Bengaluru 23°C
Ad

ನಾನು ಯಾವ ತಪ್ಪು ಮಾಡಿಲ್ಲ, ರಾಜೀನಾಮೆ ಪ್ರಶ್ನೆಯೇ ಇಲ್ಲ: ಸಿಎಂ

ನಾನು ಯಾಕೆ ರಾಜೀನಾಮೆ ಕೊಡಲಿ. ನಾನು ಏನು ತಪ್ಪು ಮಾಡಿದ್ದೇನೆ ಹೇಳಿ. ನಾನು ಯಾವ ತಪ್ಪು ಮಾಡಿಲ್ಲ. ರಾಜೀನಾಮೆ ಪ್ರಶ್ನೆಗಳೇ ಬರುವುದಿಲ್ಲ. ನನ್ನ ಕಂಡರೇ ವಿಪಕ್ಷಗಳಿಗೆ ಭಯ. ಹೀಗಾಗಿ ಪದೇ ಪದೇ ನನ್ನ ಟಾರ್ಗೆಟ್ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರು: ನಾನು ಯಾಕೆ ರಾಜೀನಾಮೆ ಕೊಡಲಿ. ನಾನು ಏನು ತಪ್ಪು ಮಾಡಿದ್ದೇನೆ ಹೇಳಿ. ನಾನು ಯಾವ ತಪ್ಪು ಮಾಡಿಲ್ಲ. ರಾಜೀನಾಮೆ ಪ್ರಶ್ನೆಗಳೇ ಬರುವುದಿಲ್ಲ. ನನ್ನ ಕಂಡರೇ ವಿಪಕ್ಷಗಳಿಗೆ ಭಯ. ಹೀಗಾಗಿ ಪದೇ ಪದೇ ನನ್ನ ಟಾರ್ಗೆಟ್ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇದು ನನ್ನ ಜೀವನದ ರಾಜಕೀಯ ಸಂಬಂಧದ ಮೊದಲ ಕೇಸ್. ನಾನು ಮತ್ತೆ ಹೇಳುತ್ತಿದ್ದೇನೆ. ಇದು ರಾಜಕೀಯ ಸಂಬಂಧದ ಮೊದಲ ಕೇಸ್. ಪ್ಲೀಸ್ ಅಂಡರ್ ಲೈನ್ ದಿಸ್ ವರ್ಡ್ ಎಂದು ಹೇಳಿದ್ದಾರೆ.

ಕಾನೂನು ಹೋರಾಟವನ್ನ ನಮ್ಮ ವಕೀಲರು ಮಾಡುತ್ತಾರೆ. ಇವತ್ತು ಅಪಾರ ಸಂಖ್ಯೆಯಲ್ಲಿ ಬೆಂಬಲಿಗರ ನನ್ನ ಸ್ವಾಗತಕ್ಕೆ ಬಂದಿದ್ದಾರೆ. ನಾನು ಯಾರನ್ನೂ ಕರೆದಿಲ್ಲ, ಅವರೇ ಪ್ರೀತಿಯಿಂದ ಬಂದಿದ್ದಾರೆ. ನನಗೆ ಯಾವ ಭಯವೂ ಇಲ್ಲ. ನಾನು ಭಯಗೊಂಡ ರೀತಿ ಕಾಣುತ್ತಿದ್ದೀನಾ? ಅಂತ ಪ್ರಶ್ನಿಸಿದ್ದಾರೆ.

 

Ad
Ad
Nk Channel Final 21 09 2023