುತ್ತಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಹಂಚಿಕೊಳ್ಳಬೇಕು ಎಂಬುದಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು.

Ad

ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಕರ್ನಾಟಕ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್, ನಿವೃತ್ತ ಐಎಫ್‌ಎಸ್ ಅಧಿಕಾರಿ ಡಾ.ಆರ್.ರಾಜು, ಲೇಖಕ ಸಿ.ಹರಕುಮಾರ್, ಮಾಜಿ ಮೇಯರ್ ಪುರುಷೋತ್ತಮ್, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್, ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಆರ್.ಕಾಂತರಾಜು ಇದ್ದರು.

Ad
Ad
Ad
Nk Channel Final 21 09 2023