News Karnataka Kannada
Sunday, April 14 2024
Cricket
ಹಾಸನ

ಲಕ್ಷಾಂತರ ರೂ. ಮೌಲ್ಯದ ಹಸುಗಳನ್ನು ಕಳೆದುಕೊಂಡು ಕಂಗಾಲಾದ ರೈತ

Sindhi cows stolen: Farmer loses two cows tied to his barn
Photo Credit : News Kannada

ಹಾಸನ: ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಾಲು ಕೊಡುವ ಎರಡು ಸಿಂಧಿ ಹಸುಗಳನ್ನು ಕಳ್ಳತನ ಮಾಡಿರುವ ಘಟನೆ ಚಿಕ್ಕಕಡಲೂರು ಗ್ರಾಮದಲ್ಲಿ ನಡೆದಿದೆ.

ಹಾಸನ ತಾಲ್ಲೂಕಿನ, ದುದ್ದ ಹೋಬಳಿ ಚಿಕ್ಕಕಡಲೂರು ಗ್ರಾಮದ ಮಂಜೇಗೌಡ ಎಂಬುವವರಿಗೆ ಸೇರಿದ ಎರಡು ಸಿಂಧಿ ಹಸುಗಳನ್ನು ಮೇಯಿಸಿ ಹಾಲು ಕರೆದು ತಮ್ಮ ತೋಟದ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿ ಬೀಗ ಹಾಕಿಕೊಂಡು ಬಂದಿದ್ದರು.
ರಾತ್ರಿ ವೇಳೆ ಕೊಟ್ಟಿಗೆ ಬೀಗ ಮುರಿದು ಒಳನುಗ್ಗಿರುವ ಜಾನುವಾರು ಕಳ್ಳರು ಒಂದುವರೆ ಲಕ್ಷ ಬೆಲೆಬಾಳುವ ಎರಡು ಸಿಂಧಿ ಹಸುಗಳನ್ನು ಕದ್ದೊಯ್ದಿದ್ದಾರೆ

ಜೀವನಾಧಾರವಾಗಿದ್ದ ಎರಡು ಸಿಂಧಿ ಹಸುಗಳನ್ನು ಕಳೆದುಕೊಂಡ ರೈತ ಮಂಜೇಗೌಡ ಕಂಗಾಲಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಚಿಕ್ಕಕಡಲೂರು ಗ್ರಾಮದಲ್ಲಿ ಹೆಚ್ಚುತ್ತಿರುವ ಕಳೆದ ಎರಡು ವರ್ಷಗಳಿಂದ ಹಸುಗಳ ಕಳ್ಳತನ ಪ್ರಕರಣಗಳು ನಡೆಯುತ್ತಲೇ ಇವೆ. ಒಂದು ತಿಂಗಳ ಹಿಂದಷ್ಟೇ ಒಂದೇ ಗ್ರಾಮದ ದಿನ ಏಳು ಮನೆ, ದೇವಸ್ಥಾನದಲ್ಲಿ ಕಳ್ಳತನ ನಡೆದಿತ್ತು.

ಗ್ರಾಮಕ್ಕೆ ರಾತ್ರಿ ವೇಳೆ ನುಗ್ಗುತ್ತಿರುವ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಕೊಟ್ಟಿಗೆಯಲ್ಲಿದ್ದ ಕುರಿ, ಹಸುಗಳನ್ನು ಕಳವು ಮಾಡುತ್ತಿದ್ದಾರೆ. ಪೊಲೀಸರಿಗೆ ದೂರು ನೀಡಿದರು ಕಳ್ಳರನ್ನು ಪತ್ತೆ ಮಾಡುವಲ್ಲಿ ವಿಫಲವಾಗಿದ್ದಾರೆ ಎಂದು ಪೊಲೀಸರ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು