Categories: ಹಾಸನ

ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್​​; ಅಣ್ಣ ಸೂರಜ್ ರೇವಣ್ಣ ರಿಯಾಕ್ಷನ್

ಹಾಸನ: ಡಿ.ಕೆ.ಶಿವಕುಮಾರ್ ಅವರನ್ನು ಕಳೆದ ಜನವರಿ ತಿಂಗಳಿನಲ್ಲಿ ಅನುದಾನದ ವಿಷಯವಾಗಿ ಭೇಟಿ ಮಾಡಿದ್ದೆ. ಒಂದೂವರೆ ತಿಂಗಳಿನಿಂದ ಬೆಂಗಳೂರಿಗೇ ಹೋಗಿಲ್ಲ ಹೀಗಿರುವಾಗ ಹೊಸದಾಗಿ ಭೇಟಿ ಮಾಡಲು ಹೇಗೆ ಸಾಧ್ಯ? ಎಂದು ವಿಧಾನ ಪರಿಷತ್ ಸದಸ್ಯ ಪ್ರಜ್ವಲ್ ರೇವಣ್ಣ ಪ್ರಶ್ನಿಸಿದರು.

ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಮ್ಮ ಕ್ಷೇತ್ರ, ನಮ್ಮ ಜಿಲ್ಲೆಯ ಪ್ರತಿನಿಧಿಯಾಗಿ ಅವರನ್ನು ಭೇಟಿ ಮಾಡಿದ್ದು ನಿಜ. ಅದು ಮಾಧ್ಯಮಗಳಲ್ಲೂ ಪ್ರಕಟವಾಗಿತ್ತು. ಒಂದೂವರೆ ತಿಂಗಳಿನಿಂದ ಎಲೆಕ್ಷನ್‌ನಲ್ಲಿ ಇಲ್ಲೇ ಬ್ಯುಸಿ ಇದ್ದೀನಿ. ಬೆಂಗಳೂರಿಗೆ ಇವತ್ತಿನವರೆಗೂ ಒಂದು ದಿನಾನೂ ಹೋಗಿಲ್ಲ, ಡಿ.ಕೆ.ಶಿವಕುಮಾರ್ ಆಗಲಿ ಬೇರೆ ಯಾವುದೇ ರಾಜಕಾರಣಿ ಆಗಲಿ ಭೇಟಿ ಮಾಡುವ ಸಂದರ್ಭ ಎಲ್ಲಿ ಬರುತ್ತೆ? ಎಂದು ಪ್ರಶ್ನಿಸಿದರು.

ನಮ್ಮ ಕ್ಷೇತ್ರ, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸೌಹಾರ್ದವಾಗಿ ಭೇಟಿ ಮಾಡಿದ್ದು ನಿಜ. ಅವಾಗಲೂ ಮಾಧ್ಯಮಗಳು ರೇವಣ್ಣ ಕುಟುಂಬ ಕಾಂಗ್ರೆಸ್ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ವದಂತಿ ಸೃಷ್ಟಿ ಮಾಡಿದ್ದವು. ಈ ಊಹಾಪೋಹಗಳನ್ನೆಲ್ಲಾ ಬಿಟ್ಟುಬಿಡಿ. ದಯವಿಟ್ಟು ರಾಜ್ಯದ ಜನತೆಗೆ ಒಂದು ಸ್ಪಷ್ಟನೆ ಇರಲಿ. ಯಾವುದೇ ತರಹದ ವಿಷಯಗಳ ಬಗ್ಗೆ ದುರಾಲೋಚನೆ ಇರಬಾರದು ಎಂದು ಮಾಧ್ಯಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಯಾವ ಕಾರ್ಯಕರ್ತರೂ ಗೊಂದಲದಲ್ಲಿ ಇಲ್ಲ. ನಿನ್ನೆಯೂ ನಾವೆಲ್ಲ ಸಭೆ ಮಾಡಿದ್ದೇವೆ. ಚುನಾವಣೆ ಯಾವ ರೀತಿ ಆಗಿದೆ ಎಂದು ಎಲ್ಲಾ ಕಾರ್ಯಕರ್ತರ ಜತೆ ಸಭೆ ಮಾಡಿದ್ದೇವೆ. ಎಲ್ಲರೂ ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೂರಕ್ಕೆ ನೂರು ಪ್ರಜ್ವಲ್‌ರೇವಣ್ಣ ಅವರು ಗೆಲ್ತಾರೆ ಎಂದರು.
ಯಾರು ಏನು ಬೇಕಾದರೂ ಆರೋಪ ಮಾಡಿಕೊಳ್ಳಲಿ. ಎಸ್‌ಐಟಿ ರಚನೆಯಾಗಿದೆ, ಅದು ಯಾವ ಉದ್ದೇಶಕ್ಕೋಸ್ಕರ ರಚನೆಯಾಗಿದೆ. ಅದರಲ್ಲಿ ಏನು ಸಾಬೀತಾಗುತ್ತೆ ಕಾದುನೋಡೋಣ ಬನ್ನಿ ಎಂದರು.

ಪ್ರಜ್ವಲ್ ಬಗ್ಗೆ ನನಗೆ ಮಾಹಿತಿ ಇಲ್ಲ. ಇಲ್ಲಿ ನಾವು ಏನು ಕಾರ್ಯಕ್ರಮ ಅಟೆಂಡ್ ಆಗಬೇಕೋ ಆ ಕೆಲಸ ನಾನು ಮಾಡ್ತಾ ಇದ್ದೀನಿ. ರೇವಣ್ಣ ಅವರ ಮೇಲೆ ಸಾವಿರ ಕೇಸ್ ಮಾಡಲಿ. ರೇವಣ್ಣ ಅವರು ಏನೆಂದು ನಮ್ಮ ಜಿಲ್ಲೆಯ ಜನರಿಗೆ ಗೊತ್ತು, ನಮ್ಮ ತಾಲ್ಲೂಕಿನ ಜನರಿಗೆ ಗೊತ್ತು. ಅಂತಹ ವಿಚಾರಕ್ಕೆ ನಾನು ಪ್ರತಿಕ್ರಿಯೆ ಕೊಡೋದಿಲ್ಲ.
ರಾಜಕೀಯ ದುರುದ್ದೇಶದಿಂದ ಯಾರು ಏನು ಬೇಕಿದ್ದರೂ ಮಾಡ್ತಾರೆ. ಹಾಸನ ಜಿಲ್ಲೆಯ ರಾಜಕಾರಣದಲ್ಲಿ ರೇವಣ್ಣ ಅವರಿಗೆ ಪ್ರತಿರೋಧ ಅಥವಾ ಪ್ರತಿಸ್ಪರ್ಧಿ ಇಲ್ಲ. ಅವರ ರೀತಿ ರಾಜಕಾರಣ ಮಾಡಿದವರೂ ಇಲ್ಲ. ಅವರನ್ನು ಸಿಲುಕಿಸಬೇಕು, ವೀಕ್ ಮಾಡಬೇಕು ಎಂದು ಷಡ್ಯಂತ್ರ ಮಾಡ್ತಾ ಇದ್ದಾರೆ ಎಂದು ಗುಡುಗಿದರು.

Ashitha S

Recent Posts

ಸಮಸ್ಯೆಗಳ ಆಗರ: ಮೂಲಸೌಕರ್ಯಗಳ ಕೊರತೆಗೆ ಬೇಸತ್ತ ಸಾರ್ವಜನಿಕರು

ಪಟ್ಟಣದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಸ್ಥಳೀಯ ಆಡಳಿತದ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಬೇಸರಗೊಂಡಿದ್ದಾರೆ. ಪಟ್ಟಣದಲ್ಲಿ ಒಟ್ಟು 27 ವಾರ್ಡ್‌ಗಳು…

2 mins ago

ನಾಳೆ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನೆ

ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಮೇ.19 ರಂದು ಭಾನುವಾರ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ ಸಾಯಿಬಾಬಾ…

4 mins ago

ಚಾಮರಾಜನಗರದಲ್ಲಿ ಮುಂದುವರೆದ ಮಳೆ ಆರ್ಭಟ: ವಾಹನ ಸವಾರರ ಪರದಾಟ

ಗಡಿಜಿಲ್ಲೆ ವರುಣಾರ್ಭಟ ಮುಂದುವರೆದಿದ್ದು ಶನಿವಾರ ಮಧ್ಯಾಹ್ನದ ಜಿಲ್ಲಾಕೇಂದ್ರದಲ್ಲಿ ಒಂದೂವರೆ ತಾಸು ಜೋರು ಮಳೆಯಾಯಿತು.

15 mins ago

ನ್ಯೂಯಾರ್ಕ್​ಗೆ ತೆರಳಲಿದೆ ಟೀಮ್ ಇಂಡಿಯಾದ ಮೊದಲ ಬ್ಯಾಚ್ : ಯಾವಾಗ?

ಮುಂದಿನ ತಿಂಗಳು ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್​ಗಾಗಿ ಟೀಮ್​ ಇಂಡಿಯಾದ ಮೊದಲ ಬ್ಯಾಚ್​…

19 mins ago

ಖಾಸಗಿ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಶಾಸಕ ಶರಣು ಸಲಗರ್‌

ಖಾಸಗಿ ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ್‌ ಅವರು ಪತ್ನಿ ಹಾಗು ಮಕ್ಕಳೊಂದಿಗೆ ಹೆಜ್ಜೆ ಹಾಕಿದ್ದಾರೆ. ಶಾಸಕ ಶರಣು ಸಲಗರ್‌ರಿಂದ…

29 mins ago

ಸ್ವಾತಿ ಮೇಲಿನ ಹಲ್ಲೆ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಬಿಭವ್ ಅರ್ಜಿ

ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ…

60 mins ago