News Karnataka Kannada
Wednesday, April 24 2024
Cricket
ಹಾಸನ

ನಿದ್ದೆ ಗೆಡಿಸಿದ್ದ ಚಿರತೆ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Lepord (1)
Photo Credit : News Kannada

ಹಾಸನ: ಗ್ರಾಮದಲ್ಲಿ ವಾಸದ ಮನೆಯ ಕೊಟ್ಟಿಗೆಯೊಂದಕ್ಕೆ ನುಗ್ಗಿರುವ ಚಿರತೆಯನ್ನು ಸೆರೆ ಹಿಡಿಯಲು ಸಂಜೆ ಆದರೂ ಅರಣ್ಯ ಇಲಾಖೆಯವರು ಹರಸಾಹಸ ಪಟ್ಟು ಕೊನೆಗೂ ಬೋನಿನಲ್ಲಿ ಸೆರೆ ಹಿಡಿದಿದ್ದಾರೆ.

ಹಾಸನ ತಾಲ್ಲೂಕಿನ ಹೊಸಳ್ಳಿ ಗ್ರಾಮದ ಧರ್ಮ ಎಂಬುವವರ ತಮ್ಮ ಜಮೀನಿನ ಬಳಿ ಮನೆ ನಿರ್ಮಿಸಿ ವಾಸವಾಗಿರುವ ವಾಸದ ಮನೆಗೆ ಹೊಂದಿಕೊಂಡಿರುವ ದನದ ಕೊಟ್ಟಿಗೆಯಲ್ಲಿ ಚಿರತೆ ಸಿಲುಕಿದೆ. ಕೊಟ್ಟಿಗೆಯಲ್ಲಿ ಜಾನುವಾರುಗಳು ಇದ್ದ ಕಾರಣ ಅಹಾರ ಅರಸಿ ಚಿರತೆ ಬಂದಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗು ಪೊಲೀಸರ ಭೇಟಿ ಮಾಡಿ ಪರಿಶೀಲನೆ ನಡೆಸಿ ಚಿರತೆ ಸೆರೆ ಬಗ್ಗೆ ಸಮಾಲೋಚನೆಯನ್ನು ನಡೆಸಿದರು.
ಚಿರತೆ ಸೆರೆಗೆ ಆಪರೇಷನ್ ಶುರು ಮಾಡಿದ್ದು, ವನ್ಯಜೀವಿ ವೈದ್ಯ ಡಾ.ನಾಗರಾಜ್ ಹಾಗು ಆರ್.ಎಫ್.ಓ ನೇತೃತ್ವದಲ್ಲಿ ಸೆರೆಗೆ ಕಾರ್ಯಾಚರಣೆ ಮುಂದುವರೆಯಿತು.

ಕೊಟ್ಟಿಗೆಯಲ್ಲಿ ಸಿಲುಕಿದ್ದ ಒಂದು ಹಸು ಮತೊಂದು ಕರು ರಕ್ಷಣೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಮಾಡಿದರು. ಜಾನುವಾರುಗಳಿಗೆ ಯಾವುದೇ ಸಮಸ್ಯೆ ಮಾಡದೆ ಕೊಟ್ಟಿಗೆಯಲ್ಲಿ ಚಿರತೆ ಸೈಲೆಂಟಾಗಿದ್ದು, ಸ್ಥಳಕ್ಕೆ ದುದ್ದಾ ಠಾಣೆ ಪೊಲೀಸರು ಹಾಗು ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದರು. ಕೊಟ್ಟಿಗೆ ಬಾಗಿಲ ಸಮೀಪ ಬೋನ್ ಇಟ್ಟು ಚಿರತೆಯನ್ನು ಬೋನ್ ಒಳಗೆ ಸೇರಿಸಿ ಸೆರೆ ಹಿಡಿಯಲು ಪ್ಲಾನ್ ಮಾಡಿ, ಮನೆಯ ಹೆಂಚು ತೆಗೆದು ಕುಡುಗೋಲಿನಿಂದ ಹಸುವನ್ನು ಕಟ್ಟಿದ್ದ ಹಗ್ಗ ಕುಯ್ದ ಕೊಟ್ಟಿಗೆಯೊಳಗಿದ್ದ ಹಸುಗಳನ್ನು ಗ್ರಾಮಸ್ಥರು ರಕ್ಷಣೆ ಮಾಡಿದರು. ಕೊಟ್ಟಿಗೆ ಒಳಗೆ ಮಲಗಿರುವ ಚಿರತೆ ಸಂಜೆಯಾದರು ಹೊರ ಬರಲಿಲ್ಲ.

ವೈದ್ಯರು ಅರವಳಿಕೆ ಇಂಜೆಕ್ಷನ್ ನೀಡಲು ಹರಸಾಹಸ ಪಡುತ್ತಿದ್ದು, ಚಿರತೆ ಸೆರೆ ಹಿಡಿಯಲು ವಿಳಂಬ ಮಾಡುತ್ತಿರುವುದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.  ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಚಿರತೆ ಹಾವಳಿ ಇದ್ದು, ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಚಿರತೆ ಹಾವಳಿ ಹೆಚ್ಚಾಗಿದೆ ಎಂದು ಜನರ ಆರೋಪ ಮಾಡಿದ್ದಾರೆ.

ಮೊದಲ ಡೋಸ್ ಇಂಜೆಕ್ಷನ್ ಗೆ ಚಿರತೆ ಪ್ರಜ್ಞೆ ತಪ್ಪದೆ ಇದ್ದುದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಜಗದೀಶ್ ರಿಂದ ಚಿರತೆಗೆ ಮತ್ತೊಂದು ಅರವಳಿಕೆ ಮದ್ದು ನೀಡಲು ಮುಂದಾದರು. ಇಂಜೆಕ್ಷನ್ ನೀಡಿ ಹದಿನೈದು ನಿಮಿಷ ಆದರೂ ಪ್ರಜ್ಞೆ ತಪ್ಪಲಿಲ್ಲ. ಐವತ್ತು ಕೆಜಿಗಿಂತ ಹೆಚ್ಚಿನ ತೂಕದ ಚಿರತೆಯಾಗಿರೊ ಕಾರಣ ಹೆಚ್ಚುವರಿಯಾಗಿ ಎರಡನೇ  ಡೋಸ್ ನೀಡಿದ ನಂತರ ಚಿರತೆ ಸೆರೆಗೆಯಾಗಿದೆ. ಚಿರತೆ ಸೆರೆಯಿಂದ ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು