News Karnataka Kannada
Monday, April 22 2024
Cricket
ಹಾಸನ

ಎತ್ತಿನಹೊಳೆ ಯೋಜನೆ: ತಹಶೀಲ್ದಾರ್ ಮಮತಾ ಅವರಿಂದ ಸ್ಥಳ ಪರಿಶೀಲನೆ

Yettinahole project: Tahsildar Mamta inspects site
Photo Credit : News Kannada

ಬೇಲೂರು: ನೆರೆಯ ಜಿಲ್ಲೆಗಳಿಗೆ ನೀರು ಒದಗಿಸುವ ಮಹತ್ವಾ ಕಾಂಕ್ಷೆಯ ಎತ್ತಿನಹೊಳೆ ಯೋಜನೆಯ ಕಾಮಗಾರಿ ಭೂ ಸ್ವಾಧೀನದ ವಿವಾದಕ್ಕೆ ಸಂಬಂಧಿ ಸಿದಂತೆ ಇಂದು ತಹಶೀಲ್ದಾರ್ ಮಮತಾ. ಎಂ ಅವರಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ತಾಲ್ಲೂಕಿನ ಅಡಗೂರು ವೃತಕ್ಕೆ ಸಂಬಂಧಸಿದ ಕುಮಾರಿಹಳ್ಳಿ ಗ್ರಾಮದ ತೋಣಶೆಟ್ಟಿ ಎಂಬ ರೈತನ ಜಮೀನು ಎತ್ತಿನಹೊಳೆ ಯೋಜನೆಗೆ ಭೂಸ್ವಾಧೀನವಾಗಿದ್ದು, ಮಾರುಕಟ್ಟೆ ಮೌಲ್ಯ, ೧೨% ಹೆಚ್ಚುವರಿ, ಮನೆ, ಬೆಳೆ ಎಲ್ಲಾ ಸೇರಿ ಒಟ್ಟು ೧.೪೫.೦೦,೦೦೦(ಒಂದು ಕೋಟಿ ನಲವತ್ತೈದು ಲಕ್ಷ) ಪರಿಹಾರ ಬಂದಿದ್ದು ಇವರ ಕುಟುಂಬದವರೇ ಸದರಿ ಹಣ ಪಾವತಿಗೆ ತಕರಾರು ಸಲ್ಲಿಸಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರು ವುದರಿಂದ ಪರಿಹಾರ ಹಣವನ್ನು ಕೋರ್ಟ್ ನಲ್ಲಿ ಡಿಪಾಸಿಟ್ ಇಡಲಾಗಿದೆ.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಿಯಮಾನುಸಾರ ಪರಿಹಾರ ಪಡೆದ ಅಮಾಯಕ ರೈತರನ್ನು ದಲ್ಲಾಳಿಗಳು ಹೆಚ್ಚು ಪರಿಹಾರ ಕೊಡಿಸುತ್ತೇವೆ ಎಂದು ಅರ್ಹ ಭೂಮಾಲೀಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಅಂತಹವರ ವಿರುದ್ಧ ಈಗಾಗಲೇ ದೂರುಗಳು ಕೇಳಿ ಬಂದಿದೆ, ಅಂತಹ ಯಾವುದೇ ವ್ಯಕ್ತಿಗಳನ್ನು ನಂಬಿ ರೈತರು ಮೋಸ ಹೋಗದಿರಲು ಮನವಿ ಮಾಡಿರುವ ಮಮತಾ ಅವರು ಪರಿಹಾರದ ಹಣದಲ್ಲಿ ವ್ಯತ್ಯಾಸವಿದ್ದರೆ ಮೇಲಾಧಿಕಾರಿ ಗಳನ್ನು ಭೇಟಿ ಮಾಡಲು ತಿಳಿಸಿದ್ದಾರೆ. ಸದರಿ ಪ್ರಕರಣದಲ್ಲಿಯೂ ಸಹಾ ಕುರುಡರಾದ ಅಮಾಯಕ ರೈತ ಮಧ್ಯವರ್ತಿಗಳ ಆಶ್ರಯ ಹೋಗಿರುವುದು ತಿಳಿದುಬಂದಿದೆ.

ಎತ್ತಿನಹೊಳೆ ಯೋಜನೆಯ ಇಂಜಿನಿಯರ್ ಗೆ ಗುತ್ತಿಗೆದಾರರಿಗೆ ತಾತ್ಕಾಲಿಕವಾಗಿ ಅಂಗವಿಕಲ ರೈತನಿಗೆ ತೊಂದರೆ ನೀಡದಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು