News Karnataka Kannada
Tuesday, April 23 2024
Cricket
ಹಾಸನ

ಕಾರು ಕೈ ಸೇರುವ ಮುನ್ನವೇ ಇಎಂಐ ಕಟ್ಟಲು ಮೆಸೆಜ್ ರವಾನೆ!

ಇಎಂಐ
Photo Credit : News Kannada

ಹಾಸನ : ಬುಕ್ ಮಾಡಿದ್ದ ಕಾರು ಕೈ ಸೇರುವ ಮುನ್ನವೇ ಮೊದಲ ತಿಂಗಳ ಕಂತಿನ ಇಎಂಐ ಮೆಸೇಜ್ ಬಂದ ವಿಶೇಷ ಪ್ರಕರಣ ಹಾಸನ ನಗರದಲ್ಲಿ ಬೆಳಕಿಗೆ ಬಂದಿದೆ.

ನಗರದ, ಡೈರಿ ವೃತ್ತದಲ್ಲಿ ಇರುವ ಟೊಯೋಟಾ ಶೋ ರೂಂ ವಿರುದ್ಧ ಈ ಆರೋಪ ಕೇಳಿ ಬಂದಿದ್ದು, ಜ.೨೮ ರಂದು ಇನ್ನೋವಾ ಐಕ್ರಾಸ್ ಬುಕ್ ಮಾಡಿದ್ದ ಸಂದೇಶ ಬಂದಿದೆ.

ಆಲೂರು ತಾಲ್ಲೂಕಿನ, ಕ್ಯಾತನಹಳ್ಳಿ ಗ್ರಾಮದ ನಿವಾಸಿ ಸಂದೇಶ್ ಎಂಬುವವರಿಗೆ ಈ ಸಂದೇಶ ಬಂದಿದೆ. ಇನ್ನೋವಾ ಐಕ್ರಾಸ್ ಕಾರಿನ ಬದಲಿಗೆ, ಇನ್ನೋವಾ ಕ್ರಿಷ್ಟಾ ನೀಡುತ್ತೇವೆ ಎಂದು ಶೋ ರೂಂ ಸಿಬ್ಬಂದಿ ಹೇಳಿದರು.

ಕಾರಿಗಾಗಿ ೨೧ ಲಕ್ಷದ ೩೯ ಸಾವಿರ ಹಣ ಪಾವತಿಸಿರುವ ಸಂದೇಶ ರವಾನಿಸಿದೆ. ಆನಂತರ ದಲ್ಲಿ ೮೦ ಕಿಲೋಮೀಟರ್ ಸ್ಪೀಡ್ ಲಿಮಿಟ್‌ರುವ ಕಾರು ಮಾತ್ರ ಇದ್ದು ಅದನ್ನೇ ತೆಗೆದುಕೊಳ್ಳಿ ಎಂದು ಸಿಬ್ಬಂದಿ ಹೇಳಿದ್ದನು. ಈ ಬಗ್ಗೆ ಶೋರೂಂ ವ್ಯವಸ್ಥಾಪಕರ ಗಮನಕ್ಕೆ ಸಂದೇಶ್ ಅವರು ತಂದಿದ್ದರು.

ಜುಲೈ ತಿಂಗಳ ಅಂತ್ಯದೊಳಗೆ ನೀವು ಬುಕ್ ಮಾಡಿದ್ದ ಕಾರು ಡೆಲಿವರಿ ನೀಡುವುದಾಗಿ ಶೊರೂಂ ವ್ಯವಸ್ಥಾಪಕರು ಭರವಸೆ ನೀಡಿದ್ದರು, ಆದರೆ ನಿನ್ನೆ ಸಂಜೆ ೪೧,೧೪೯ ಸಾವಿರ ಇಎಂಐ ಹಣ ಪಾವತಿಸುವಂತೆ ಸಂದೇಶ್ ಅವರ ಮೊಬೈಲ್‌ಗೆ ಮಸೇಜ್ ಬಂದಿದೆ.

ಈ ಮೆಸೆಜ್ ನೋಡಿದ ಸಂದೇಶ್ ಅವರು ಮೇಸೆಜ್ ಕಂಡು ಶಾಕ್ ಆಗಿದ್ದಾರೆ. ಮೆಸೇಜ್ ಬಂದ ನಂತರ ಶೋ ರೂಂಗೆ ಭೇಟಿ ನೀಡಿ ವಿಚಾರಿ ಸಿದರು. ಆಗ ಬುಕ್ ಮಾಡಿದ ಕಾರಿನ ಬದಲಾಗಿ ಬೇರೆ ಕಾರು ಕೊಡುವುದಾಗಿ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಹೇಳಿದ್ದಾರೆ.

೫ ಲಕ್ಷ ಕ್ಯಾಶ್ ಹಾಗೂ ೧೫ ಲಕ್ಷ ಲೋನ್ ಹಣ ಸೇರಿ ಒಟ್ಟು ೨೦ ಲಕ್ಷ ಹಣ ಪಾವತಿಸಿದ್ದೇನೆ . ಆದರೆ ಕಾರು ಡೆಲಿವರಿ ಆಗದೆ ಅವರು ಕೇವಲ ಇಎಂಐ ಕಳುಹಿಸಿದ್ದಾರೆ ಶೋರೂಂನ ಸಿಬ್ಬಂದಿಗಳಿಂದ ಗ್ರಾಹಕರಿಗೆ ಮೋಸವಾಗುತ್ತಿದೆ. ಇದರ ಬಗ್ಗೆ ಸಂಸ್ಥೆ ತನಿಖೆ ನಡೆಸಬೇಕು. ಯಾವುದೇ ಗ್ರಾಹಕರಿಗೆ ಈ ರೀತಿ ಅನ್ಯಾಯವಾಗಬಾರದು ಎಂದು ದೂರು ನೀಡಿದ್ದಾರೆ.

ಕಾರು ಡೆಲಿವರಿ ನೀಡದೆ ಇಎಂಐ ಕಟ್ಟುವಂತೆ ಮೆಸೇಜ್ ಕಳುಹಿಸಿರುವುದು ಯಾವ ನ್ಯಾಯ ? ಆ ಹಣವನ್ನು ಶೋರೂಂ ನವರೇ ಪಾವತಿಸಬೇಕು. ಮುಂದೆ ಈ ರೀತಿ ಯಾವುದೇ ಗ್ರಾಹಕರಿಗೆ ಮೋಸವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸಂದೇಶ್ ಒತ್ತಾಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು