Bengaluru 23°C
Ad

ಮಾನ, ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಿ: ಕೆ.ಎಸ್.ಭಗವಾನ್

ಮಾನ, ಮರ್ಯಾದೆ ಇದ್ದರೆ ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು. ನಾನು 50 ವರ್ಷ ಆಯಿತು ದೇವಸ್ಥಾನಕ್ಕೆ ಹೋಗಿ. ದೇವಸ್ಥಾಕ್ಕೆ ಹೋದರೆ ಏನು ಆಗಲ್ಲ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಹೇಳಿದ್ದಾರೆ.

ಮೈಸೂರು: ಮಾನ, ಮರ್ಯಾದೆ ಇದ್ದರೆ ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು. ನಾನು 50 ವರ್ಷ ಆಯಿತು ದೇವಸ್ಥಾನಕ್ಕೆ ಹೋಗಿ. ದೇವಸ್ಥಾಕ್ಕೆ ಹೋದರೆ ಏನು ಆಗಲ್ಲ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಹೇಳಿದ್ದಾರೆ.

ಅವರು ನಗರದಲ್ಲಿ ಮಹಿಷ ದಸರಾದಲ್ಲಿ ಮಾತನಾಡಿ, ಬುದ್ಧರನ್ನು ಹೊಗಳುವ ಭರದಲ್ಲಿ ಹಿಂದೂ ಧರ್ಮದ ಬಗ್ಗೆ ಹೀನವಾಗಿ ಮಾತನಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಜ್ಞಾನದ ಹಸಿವು ಇಲ್ಲದ ಕಾರಣ ಹಲವರು ಗುಲಾಮರಾಗಿದ್ದಾರೆ. ಹಿಂದೂ ಧರ್ಮ ಅಂದರೆ ಅದು ಹಿಂದೂಗಳ ಧರ್ಮ ಅಲ್ಲ. ಹಿಂದೂ ಧರ್ಮ ಅಂದರೆ ಅದು ಬ್ರಾಹ್ಮಣರ ಧರ್ಮ. ಹಿಂದೂ ಎಂದರೆ ಹಿಂದಕ್ಕೆ ಹೋಗುವ ಜನ. ಹಿಂದೂಗಳು ಮುಂದಕ್ಕೆ ಬಾರದ ಜನ ಹಾಗೂ ಬೇರೆಯವರನ್ನು ಮುಂದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಗಂಡಸರನ್ನು ಮಾತ್ರ ಬ್ರಾಹ್ಮಣರು ಅಂತಾರೆ. ಹೆಂಗಸರನ್ನು ಬ್ರಾಹ್ಮಣರು ಎನ್ನಲ್ಲಾ, ಅವರನ್ನು ಶೂದ್ರರು ಅಂತಾರೆ. ದೇವಸ್ಥಾನ ಕಟ್ಟುವುದು ಶೂದ್ರರು. ದೇವಸ್ಥಾನದ ಒಳಗೆ ಇರುವವರ ಬ್ರಾಹ್ಮಣರು. ದೇವಸ್ಥಾನ ಕಟ್ಟಿದ ಶೂದ್ರರನ್ನೇ ಬಿಟ್ಟುಕೊಳ್ಳಲ್ಲ. ನಾವು ಶೂದ್ರರಲ್ಲಾ ಎಂದು ಹೇಳಬೇಕು ಎಂದಿದ್ದಾರೆ.

ತಟ್ಟೆಗೆ ದುಡ್ಡು ಹಾಕ್ತೀರಾ, ಅರ್ಧ ಕಾಯಿ ಇಟ್ಟುಕೊಂಡು ಅರ್ಧ ಕೊಡುತ್ತಾರೆ ಅಷ್ಟೇ. ದೇವಸ್ಥಾನಕ್ಕೆ ಹೋದರೆ ಕಳೆದುಕೊಳ್ಳುತ್ತೇವೆ. ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು. ಮನುಸ್ಮೃತಿಯಲ್ಲಿ ಶೂದ್ರ ಅಂದರೆ ಸೂಳೆಗೆ ಹುಟ್ಟಿದವನು ಅಂತಾ ಇದೆ. ನಾವು ಶೂದ್ರರು ಎಂದು ಒಪ್ಪಿಕೊಳ್ಳಬೇಕಾ ಎಂದು ಪ್ರಶ್ನಿಸಿದ್ದಾರೆ.

Ad
Ad
Nk Channel Final 21 09 2023