ಹಾಸನ ಮತ್ತು ಕೊಡಗಿನಲ್ಲಿ ಲಘು ಭೂಕಂಪ ದಾಖಲು

ಹಾಸನ/ಮಡಿಕೇರಿ: ಕೊಡಗು ಮತ್ತು ಹಾಸನ ಜಿಲ್ಲೆಯ ಕೆಲವೆಡೆಗಳಲ್ಲಿ  ಗುರುವಾರ ಬೆಳಗಿನ ಝಾವ ಭೂಕಂಪನ ವರದಿ ಆಗಿದೆ.   ಭೂ ಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 3.4
ತೀವ್ರತೆ ದಾಖಲಿಸಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಆಯುಕ್ತರು ಭೂಕಂಪನ ಸಂಭವಿಸಿರುವುದನ್ನು ದೃಢಪಡಿಸಿದ್ದಾರೆ.

ಹಾಸನ ಜಿಲ್ಲೆಯ, ಅರಕಲಗೂಡು, ಹೊಳೆನರಸೀಪುರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ನಸುಕಿನ 4.30ರಿಂದ 5 ಗಂಟೆಯ ಅವಧಿಯಲ್ಲಿ ಭೂಮಿಯು ಕಂಪಿಸಿತ್ತು. ಹೊಳೆನರಸೀಪುರ ತಾಲ್ಲೂಕಿನ ಮನುಗನಹಳ್ಳಿ ಗ್ರಾಮವು ಭೂಕಂಪನ ಕೇಂದ್ರವಾಗಿತ್ತು. ನಿದ್ರೆಯಲ್ಲಿದ್ದವರು ಗಾಬರಿಗೊಂಡು ಮನೆಗಳಿಂದ ಹೊರಗೆ ಓಡಿ ಬಂದಿದ್ದರು. ಇದೀಗ ಭೂಕಂಪ ಆಗಿರುವ ಬಗ್ಗೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಭೂ ಕಂಪನದ ಕೇಂದ್ರ ಬಿಂದು  ಹೊಳೆನರಸಿಪುರದ ದಕ್ಷಿಣಕ್ಕೆ 16 ಕಿಲೋಮೀಟರ್ ದೂರದಲ್ಲಿದೆ ಎಂದು ಮೂಲಗಳು ತಿಳಿಸಿವೆ.  ಇಲ್ಲಿಂದ ಸೋಮವಾರಪೇಟೆಯವರೆಗೂ ಭೂಕಂಪನ ಆಗಿರುವುದಾದರೂ  ಜನತೆ ನಿದ್ರೆಯಲ್ಲಿ ಇದ್ದುದರಿಂದ  ಬಹಳಷ್ಟು ಗ್ರಾಮಗಳ ಜನರಿಗೆ ಇದು ಅರಿವಿಗೇ ಬಂದಿಲ್ಲ.

ನಸುಕಿನ 4.38ರಲ್ಲಿ ಭೂಮಿ ಲಘುವಾಗಿ ಕಂಪಿಸಿದೆ. ಅರಕಲಗೂಡು ಮತ್ತು ಹೊಳೆನರಸೀಪುರ ತಾಲ್ಲೂಕುಗಳ  ಹಲವು ಗ್ರಾಮಗಳಲ್ಲಿ ಜನರಿಗೆ ಭೂಮಿಯು ಕಂಪಿಸಿದ್ದು ಸ್ಪಷ್ಟವಾಗಿ ಅನುಭವಕ್ಕೆ ಬಂದಿದೆ. ಭೂಮಿಯು ಕಂಪಿಸುವ ಮೊದಲು ದೊಡ್ಡ ಸದ್ದು ಕೇಳಿಸಿತು ಎಂದು ಹಲವರು ತಮ್ಮ ನೆನಪಿಸಿಕೊಂಡಿದ್ದಾರೆ. ಅರಕಲಗೂಡು ಪಟ್ಟಣ, ತಾಲ್ಲೂಕಿನ ಮುದ್ದನಹಳ್ಳಿ, ಹನೆಮಾರನಹಳ್ಳಿ, ಕಾರಳ್ಳಿ, ಹೊಳೆನರಸೀಪುರ ತಾಲ್ಲೂಕಿನ ಚಿಟ್ನಳ್ಳಿ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ಭೂಮಿಯು ಕಂಪಿಸಿದ್ದು ಸ್ಪಷ್ಟವಾಗಿ ಜನರ ಅರಿವಿಗೆ ಬಂದಿದೆ. ಭೂಮಿಯು ಅಲುಗಾಡುತ್ತಿರುವ ಅನುಭವವಾದ ತಕ್ಷಣ ಜನರು ಭಯಗೊಂಡು ಮನೆಗಳಿಂದ ಹೊರಗೆ ಓಡಿ ಬಂದರು. ಈ ಘಟನೆಯು ಜನರಲ್ಲಿ ಭೀತಿ ಉಂಟು ಮಾಡಿದೆ.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ರೇಂಜರ್ ಬ್ಲಾಕ್, ನೇಗಳ್ಳೆ ಗ್ರಾಮದಲ್ಲಿ ಹಲವರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಮಡಿಕೇರಿ ತಾಲೂಕಿನ ಮಡಿಕೇರಿ ನಗರ ಮತ್ತು
ದೇವಸ್ತೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿಯೂ ಜನರಿಗೆ ಇಂಥದ್ದೇ ಅನುಭವವಾಗಿದೆ. ನಸುಕಿನ 4:37ಕ್ಕೆ ಭೂಕಂಪನವಾಗಿದೆ ಎಂದು ಮೂಲಗಳು ದೃಢಪಡಿಸಿವೆ. ಸೋಮವಾರಪೇಟೆ ಪಟ್ಟಣದ
ರೇಂಜರ್ಸ್ ಬ್ಲಾಕ್ ನಲ್ಲಿ 2004-05 ರಲ್ಲಿ   ಮಳೆಗಾಲದಲ್ಲಿ ಭುಮಿಯೊಳಗಿನಿಂದ   ಶಬ್ದ ಬರುತಿತ್ತು.  ಆಗ ಜನರು ಭುಕಂಪ ಎಂದು ಭಾವಿಸಿ ಭಯಬೀತರಾಗಿದ್ದರು. ಅಷ್ಠ ಅಲ್ಲ ಅನೇಕ ನಿವಅಸಿಗಳು ಮನೆ ತೊರೆದು ಪರ ಊರಿಗೆ ತೆರಳಿ ನೆಂಟರ ಮನೆಯಲ್ಲಿ ವಾಸವಅಗಿದ್ದ್ದರು  ಆ ಸಮಯದಲ್ಲಿ  ಪ್ರಾಕೃತಿಕ ವಿಕೋಪ ಕೇಂದ್ರದ ತಜ್ಞರು ಪುಣೆಯಿಂದ  ಆಗಮಿಸಿ ಅಧ್ಯಯನ ನಡೆಸಿದದ್ದು. ಇದು ಭೂಕಂಪವಲ್ಲ ,  ಭೂಮಿಯಾಳದಲ್ಲಿ ಬಂಡೆಗಳು ನೀರಿನ ಹರಿಯುವ ರಭಸಕ್ಕೆ ಚಲಿಸಿ ಒಂದಕ್ಕೊಂದು ಢಿಕ್ಕಿ ಹೊಡೆದಾಗ ಬರುತ್ತಿರುವ ಶಬ್ದ ಎಂದು ಪತ್ತೆ ಮಾಡಿದ್ದರು.
ಆದರೂ ಜನತೆಯ ಸಮಾಧಾನಕ್ಕೆ ರೇಂಜರ್ಸ್ ಬ್ಲಾಕಿನಲ್ಲಿ ಸಿಸ್ಮೋಗ್ರಾಫ್ ಯಂತ್ರವನ್ನು ಅಳವಡಿಸಲಾಗಿತ್ತು.

ಆದರೆ ಕೆಲ ವರ್ಷಗಳ ಹಿಂದೆ  ಅಳವಡಿಸಿದ ಅಧಿಕಾರಿಗಳೇ ಇದು ಅವಶ್ಯಕತೆ ಇಲ್ಲ ಎಂದು ಯಂತ್ರವನ್ನು ಬಿಚ್ಚಿಕೊಂಡು ಹೋಗಿದ್ದಾರೆ ಎಂದು ಪಟ್ಟಣ ಪಂಚಾಯ್ತಿ  ಉಪಾದ್ಯಕ್ಷ ಸಂಜೀವ ಸುವರ್ಣ ಅವರು  ತಿಳಿಸಿದರು. ಸಿಸ್ಮೋಗ್ರಾಫ್ ಯಂತ್ರವನ್ನು ಇಲ್ಲಿಯೇ ಬಿಟ್ಟಿದ್ದರೆ  ಭೂಕಂಪನದ ತೀವ್ರತೆ ಅರಿಯಲು ಸಹಾಯವಾಗುತಿತ್ತು ಎಂದು  ರೇಂಜರ್ಸ್ ಬ್ಲಾಕ್ ನಿವಾಸಿಗಳು ಹೇಳುತ್ತಾರೆ.  ಕೊಡಗಿನಲ್ಲಿ ಕಳೆದ 3 ವರ್ಷಗಳಿಂದ ಮಳೆಗಾಲದಲ್ಲಿ ಭೂಕುಸಿತ ಆಗುತ್ತಿರುವುದುರಿಂದ  ಸಿಸ್ಮೊಗ್ರಾಫ್ ಯಂತ್ರವನ್ನು ಅಳವಡಿಸಿದರೆ ಅಧ್ಯಯನಕ್ಕೆ ಹೆಚ್ಚಿನ ಅನುಕೂಲ ಆಗುತ್ತದೆ ಎಂದು ನಿವಾಸಿಗಳು ಯಂತ್ರ ಅಳವಡಿಕೆಗೆ ಒತ್ತಾಯಿಸಿದ್ದಾರೆ. ಸಮೀಪದ ಹಾರಂಗಿ ಜಲಾಶಯದಲ್ಲಿ  ಅಳವಡಿಸಲಾಗಿರುವ ಸಿಸ್ಮೋ ಗ್ರಾಫ್  ಯಂತ್ರದಲ್ಲಿ  ಕೂಡ ಭುಕಂಪನ ದಾಖಲಾಗಿದೆ.

Ashika S

Recent Posts

ಮಲಯಾಳಂ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಿರ್ದೇಶಕ ಸಂಗೀತ್ ಶಿವನ್ ಮೇ 8 ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ…

30 mins ago

ಮುಸ್ಲಿಂ ಯುವತಿಯೊಂದಿಗೆ ಮದುವೆ : ಖಾಕಿ ವಿರುದ್ಧ ಹಿಂದೂ ಸಂಘಟನೆ ಪ್ರತಿಭಟನೆ

ಬಾದಾಮಿ ಮೂಲದ ರುಬಿನಾ ಮತ್ತು ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಲ ಬಾಗಲಕೋಟೆ ಎಸ್​ಪಿ ಕಚೇರಿಗೆ ಬಂದಿದ್ದು,…

54 mins ago

ಹಾಸ್ಟೆಲ್‌ ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಮಹಾರಾಷ್ಟ್ರದ ಪುಣೆಯಲ್ಲಿರುವ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಪುಣೆಯ (COEP) ಹಾಸ್ಟೆಲ್‌ನಲ್ಲಿ ಯುವತಿಯೊಬ್ಬಳು ಮಾಡಿದ ಭಾನಗಡಿ ಈಗ ಹಾಸ್ಟೆಲ್‌ನ ಎಲ್ಲ ವಿದ್ಯಾರ್ಥಿನಿಯರು…

1 hour ago

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

ಬೆಳ್ತಂಗಡಿಯ ಬಡವರ ಬಂಧು, ಮಾಜಿ ಶಾಸಕ ವಸಂತ ಬಂಗೇರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿರುತ್ತಾರೆ. ಗುರುವಾರ ಮುಂಜಾನೆ…

2 hours ago

ಇಂದು ಎಸ್​ಎಸ್​ಎಲ್​​ಸಿ ಫಲಿತಾಂಶ : ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು?

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಬೆಳಗ್ಗೆ 10.30ಕ್ಕೆ ಪ್ರಕಟವಾಗಲಿದೆ. ರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ…

2 hours ago

ಡಾ. ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ನಗರದ ಕೆಎಂಸಿಯ ನ್ಯೂರೋಲಜಿ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಡಾ. ಜಿ.ಜಿ ಲಕ್ಷ್ಮಣ ಪ್ರಭು ಅವರಿಗೆ ದಿಲ್ಲಿಯ ರಾಷ್ಟ್ರೀಯ ವೈದ್ಯಕೀಯ…

2 hours ago