ನಂಜನಗೂಡು: ಎದೆ ಎತ್ತರಕ್ಕೆ ಬೆಳೆದಿರುವ ಮಕ್ಕಳಿದ್ದಾರೆ ಜವಾಬ್ದಾರಿ ಇಲ್ಲದ ಗಂಡ ದಿನನಿತ್ಯ ಕಿರುಕುಳ ನೀಡಿ ನರಕ ಯಾತನೆ ಕೊಡುತ್ತಿದ್ದಾನೆ ಮುಂಬರುವ ದಿನಗಳಲ್ಲಿ ಇದೇ ರೀತಿ ಆದರೆ ಬದುಕು ಸಾಗಿಸುವುದು ಹೇಗೆ ? ಮಕ್ಕಳಿಗೆ ಭವಿಷ್ಯ ರೂಪಿಸುವುದು ಹೇಗೆ ? ಇದನ್ನೆಲ್ಲಾ ಅರ್ಥ ಮಾಡಿಕೊಂಡ ಮನೆ ಒಡತಿ ಗಂಡನಿಗೆ ಪೊಲೀಸರ ಮೂಲಕ ಬೆದರಿಸಿ ಬುದ್ಧಿ ಕಲಿಸುವ ಸಲುವಾಗಿ ಹಾಗೆಯೇ ದಿನನಿತ್ಯ ನೀಡುತ್ತಿದ್ದ ಕಿರುಕುಳವನ್ನು ತಾಳಲಾರದೆ ರಕ್ಷಕರಾಗಿರುವ ಆರಕ್ಷಕರ ಮೊರೆ ಹೋಗಿ ನ್ಯಾಯ ಕೇಳಲು ತೆರಳಿದ ಸಂದರ್ಭದಲ್ಲಿ ಗೃಹಿಣಿಯನ್ನು ಚುಚ್ಚು ಮಾತಿನಿಂದ ಪೊಲೀಸರು ನಿಂದಿಸಿದ ಹಿನ್ನೆಲೆ ಮನನೊಂದ ಗೃಹಿಣಿ ವಿಷ ಸೇವಿಸಿ ಆಸ್ಪತ್ರೆ ಸೇರಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನಲ್ಲಿ ನಡೆದಿದೆ.
ನಂಜನಗೂಡು ತಾಲ್ಲೂಕಿನ ಹುರ ಗ್ರಾಮದ ಮಹದೇವ ಎಂಬುವರ ಪುತ್ರಿ ಮಹಾಲಕ್ಷ್ಮಿ ಎಂಬುವರನ್ನು ಕಳೆದ 9 ವರ್ಷಗಳ ಹಿಂದೆ ಸರಗೂರು ತಾಲ್ಲೂಕಿನ ಮುಳ್ಳೂರು ಗ್ರಾಮದ ಮಂಜು ಎಂಬಾತನಿಗೆ 160 ಗ್ರಾಂ ಚಿನ್ನ, ಒಂದು ಬೈಕ್, ನಾಲ್ಕು ಲಕ್ಷ ನಗದು ಹಣ ನೀಡಿ ಖಾಸಗಿ ಕಲ್ಯಾಣ ಮಂಟಪದಲ್ಲಿ ಅದ್ದೂರಿ ವಿವಾಹ ಮಾಡಿಕೊಡಲಾಗಿತ್ತು.
ಕೇವಲ ಒಂದು ವರ್ಷಗಳ ಕಾಲ ಮಾತ್ರ ಮನೆ ಕಟ್ಟಲು ಗಂಡ ಹೆಂಡತಿ ಅನೋನ್ಯವಾಗಿ ಜೀವನ ನಡೆಸಿದರು. ಮಹಾಲಕ್ಷ್ಮಿ ಗಂಡ ಮಂಜು ಮನೆಯವರ ಮಾತು ಕೇಳಿಕೊಂಡು ದಿನನಿತ್ಯ ಕಿರುಕುಳ ನೀಡಲು ಪ್ರಾರಂಭಿಸಿದನು. ಒಂದು ಗಂಡು ಮತ್ತು ಒಂದು ಹೆಣ್ಣು ಇಬ್ಬರ ಮಕ್ಕಳ ಜೊತೆಗೂಡಿ ಅನೊನ್ಯವಾಗಿ ಜೀವನ ಸಾಗಿಸುವ ಬದಲಾಗಿ ಪತಿ ಮಂಜು ದಿನನಿತ್ಯ ಕಿರುಕುಳ ನೀಡುತ್ತಿದ್ದನು. ತಂದೆಯ ಮನೆಯಿಂದ ವರದಕ್ಷಿಣೆ ತರಲು ಒತ್ತಾಯಿಸಿ ಬೇಡಿಕೆ ಹಿಟ್ಟು ಮಕ್ಕಳ ಮುಂದೆ ಹಲ್ಲೆ ಮಾಡಿ ಮನಬಂದಂತೆ ನಿಂದಿಸುತ್ತಿದ್ದನು. ಈ ಚಿತ್ರ ಹಿಂಸೆಯನ್ನು ತಳ್ಳಲಾರದ ಮಹಾಲಕ್ಷ್ಮಿ ಸಮೀಪದಲ್ಲಿರುವ ಸರಗೂರು ಪೊಲೀಸರ ಮೊರೆ ಹೋಗಿ ಬುದ್ಧಿ ಕಲಿಸಲು ಮುಂದಾದಳು.
ಮಹಾಲಕ್ಷ್ಮಿ ಮತ್ತು ಸಹೋದರರ ಜೊತೆಗೂಡಿ ಠಾಣೆಗೆ ತೆರಳಿದ ಸಂದರ್ಭದಲ್ಲಿ ಸರಗೂರು ಪೊಲೀಸ್ ಠಾಣೆಯ ಪಿಎಸ್ಐ ನಂದೀಶ್ ಮತ್ತು ದಫೇದಾರ್ ಚಂದ್ರು ಎಂಬುವರು ಮಹಾಲಕ್ಷ್ಮಿಯನ್ನು ಗಂಡನನ್ನು ಬಿಟ್ಟು ಎಷ್ಟು ವರ್ಷಗಳಾಗಿದೆ ಗಂಡ ಹೊರತುಪಡಿಸಿದರೆ ಬೇರೆ ಯಾರೂ ಕೂಡ ಮನೆಯ ಹತ್ತಿರ ಬರುವುದಿಲ್ಲವೇ ಎಂದು ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಸಹೋದರರ ಮುಂದೆ ಲುಚ್ಚ ಮಾತುಗಳನ್ನು ಹಾಡಿ ಚುಚ್ಚಿದ ಪೊಲೀಸರ ನಡೆಯಿಂದ ಬೇಸತ್ತು ಗೃಹಿಣಿ ಮಹಾಲಕ್ಷ್ಮಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ರಕ್ಷಕರ ಬಳಿ ನ್ಯಾಯ ಕೇಳಲು ತೆರಳಿದ ಗೃಹಿಣಿಯ ಜೊತೆ ಅನುಚಿತವಾಗಿ ನಡೆದುಕೊಂಡ ಸರಗೂರು ಪೊಲೀಸರ ವರ್ತನೆಗೆ ಗೃಹಿಣಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕುಲಕುಶವಾಗಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಗೃಹಿಣಿಯ ಕುಟುಂಬಕ್ಕೆ ನ್ಯಾಯ ಕಲ್ಪಿಸಿಕೊಡಬೇಕಿದೆ.