Categories: ಹಾಸನ

ನುಗ್ಗೇಹಳ್ಳಿ: ದರ್ಶನ್ ಪುಟ್ಟಣ್ಣಯ್ಯರನ್ನು ಕೃಷಿ ಸಚಿವರನ್ನಾಗಿ ಮಾಡುವಂತೆ ಒತ್ತಾಯ

ನುಗ್ಗೇಹಳ್ಳಿ: ರಾಜ್ಯದ ರೈತ ದೃಷ್ಟಿಯಿಂದ ರೈತ ಸಂಘದ ಅಭ್ಯರ್ಥಿಯಾಗಿ ಮೇಲುಕೋಟೆ ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡಿರುವ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಕೃಷಿ ಸಚಿವರನ್ನಾಗಿ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸಮುದ್ರಹಳ್ಳಿ ರಾಮಚಂದ್ರು ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸಿದರು.

ಹೋಬಳಿ ರೈತರ ಸಂಘ ಘಟಕದ ವತಿಯಿಂದ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸುವ ಸಲುವಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರೈತ ಸಂಘದ ಮುಖಂಡರಾಗಿದ್ದ ಪುಟ್ಟಣ್ಣಯ್ಯನವರು ಶಾಸಕರಾಗಿದ್ದ ಸಂದರ್ಭದಲ್ಲಿ ಯಾವುದೇ ಸರ್ಕಾರ ವಿದ್ದರೂ ರೈತರ ಪರವಾಗಿ ಮಾತನಾಡುತ್ತಿದ್ದರು ಕೆಲವು ವಿಚಾರಗಳಲ್ಲಿ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಸಹ ಮಾಡುತ್ತಿದ್ದರು ಅವರು ಇಡೀ ರಾಜ್ಯದ ರೈತರ ಪರವಾಗಿ ಅಧಿವೇಶನಗಳಲ್ಲಿ ಧ್ವನಿ ಎತ್ತುತ್ತಿದ್ದರು.

ಅವರ ಪುತ್ರರಾದ ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ಶಾಸಕರಾಗಿ ಆಯ್ಕೆಗೊಂಡಿದ್ದು ಅವರ ಗೆಲುವಿಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನೇ ಹಾಕದೆ ರೈತ ಸಂಘದ ಅಭ್ಯರ್ಥಿಗೆ ಹೆಚ್ಚಿನ ಸಹಕಾರ ನೀಡಿ ಅವರ ಆಯ್ಕೆಗೆ ಸಹಕರಿಸಿದರು. ಇದರ ಜೊತೆಗೆ ರೈತ ಸಂಘದ ಮುಂಚೂಣಿ ನಾಯಕನಾಗಿರುವ ಹಾಗೂ ಶಾಸಕರಾಗಿ ಆಯ್ಕೆಗೊಂಡಿರುವ ದರ್ಶನ್ ಪುಟ್ಟಣ್ಣಯ್ಯನವರಿಗೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಕೃಷಿ ಖಾತೆ ನೀಡುವಂತೆ ಒತ್ತಾಯಿಸಲಾಗುತ್ತಿದ್ದು ನಮ್ಮ ಮನವಿಗೆ ಕಾಂಗ್ರೆಸ್ ಪಕ್ಷ ಸ್ಪಂದಿಸುವ ನಂಬಿಕೆ ನಮಗಿದೆ ಎಂದರು.

ಹೋಬಳಿ ಅಧ್ಯಕ್ಷ ಸೋಮ ಶೇಖರಯ್ಯ ಮಾತನಾಡಿದರು ಸಭೆಯಲ್ಲಿ ರೈತ ಸಂಘದ ಪ್ರಮುಖರಾದ ಹುಲ್ಲೇನಹಳ್ಳಿ ಶಿವಣ್ಣ,ರಾಮಕೃಷ್ಣ, ಕುಮಾರ್, ಸಮುದ್ರವಳಿ ಜಗದೀಶ್, ಕಂಬೇಗೌಡ, ಅಗ್ರಹಾರ ಬೆಳಗುಲಿ ಶಿವಸ್ವಾಮಿಗೌಡ, ಆಟೋ ರಘು, ಮಂಜುನಾಥ್, ಕೆ ಹೊಸೂರು ಶಿವರಾಂ ಸೇರಿದಂತೆ ಇತರರು ಹಾಜರಿದ್ದರು.

Ashika S

Recent Posts

ಒಗ್ಗಟ್ಟಾಗಿ ಕೆಲಸ ಮಾಡಿದರೆ ಶಿವಮೊಗ್ಗದಲ್ಲಿ ರಾಘವೇಂದ್ರ ಗೆಲ್ಲುತ್ತಾರೆ : ಹೆಚ್‌ಡಿಕೆ

ಒಗ್ಗಟ್ಟಾಗಿ ಕೆಲಸ ಮಾಡಿದರೆ ಶಿವಮೊಗ್ಗ ಗ್ರಾಮಾಂತರದಲ್ಲಿ ಒಂದು ಲಕ್ಷದ ಮತ ದಿಂದ ರಾಘವೇಂದ್ರ ಗೆಲ್ಲಲಿದ್ದಾರೆ ಎಂದು ಮಜಿಮುಖ್ಯಮಂತ್ರಿ ಕುಮಾರ ಸ್ವಾಮಿ…

1 hour ago

ಪ್ರಜ್ವಲ್ ರೇವಣ್ಣ ಉಚ್ಚಾಟನೆ : ಕುಮಾರ ಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ

ಪ್ರಜ್ವಲ್ ರೇವಣ್ಣ ಉಚ್ಚಾಟನೆ ಬಗ್ಗೆ ಮಾಜಿ ಸಿಎಂ ಕುಮಾರ ಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದು, ನಿನ್ನೆಯೇ ಈ ಬಗ್ಗೆ ನಮ್ಮ…

2 hours ago

ಬಿಜೆಪಿ ಅಭ್ಯರ್ಥಿ ಜೈಲಿಗೆ ಹೋಗುವ ದಿನಕ್ಕೆ ಕ್ಷಣಗಣನೆ : ಪ್ರಿಯಾಂಕಾ ಗಾಂಧಿ

ಒಲಿಂಪಿಕ್ಸ್ ಆಟಗಾರರ ಮೇಲೆ ಕಿರುಕುಳವಾಗಿತ್ತು, ಮಹಿಳೆಯ ಮೇಲೆ ಅತ್ಯಾಚಾರವಾಗಿತ್ತು. ಆಗ ಪ್ರಧಾನಿ ಮೋದಿ‌ ಸುಮ್ಮನೆ ಇದ್ದರಲ್ಲದೆ ಇಂದು ಕರ್ನಾಟಕದಲ್ಲಿ ಸಾವಿರಾರು…

2 hours ago

ಕಾಂಗ್ರೆಸ್ ಗ್ಯಾರಂಟಿ ಕಾರ್ಡ ವಿತರಣೆ ಮಾಡಿದ ಕಾರ್ಯಕರ್ತರು

ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಗೆಲವು ನಿಶ್ಚಿತವಾಗಿದೆ ಎಂದು ಕಾಂಗ್ರೆಸ್ ಮುಖಂಡ ವಿಶ್ವರಾಧ್ಯ ದಳವಾಯಿ ಸುಂಬಡ ಅವರು…

2 hours ago

ದೇಶ ಭಕ್ತಿಯನ್ನು ಮೋದಿಯವರಿಗೆ ಗುತ್ತಿಗೆ ಕೊಟ್ಟಿಲ್ಲ: ಲಕ್ಷ್ಮಣ ಸವದಿ

ದೇಶ ಭಕ್ತಿಯನ್ನು ಈ ಬಿಜೆಪಿಯವರಿಗೆ ಹಾಗೂ ಪ್ರಧಾನಿಗೆ ಗುತ್ತಿಗೆ ಕೊಟ್ಟಿಲ್ಲ. ನಾವು ಕೂಡ ದೇಶ ಭಕ್ತರೇ ಎಂದು ಮಾಜಿ ಮುಖ್ಯಮಂತ್ರಿ…

2 hours ago

ಶನಿವಾರಸಂತೆ ಹಲ್ಲೆ ಪ್ರಕರಣ : ನಿಷ್ಪಕ್ಷಪಾತ ತನಿಖೆಗೆ ಹನೀಫ್ ಒತ್ತಾಯ

ಕಳೆದ ಚುನಾವಣಾ ದಿನದಂದು ಕ್ಷುಲ್ಲಕ ವಿಚಾರವಾಗಿ ಎರಡು ರಾಜಕೀಯ ಪಕ್ಷಗಳ ನಡುವೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಷ್ಪಕ್ಷಪಾತವಾದ…

2 hours ago