ಹಾಸನ

ಕೊಣನೂರು: ಪಂದ್ಯಾವಳಿಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ- ಮಾಜಿ ಸಚಿವ ಎ.ಮಂಜು

ಕೊಣನೂರು: ಪಂದ್ಯಾವಳಿಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ, ಎಲ್ಲಾ ತಂಡಗಳೂ ಸಹ ಉತ್ತಮ ಪ್ರದರ್ಶನ ತೋರುವ ಮೂಲಕ ಈ ಭಾಗದ ಜನತೆಯ ಮನಸ್ಸನ್ನು ಗೆಲ್ಲಿ. ನಿಮ್ಮಲ್ಲಿರುವ ಪ್ರತಿಭೆಯನ್ನು ನೀವು ಈ ಮೈದಾನದಲ್ಲಿ ಸಾಬೀತು ಪಡಿಸಿ. ಇದರಿಂದ ನಮ್ಮ ಗ್ರಾಮೀಣ ಭಾಗದ ಜನರು ಕ್ರೀಡೆಗಳಲ್ಲಿ ಮುಂದೆ ಬರಲು ಸಹಕಾರಿಯಾಗುತ್ತದೆ ಎಂದು ಮಾಜಿ ಸಚಿವ ಎ.ಮಂಜು ತಿಳಿಸಿದರು.

ಸಮೀಪದ ಹುಲಿಕಲ್ ಗ್ರಾಮದಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಮೂರನೇ ವರ್ಣದ ಕೆಂಪೇಗೌಡ ಕಪ್ ಕಬ್ಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಆಟಗಾರರನ್ನು ಉದ್ದೇಶಿಸಿ ಮಾತನಾಡಿದರು.

ಕ್ರೀಡೆಗಳನ್ನು ಒಂದು ದಿನಕ್ಕೆ ಸೀಮಿತಗೊಳಿಸದೇ ಪ್ರತೀ ದಿನ ಸತತ ಅಭ್ಯಾಸ ನಡೆಸುತ್ತಾ ಎಲ್ಲಾ ಕಡೆ ನಡೆಯುವ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಜೀವನದಲ್ಲಿ ದೇಶದ ಉತ್ತಮ ಕ್ರೀಡಾಪಟುಗಳಾಗಿ ತಾಲೂಕಿಗೆ ಹಾಗೂ ಗ್ರಾಮಕ್ಕೆ ಹೆಮ್ಮೆ ತರುವಂತಾಗಬೇಕು ಎಂದರು. ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಮಾತನಾಡಿ ಇಂದಿನ ಯುವಕರು ಮೊಬೈಲ್‌ಗಳಲ್ಲಿ ಹೆಚ್ಚು ಆಟಗಳನ್ನು ಆಡದೇ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯ ನೀಡುವ ಗ್ರಾಮೀಣ ಕ್ರೀಡೆಗಳ ಬಗ್ಗೆ ಯುವಕರು ಹೆಚ್ಚು ಹೆಚ್ಚು ಆಸಕ್ತಿ ವಹಿಸಬೇಕು.

ಗ್ರಾಮಸ್ಥರೂ ಸಹ ಈ ರೀತಿಯ ಗ್ರಾಮೀಣ ಕ್ರೀಡೆಗಳನ್ನು ಹೆಚ್ಚು ಆಯೋಜಿಸುವ ಮೂಲಕ ಸ್ಥಳೀಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು. ನಾನು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಸಂಚರಿಸಿ ಹಲವಾರು ಅಭಿವೃದ್ದಿ ಕಾರ್ಯಗಳಿಗೆ ಅನುದಾನಗಳನ್ನು ನೀಡಿದ್ದು ಹುಲಿಕಲ್ ಗ್ರಾಮಕ್ಕೆ ವಿಶೇಷವಾದ ಅನುದಾನಗಳನ್ನು ನೀಡಿದ್ದೇನೆ ಹಾಗೆಯೇ ಮಲ್ಲಿಪಟ್ಟಣ ಹೋಬಳಿಯ ಹಲವೆಡೆಗೆ ದೇವಾಲಯ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ಹೀಗೆ ಅರಕಲಗೂಡು ತಾಲೂಕಿಗೆ ಶಾಲಾ ಕಟ್ಟಡ ದುರಸ್ಥಿಗೆ, ರಸ್ತೆಗಳು, ಕಲ್ಯಾಣ ಮಂಟಪ ದುರಸ್ಥಿಗೆ, ಚರಂಡಿ, ಸಿಮೆಂಟ್ ರಸ್ತೆ ಹೀಗೆ ಸಾಕಷ್ಟು ಅನುದಾನಗಳನ್ನು ನೀಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ಸಮಾಜ ಸೇವಕ ಸುರೇಶ್ ಸಿಂಗನಕುಪ್ಪೆ, ಮುಖಂಡರಾದ ಎಸ್.ಸಿ. ಚೌಡೇಗೌಡ, ಒಕ್ಕಲಿಗರ ಸಂಘದ ಪದಾಧಿಕಾರಿಗಳು, ಸದಸ್ಯರುಗಳು, ಮಲ್ಲಿಕಣ್ಣ, ದಿವಾಕರ ಗೌಡ್ರು, ಬೆಟ್ಟದಹಳ್ಳಿ ಮಹೇಶ್, ಮುಖಂಡರು, ಗಣ್ಯರು ಮುಂತಾದವರು ಉಪಸ್ಥಿತರಿದ್ದರು.

Gayathri SG

Recent Posts

ಹೂಸ ರುಚಿ: ಅವಲಕ್ಕಿ ಹುಳಿ ಮಾಡುವುದು ಹೇಗೆ?

ಗಡಿಬಿಡಿಯ ಜೀವನದಲ್ಲಿ ಬೆಳಗ್ಗಿನ ಉಪಹಾರ ಮಾಡಿಕೊಂಡು ಆಫೀಸಿಗೆ ಹೋಗುವುದೇ ಸವಾಲ್. ಇಂತಹ  ಸಂದರ್ಭದಲ್ಲಿ ಅವಲಕ್ಕಿ ಇದ್ದರೆ ಅದರಿಂದ ಹುಳಿ ತಯಾರಿಸಿ…

56 seconds ago

ಬಾವಿಗೆ ಬಿದ್ದ ಮಗುವನ್ನು ರಕ್ಷಿಸಿದ ಯುವಕನಿಗೆ ಮೆಚ್ಚುಗೆಯ ಸುರಿಮಳೆ

ಸರಪಾಡಿಯ ಹಂಚಿಕಟ್ಟೆಯಲ್ಲಿ ಬಾವಿಗೆ ಬಿದ್ದ ಮಗುವೊಂದನ್ನು ತನ್ನ ಪ್ರಾಣದ ಹಂಗನ್ನು ತೊರೆದು ತುಂಡಾಗುವ ಸ್ಥಿತಿಯಲ್ಲಿದ್ದ ಹಳೆಯ ಹಗ್ಗವನ್ನು ಬಳಸಿ ಮೇಲಕ್ಕೆತ್ತಿದ…

10 mins ago

ಶ್ರೀರಾಮ ಸೇನೆ ರಾಜ್ಯಾಧ್ಯಕ್ಷರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲು

ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ, ಶ್ರೀರಾಮ ಸೇನೆಯ ಅಧ್ಯಕ್ಷ ಸಿದ್ದಲಿಂಗ ಶ್ರೀಗಳ ವಿರುದ್ಧ ಕಲಬುಗಿಯಲ್ಲಿ ಜಾತಿ…

15 mins ago

ಮಡಿಕೇರಿಯಲ್ಲಿ ಬುದ್ಧಿಮಾಂದ್ಯ ಹುಡುಗನ ರಕ್ಷಣೆ; ಸಂಬಂಧಪಟ್ಟವರು ಸಂಪರ್ಕಿಸುವಂತೆ ಮನವಿ

ಅನಾಥ ಬುದ್ಧಿಮಾಂದ್ಯ ಹುಡುಗನನ್ನು ರಕ್ಷಣೆ ಮಾಡಿ ಶಕ್ತಿ ಅನಾಥಾಶ್ರಮಕ್ಕೆ ಸೇರಿಸಿರುವ ಘಟನೆಯೊಂದು ಮಡಿಕೇರಿಯಲ್ಲಿ ನಡೆದಿದೆ.

20 mins ago

ಗ್ರಾಹಕರಂತೆ ಬಂದು ಬಂಗಾರದ ಬಳೆ ಎಗರಿಸಿದ ಖತರ್ನಾಕ್ ಕಳ್ಳಿಯರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ಗ್ರಾಹಕರ ಸೋಗಿನಲ್ಲಿ ಬಂದು ಬಂಗಾರದ ಖಡ್ಗ ಕದ್ದು ಪರಾರಿಯಾದ ಘಟನೆ ಕಲಬುರಗಿ ನಗರದ ಅನ್ನಪೂರ್ಣ ಕ್ರಾಸ್‌ನಲ್ಲಿರುವ ತನಿಷ್ಕ ಜ್ಯುವೆಲ್ಲರಿ ಶಾಪ್‌ನಲ್ಲಿ…

23 mins ago

ವಿಧಾನಸೌಧ ಪ್ರವೇಶಕ್ಕೆ ಇನ್ನು ಮುಂದೆ ಕ್ಯೂಆರ್ ಕೋಡ್ ಪಾಸ್‌: ಪರಮೇಶ್ವರ್‌

ಇನ್ನು ಮುಂದೆ ವಿಧಾನಸೌಧ ಪ್ರವೇಶಕ್ಕೆ ಬೇಕಾಬಿಟ್ಟಿ ಪಾಸ್‌ಗಳನ್ನು ವಿತರಿಸುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ.

41 mins ago