News Karnataka Kannada
Monday, April 22 2024
Cricket
ಹಾಸನ

ಕಾಡಾನೆ ದಾಳಿ: ಕಾಫಿ ತೋಟ ನಾಶ, ಸೂಕ್ತ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ

Wild elephant attack: Coffee plantation destroyed, villagers demand compensation
Photo Credit : News Kannada

ಬೇಲೂರು: ಕಾಡಾನೆಗಳ ಹಿಂಡು ದಾಳಿ ನಡೆಸಿ ಕಾಫಿ ತೋಟ ನಾಶ ಮಾಡುವುದ ರೊಂದಿಗೆ ಮನೆಯ ಕಾಂಪೌಂಡ್ ದ್ವಂಸ ಮಾಡಿರುವ ಘಟನೆ ತಾಲೂಕಿನ ಲಕ್ಕುಂದ ಗ್ರಾಮದಲ್ಲಿ ಜರುಗಿದೆ.

ತಾಲೂಕಿನ ಬಿಕ್ಕೋಡು ಹೋಬಳಿಯ ಲಕ್ಕುಂದ ಗ್ರಾಮದ ಲಕ್ಷ್ಮಮ್ಮ ಎಂಬುವರ ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಇಡೀ ತೋಟದಲ್ಲಿ ಓಡಾಡಿ ಕಾಫಿ ಗಿಡಗಳನ್ನು ನಾಶ ಮಾಡಿವೆ.

ತೋಟದಲ್ಲಿ ಹುಲಸಾಗಿ ಬೆಳದಿದ್ದ ಕಾಫಿ, ಬಾಳೆ, ಅಡಿಕೆ ಗಿಡಗಳನ್ನು ತುಳಿದು ನಾಶ ಮಾಡಿರುವ ಕಾಡನೆಗಳ ಹಿಂಡು, ನಂತರ ಮನೆಯ ಕಾಂಪೌಂಡ್ ತುಳಿದು ಹಾಕಿರುವ ಹಿನ್ನೆಲೆಯಲ್ಲಿ ಲಕ್ಷ್ಮಮ್ಮ ಕುಟುಂಬ ಆತಂಕಕ್ಕೆ ಒಳಗಾಗಿದ್ದಾರೆ .

ಅಪಾರ ಪ್ರಮಾಣದಲ್ಲಿ ನಷ್ಟದಿಂದ ತೋಟದ ಮಾಲೀಕರು ಕಂಗಾಲಾಗಿದ್ದು ಕಾಡಾನೆಗಳ ಭಯದಿಂದಾಗಿ ತೋಟಕ್ಕೆ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ.

ಸ್ಥಳಕ್ಕೆ ಅರಣಾಧಿಕಾರಿಗಳು ಬರುವಂತೆ ಗ್ರಾಮಸ್ಥರು ಒತ್ತಾಯಿಸಿದ್ದು ಕಾಡಾನೆಗಳನ್ನು ಕಾಡಿಗಟ್ಟುವಂತೆ ಹಾಗೂ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಮತ್ತು ಲಕ್ಷ್ಮಮ್ಮ ಮನವಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು