ಹುಣಸೂರು: ತಂಬಾಕು ಹದ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಬಿ ಬಿದ್ದು, ಹೊಗೆ ಸೊಪ್ಪಿನೊಂದಿಗೆ ಬ್ಯಾರನ್ ಮೋಲ್ಚಾವಣಿ ಸಂಪೂರ್ಣ ಸುಟ್ಟು ಹೋಗಿದ್ದು, ಲಕ್ಷಾಂತರ ರೂ ನಷ್ಟ ಉಂಟಾಗಿರುವ ಘಟನೆ ತಾಲೂಕಿನ ಕಾಮಗೌಡನಹಳ್ಳಿಯಲ್ಲಿ ನಡೆದಿದೆ.
ತಾಲೂಕಿನ ಹನಗೋಡು ಹೋಬಳಿಯ ಕಾಮಗೌಡನಹಳ್ಳಿಯಲ್ಲಿ ಘಟನೆ ನಡೆದಿದ್ದು, ಸೋಮೇಗೌಡರಿಗೆ ಸೇರಿದ ತಂಬಾಕು ಹದ ಮಾಡುವ ಬ್ಯಾರನ್‌ಗೆ ಹದಗೊಳಿಸಲು ಹೊಗೆಸೊಪ್ಪು ಏರಿಸಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಸಂಪೂರ್ಣ ಸುಟ್ಟುಕರಕಲಾಗಿದ್ದು, ಗ್ರಾಮಸ್ಥರು ಮಾಹಿತಿ ನೀಡಿದ ಮೇರೆಗೆ ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿ ಬೆಂಕಿ ನಂದಿಸಿ ಅಕ್ಕಪಕ್ಕಕ್ಕೆ ಹರಡುವುದನ್ನು ತಪ್ಪಿಸಿದ್ದಾರೆ. ಬ್ಯಾರನ್ ಮೇಲ್ಚಾವಣಿ ಸಹ ಬೆಂಕಿಗಾಹುತಿಯಾಗಿದೆ. ಅಂದಾಜು 7ಲಕ್ಷ ರೂ. ನಷ್ಟ ಉಂಟಾಗಿದೆ
Ad