News Karnataka Kannada
Wednesday, April 24 2024
Cricket
ಹಾಸನ

ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಂಧಲೆ: ಬೆಳೆ ನಾಶ

Wild elephant attack in Hassan district, damages crops
Photo Credit : News Kannada

ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ದಾಂಧಲೆ ಮುಂದುವರಿದಿದ್ದು. ಒಂಟಿಸಲಗವೊಂದು ಮನೆಯ ಸಮೀಪವೇ ಬಂದು ಅಪಾರ ಪ್ರಮಾಣದ ಬೆಳೆ ನಾಶ ಮಾಡಿರುವ ಘಟನೆ ಬೇಲೂರು ತಾಲ್ಲೂಕಿನ ದೊಡ್ಡಸಾಲಾವರ ಗ್ರಾಮದಲ್ಲಿ ನಡೆದಿದೆ.

ನಿನ್ನೆ ರಾತ್ರಿ ಜಿ.ಪಂ. ಮಾಜಿ ಸದಸ್ಯ ವೈ.ಎನ್.ಕೃಷ್ಣೇಗೌಡರ ಮನೆಯ ಸಮೀಪ ಬಂದಿರುವ ಒಂಟಿಸಲಗ ಮನೆಯ ಹಿಂಬ ದಿಯ ತೋಟದಲ್ಲಿ ಬೆಳಿದಿದ್ದ ಅಡಿಕೆ, ಬಾಳೆ ಹಾಗೂ ತೆಂಗಿನ ಗಿಡಗಳನ್ನು ನಾಶ ಮಾಡಿದೆ.

ಅಷ್ಟೇ ಅಲ್ಲದೆ ಮನೆಯ ಹಿಂದಿನ ಕೋಣೆಯಲ್ಲಿಟ್ಟಿದ್ದ ಬಾಳೆಗೋನೆಗಳನ್ನು ಹೊರ ಎಳೆದು ತಿಂದು ಹಾಕಿದ್ದು, ಕಾಡಾನೆ ಕಂಡ ಕೃಷ್ಣೇಗೌಡ ಕುಟುಂಬಸ್ಥರು ಕೆಲಕಾಲ ಆತಂಕಗೊಂಡಿದ್ದರು.

ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಕೃಷ್ಣೇಗೌಡ ಮನೆಯ ಆವರಣದಲ್ಲಿದ್ದ ಒಂಟಿಸಲಗ ನಿಂತಿದ್ದು ಕಾಡಾನೆ ವಿಡಿಯೋ ಕೃಷ್ಣೇಗೌಡರ ಪುತ್ರನ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಒಂಟಿಸಲಗವನ್ನು ಕಾಡಿಗೆ ಓಡಿಸಬೇಕೆಂದು ಕೃಷ್ಣೇಗೌಡ ಒತ್ತಾಯಿಸಿದ್ದಾರೆ. ಕಳೆದ ಎರಡ ದಶಕಗಳಿಂದ ಕಾಡಾನೆಗಳ ಹಾವ ಳಿಯಿಂದ ಮಲೆನಾಡು ಭಾಗದ ಜನತೆ ಹೈರಾಣಾಗಿ ಹೋಗಿದ್ದಾರೆ.

ಜಿಲ್ಲೆಯಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿ. ಕಾಫಿ ತೋಟದಲ್ಲಿ ಹಿಂಡು ಹಿಂಡಾಗಿ ಕಾಡಾನೆಗಳ ಸಂಚಾರ. ಕಾಫಿ ತೋಟವನ್ನೆಲ್ಲಾ ನಾಶ ಮಾಡು ತ್ತಿರುವ ಕಾಡಾನೆಗಳ ಹಿಂಡು.

ಹಾಸನ ಜಿಲ್ಲೆಯಲ್ಲಿ ಕಾಡಾ ನೆಗಳ ಹಾವಳಿ ಮೀತಿಮೀರಿದೆ. ಕಾಫಿ ತೋಟಗಳಲ್ಲಿ ಹಿಂಡು ಹಿಂಡಾಗಿ ಕಾಡಾನೆಗಳು ಸಂಚಾರ ಮಾಡಿ ಕಾಫಿ ತೋಟವನ್ನೆಲ್ಲಾ ನಾಶ ಮಾಡಿವೆ. ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಅಂಕಿಹಳ್ಳಿಪೇಟೆ ಗ್ರಾಮದ ಬಳಿ ಕಾಫಿ ತೋಟವೊಂದರಲ್ಲಿ ಒಂದೇ ಗುಂಪಿನಲ್ಲಿರುವ ೩೦ ಕ್ಕೂ ಹೆಚ್ಚು ಕಾಡಾನೆಗಳಿದ್ದು, ಕಾಫಿಯ ಜೊತೆಗೆ ರೈತರು ಬೆಳೆದಿರುವ ಬೆಳೆಗಳನ್ನೆಲ್ಲಾ ತುಳಿದು ಹಾಳು ಮಾಡುತ್ತಿವೆ.

ಗಜಪಡೆ ಗುಂಪುನ್ನು ಕಂಡು ಸ್ಥಳೀಯರು ಆತಂಕಕ್ಕೊಳ ಗಾಗಿ ದ್ದಾರೆ. ಗ್ರಾಮಸ್ಥರಿಗೆ ಕಾಡಾನೆಗಳ ಚಲನವಲಗಳ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮಾಹಿತಿ ನೀಡುತ್ತಿದ್ದು, ಕಾಡಾನೆಗಳ ಹಾವ ಳಿಗೆ ಶಾಶ್ವತ ಪರಿಹಾರ ಕಲ್ಪಿಸು ವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು