Bengaluru 22°C
Ad

ರಾಜ್ಯದಲ್ಲಿ ಬಿಜೆಪಿ ಮುನ್ನಡೆಯನ್ನೇ ನಿರೀಕ್ಷೆ ಮಾಡಿದ್ದೆ: ಯದುವೀರ್ ಒಡೆಯರ್

ಫಲಿತಾಂಶ ಅಷ್ಟೇ ನಮ್ಮ ನಿರೀಕ್ಷೆ. ಸಚಿವ ಸ್ಥಾನದ ಬಗ್ಗೆ ಮುಂದೆ ನೋಡೋಣ ಎಂದು ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಹೇಳಿದ್ದಾರೆ.

ಮೈಸೂರು: ಫಲಿತಾಂಶ ಅಷ್ಟೇ ನಮ್ಮ ನಿರೀಕ್ಷೆ. ಸಚಿವ ಸ್ಥಾನದ ಬಗ್ಗೆ ಮುಂದೆ ನೋಡೋಣ ಎಂದು ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಹೇಳಿದ್ದಾರೆ.

ಎಕ್ಸಿಟ್ ಪೋಲ್  ಕುರಿತು ಮೈಸೂರಿನಲ್ಲಿ  ಮಾತನಾಡಿದ ಅವರು, ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿಗೆ  ಮುನ್ನಡೆ ಸಿಕ್ಕಿರುವುದು ಖುಷಿಯ ವಿಚಾರ. ಜನ ಮತ್ತೊಮ್ಮೆ ಸಮಾಜ ಸೇವೆ ಮಾಡಲು ಆಶೀರ್ವಾದ ಮಾಡಿದ್ದಾರೆ ಎಂದರು.

ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ. ಕೇಂದ್ರದಲ್ಲಿ ಸಚಿವ ಸ್ಥಾನದ ಕುರಿತು ನನಗೆ ಯಾವುದೇ ನಿರೀಕ್ಷೆಯಿಲ್ಲ. ರಾಜ್ಯದಲ್ಲಿ ಬಿಜೆಪಿ ಮುನ್ನಡೆಯನ್ನೇ ನಿರೀಕ್ಷೆ ಮಾಡಿದ್ದೆವು. ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬಂದಿದೆ ಎಂದು ಹೇಳಿದರು.

Ad
Ad
Nk Channel Final 21 09 2023
Ad