Categories: ಹಾಸನ

ಆರ್ಥಿಕತೆಯಲ್ಲಿ ದೇಶ ಮುಂದು-ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರತಕ್ಕೆ ಎರಡನೇ ಸ್ಥಾನ: ನಡ್ಡಾ

ಬೇಲೂರು: ಡಬಲ್ ಎಂಜಿನ್ ಸರ್ಕಾರ ರೈತರು, ಮಹಿಳೆಯರು, ಬಡವರು, ದಲಿತರು, ಯುವಕರು ಸೇರಿದಂತೆ ಸಮಾಜದ ಎಲ್ಲ ವರ್ಗದವರನ್ನು ಸಬಲೀಕರಣ ಗೊಳಿಸಲು ಪ್ರಯತ್ನಿಸುತ್ತಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಸಬಲೀಕರಣದತ್ತ ಯೋಜ ನೆಗಳನ್ನು ಅನುಷ್ಟಾನಗೊಳಿ ಸಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಬಿಜೆಪಿ ಹೊರತುಪಡಿಸಿ ವಿಶ್ವದ ಯಾವ ರಾಜಕೀ ಯ ಪಕ್ಷವೂ ಸಿದ್ಧಾಂತಗಳ ಮೇಲೆ ಗಟ್ಟಿಯಾಗಿ ನಿಂತಿಲ್ಲ. ಅತಿದೊಡ್ಡ ಕಾರ್ಯಕರ್ತರ ಪಡೆಯನ್ನೂ ಹೊಂ ದಿಲ್ಲ. ಎಲ್ಲ ರಾಜಕೀಯ ಪಕ್ಷಗಳು ಕುಟುಂಬ ರಾಜ ಕಾರಣದ ಹಿಡಿತದಲ್ಲಿವೆ. ಸಮಾಜವಾದಿ ಪಕ್ಷ, ಆರ್‌ಜೆಡಿ, ಶಿವಸೇನಾ, ತೃಣಮೂಲ ಕಾಂಗ್ರೆಸ್, ವೈಎಸ್ ಆರ್‌ಸಿಪಿ, ಟಿಆರ್‌ಎಸ್, ಎಐಡಿಎಂಕೆ ಹೀಗೆ ಎಲ್ಲವೂ ಪರಿವಾರ ರಾಜಕಾರಣವನ್ನು ಪೋಷಿಸಿಕೊಂಡು ಬಂದಿವೆ. ಆದರೆ, ಬಿಜೆಪಿಯಲ್ಲಿ ಮಾತ್ರ ಪಕ್ಷವೇ ಕುಟುಂಬವಾಗಿದೆ ಭಾರತ ೨೦೦ ವರ್ಷಗಳ ಕಾಲ ಬ್ರಿಟಿಷರ ದಾಸ್ಯದಲ್ಲಿತ್ತು. ಪ್ರಸ್ತುತ ಕಾಲಚಕ್ರ ಬದಲಾಗಿದ್ದು, ಬ್ರಿಟನ್ ದೇಶವನ್ನು ಹಿಂದಿಕ್ಕಿ ಭಾರತ ವಿಶ್ವದ ೬ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದು ನಿಂತಿದೆ ಎಂದರು.

ಬಿಜೆಪಿ ಶಿಸ್ತುಬದ್ಧ ಪಕ್ಷವಾಗಿದ್ದು ಸದಸ್ಯರಿಗೆ ಯಾವ ರೀತಿ ದೇಶವನ್ನು ಸದೃಢವಾಗಿ ಕಟ್ಟುವ ನೀತಿ ತಿಳಿದಿದೆ. ಮುಂದಿನ ದಿನದಲ್ಲಿ ದೇಶದಲ್ಲಿ ಪಕ್ಷಕ್ಕೆ ಸಾಮರ್ಥ್ಯ ಹೆಚ್ಚಾಗಲು ಮೋದಿ ಶಕ್ತಿ ಹೆಚ್ಚಳವಾಗಲು ಜನರ ಬೆಂಬಲ ಸಾಕ್ಷಿ ಎಂದು ತಿಳಿಸಿದರು.

ಆಸ್ಟ್ರೇಲಿಯಾ, ಅಮೇರಿಕ ಸೇರಿ ದಂತೆ ಅನೇಕ ದೇಶ ಆರ್ಥಿಕ ಸಂಕಷ್ಟದಲ್ಲಿ ಮುಳುಗಿದರೆ ಭಾರತ ದೇಶ ಮೋದಿ ನೇತೃತ್ವದಲ್ಲಿ ಬಲಿಷ್ಠವಾಗಿ ಮುನ್ನ ಡೆಯುತ್ತಿದೆ. ಸ್ಟೀಲ್ ಉತ್ಪಾದನೆಯಲ್ಲಿ ಮುಂದೆ ಸಾಗುತ್ತಿದೆ ಎಂದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶೇ ೯೦ರಷ್ಟು ಮೊಬೈಲ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಬಿಜೆಪಿ ಅವಧಿಯಲ್ಲಿ ಶೇ ೯೭ರಷ್ಟು ಮೊಬೈಲ್ ಗಳನ್ನು ದೇಶದಲ್ಲೇ ಉತ್ಪಾದಿಸಲಾಗುತ್ತಿದೆ. ಸ್ಟೀಲ್ ಉತ್ಪಾದನೆಯಲ್ಲಿ, ಆಟೊಮೊ ಬೈಲ್ ಕ್ಷೇತ್ರದಲ್ಲಿ ಭಾರತ ವಿಶ್ವದಲ್ಲಿ ಎರಡನೇ ಸ್ಥಾನಕ್ಕೇರಿದೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಇಂದು ಇಷ್ಟು ಪ್ರಮಾ ಣದಲ್ಲಿ ಜನ ಸೇರಿರುವುದು ಗಮನಿಸಿದರೆ ಮುಂದಿನ ಚುನಾವಣೆಯಲ್ಲಿ ದೊಡ್ಡ ಬದಲಾವಣೆಯೊಂದಿಗೆ ಬೇಲೂರಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಸಂಘಟಿತವಾಗಿದೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ೧೦೦% ಕರ್ನಾಟಕದ ಚುಕ್ಕಾಣಿ ಹಿಡಿಯಲಿದೆ. ರಾಜ್ಯದಲ್ಲಿ ೧೩೦ ಸ್ಥಾನ ಪಡೆಯುವುದು ಖಚಿತ. ಉತ್ತಮ ಆಡಳಿತ ಮುಂದುವರೆಸುವ ಕೆಲಸ ಮಾಡಲಿದೆ. ೨೦೧೩-೧೮ ರಲ್ಲಿ ಜೆಡಿಎಸ್-ಕಾಂಗ್ರೆಸ್ ಒಂದೂವರೆ ವರ್ಷ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸಿತ್ತು. ನಂತರ ಬಿಜೆಪಿ ಸರ್ಕಾರದಲ್ಲಿ ಹಾಸನ ಜಿಲ್ಲೆಯ ಅಭಿವೃ ದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ ಹಾಗೂ ಅನೇಕ ಯೊಜನೆ ಅನುಷ್ಠಾನಕ್ಕೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರಣವಾಗಿದೆ ಎಂದರು.

ವಿಶ್ವದಲ್ಲಿ ಅತೀದೊಡ್ಡ ಪಕ್ಷದ ಅಧ್ಯಕ್ಷರು ಪ್ರತಿದಿನ ದೇಶ ಸುತ್ತಿ ಪಕ್ಷ ಸಂಘಟನೆ ಮಾಡಿ ಸದೃಢ ರಾಜಕೀಯ ವಾತಾವರಣ ನಿರ್ಮಿಸಲು ನಡ್ಡಾ ಅವರು ಕಾರಣ. ರಾಷ್ಟ್ರೀಯ ಅಧ್ಯಕ್ಷರು ಬೇಲೂ ರಿಗೆ ಬಂದಿದ್ದು ಒಗ್ಗಟ್ಟು ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಮತದಾರರಿಗೆ ಉತ್ತಮ ಸಂದೇಶ ನೀಡಿದೆ. ಬೇಲೂರಿನಲ್ಲಿ ಬಿಜೆಪಿ ಅಧಿಕಾರಕ್ಕೆ ತರಲಿದ್ದೇವೆ ಎಂಬ ವಿಶ್ವಾಸ ಇದೆ ಎಂದರು.

ನಮ್ಮ ಸರ್ಕಾರ ಬೇಲೂರು ಅಭಿವೃದ್ಧಿಗೆ ಕಾಣಿಕೆ ಕೊಟ್ಟಿದೆ. ರಣಘಟ್ಟ ಯೋಜನೆಯಡಿ ಕೆರೆ ತುಂಬಿಸುವ ಯೋಜನೆ, ಪ್ರವಾಸೋದ್ಯಮ ಯೋಜನೆ, ಅರೇಹಳ್ಳಿ ಮಾದೀಹಳ್ಳಿ ಕೆರೆ ತುಂಬಿಸುವ ಕೆಲಸ ಮಾಡಿದ್ದೇವೆ. ರಣಘಟ್ಟ ಯೋಜನೆ ಜಾರಿಗೆ ಚಳವಳಿ ನಡೆಯುತ್ತಿತ್ತು ನಾವು ನೀಡಿದ ಆಶ್ವಾಸನೆಯಂತೆ ಯೋಜನೆ ಪೂರ್ಣ ಮಾಡಲಾಗಿದೆ ಎಂದರು.

ನಿನ್ನೆ ಸಚಿವ ಸಂಪುಟದಲ್ಲಿ ಬೇಲೂರು ಮತ್ತು ಅರಸೀಕೆರೆ ತಾಲ್ಲೂಕಿಗೆ ಜಲಜೀವನ್ ಮಿಷನ್ ಯೋಜನೆಯಡಿ ನೀರು ಪೂರೈಕೆಗೆ ಕ್ರಮವಹಿಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಕೇವಲ ಕಾರ್ಯಕ್ರಮ ಘೋಷಣೆ ಮಾಡುತ್ತಿದ್ದರು ಆದರೆ ಅನುಷ್ಠಾನ ಮಾಡಿದ್ದು ಬಿಜೆಪಿ ಸರ್ಕಾರ ಎಂಬುದನ್ನು ನೆನಪು ಮಾಡುವುದಾಗಿ ಹೇಳಿದರು.

ಬೇಲೂರು ಭಾಗದ ಕಾಫಿ ಬೆಳೆಗಾ ರರಿಗೆ ಲೀಸ್ ನಲ್ಲಿ ಭೂಮಿ ನೀಡುವ ವಿಚಾರ ಪ್ರಸ್ತಾಪ ಇದ್ದು ಕೆಲವೇ ದಿನದಲ್ಲಿ ನಿಯಮ ಜಾರಿಯಾಗಲಿದೆ. ಬಿಜೆಪಿ ಸರ್ಕಾರ ಬಂದಮೇಲೆ ರಾಗಿ ಖರೀದಿ ಮತ್ತು ಪಡಿತರದಲ್ಲಿ ಪೂರೈಕೆ ಮಾಡಲಾಗುತ್ತಿದೆ. ರಾಗಿ ಅಡಿಕೆ ಬೆಳೆಗಾರರಿಗೆ ಬಿಜೆಪಿ ಸರ್ಕಾರ ಅನುಕೂಲ ಮಾಡಿದ್ದು ಪ್ರತಿ ಮನೆಗೆ ತಿಳಿಸಿ ನಮ್ಮ ಪಕ್ಷಕ್ಕೆ ಮತ ನೀಡಲು ಮನವಿ ಮಾಡುವಂತೆ ಸಿಎಂ ತಿಳಿಸಿದರು.

ಯಾವುದೇ ಜಾತಿ ಮತ ನೋಡದೆ ಆಡಳಿತ ನೀಡುವುದೆ ನಮ್ಮ ಸರ್ಕಾರದ ಉದ್ದೇಶ ಅದರಂತೆ ಸರ್ಕಾರ ಯೋಜನೆ ರೂಪಿಸಿದೆ. ಸ್ವಚ್ಛ ಭಾರತ, ಪಿಎಂಕಿಸಾನ್ ಸೇರಿದಂತೆ ಅನೇಕ ಯೋಜನೆ ಜಾರಿಗೆ ಮೋದಿ ಅವರೆ ಸ್ಪೂರ್ತಿಯಾಗಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಉತ್ತಮ ಯೋಜನೆ ಜಾರಿಮಾಡಿದ್ದು, ಕಾಂಗ್ರೆಸ್ ಅವರ ಬೂಟಾಟಿಕೆ ಮಾತು ಸುಳ್ಳಿನ ಸುಳಿಯಲ್ಲಿ ಸಿಲುಕಿದ್ದಾರೆ. ಜಾತಿ ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ. ಬಿಡಿಎ , ನೀರಾವರಿ, ಬಡವರ ಹಾಸಿಗೆ ದಿಂಬಿಲ್ಲಿ ಭ್ರಷ್ಟಾಚಾರ ಮಾಡಿರುವ ಕಾಂಗ್ರೆಸ್ ಪಕ್ಷವನ್ನು ಸೂಲಿಸಬೇಕು ಎಂದು ಕರೆ ನೀಡಿದರು.

ಕೇಂದ್ರ ಸರ್ಕಾರದ ರಾಜ್ಯ ಕೃಷಿ ಸಚಿವೆ ಶೋಭ ಕರಂದ್ಲಾಜೆ ಮಾತನಾಡಿ, ಈ ಹಿಂದೆ ಬಿ.ಎಸ್.ಯಡಿ ಯೂರಪ್ಪನವರು ಪಾದಯಾತ್ರೆ ನಡೆಸಿ ಮುಖ್ಯಮಂತ್ರಿಯಾದ ಬಳಿಕ ಬೇಲೂರಿಗೆ ಯಗಚಿ ಏತ ನೀರಾವರಿ ಯೋಜನೆ ಮತ್ತು ರಣಘಟ್ಟ ಯೋಜನೆ ನೀಡಿದ್ದು ಬಿಜೆಪಿ ಸರ್ಕಾರವೇ ಹೊರತು ಜಿಲ್ಲೆಯಲ್ಲಿ ನಾವೇ ಘಟಾನುಘಟಿ ಎನ್ನುವ ರಾಜಕಾರಣಿಗಳಲ್ಲ ಎಂದು ಪರೋಕ್ಷವಾಗಿ ಜೆಡಿಎಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಕೇಂದ್ರ ಮತ್ತು ರಾಜ್ಯದಲ್ಲಿ ನಿಮ್ಮದೆ ಸರ್ಕಾರ ಇರುವ ಸಂದರ್ಭದಲ್ಲಿ ಯಾವ ಕೊಡುಗೆ ನೀಡಿರುವ ಬಗ್ಗೆ ಜನರಿಗೆ ತಿಳಿಸಿ ಎಂದು ಸವಾಲು ಹಾಕಿದ ಅವರು ಬೇಲೂರಿನಲ್ಲಿ ನಮ್ಮ ಶಾಸಕರು ಇಲ್ಲದಿರುವ ವೇಳೆಯಲ್ಲಿ ಬಿಜೆಪಿ ಸರ್ಕಾರ ನೀಡಿದ ನೀರಾವರಿ ಮತ್ತು ಇನ್ನಿತರ ಕೊಡುಗೆ ಬಗ್ಗೆ ಜನ ಸಾಮಾನ್ಯರು ಆಲೋಚನೆ ಮಾಡುವ ಮೂಲಕ ಈ ಭಾರಿ ವಿಧಾನಸಭಾ ಚುನಾವಣೆಯಲ್ಲಿ ಬೇಲೂರಿನಲ್ಲಿ ಕಮಲ ಅರಳಿಸಲು ಪಣ ತೊಡಬೇಕು ಎಂದು ಕರೆ ನೀಡಿದರು.

ಇಡೀ ವಿಶ್ವ ಕೋವಿಡ್‌ನಿಂದ ಕಂಗೆಟ್ಟಾಗ ಭಾರತ ಯಶಸ್ವಿಯಾಗಿ ಸಾಂಕ್ರಮಿಕ ಸೋಂಕನ್ನು ಎದುರಿಸಿತು. , ಭಾರತದಲ್ಲಿ ಶೇ ೧೦೦ ರಷ್ಟು ಉಚಿತವಾಗಿ ಎರಡು ಡೋಸ್ ಲಸಿಕೆ ನೀಡಲಾಯಿತು. ರಷ್ಯಾ ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡೂ ದೇಶಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಯುದ್ಧಕ್ಕೆ ವಿರಾಮ ನೀಡಿ, ಯುದ್ಧಭೂ ಮಿಯಲ್ಲಿ ಸಿಲುಕಿದ್ದ ಸಾವಿರಾರು ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತಂದ ಹೆಮ್ಮೆ ಭಾರತ ಪ್ರಧಾನಮಂತ್ರಿಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಗೋಪಾ ಲಯ್ಯ ಮಾತನಾಡಿ, ೭೦೦ ಕೋಟಿ ಜಿಲ್ಲೆಗೆ ಪಿಎಂ ಕಿಸಾನ್ ಯೋಜನೆ ಮೂಲಕ ಅನು ದಾನ ನೀಡಿದೆ. ರೈತ ಶಕ್ತಿಯೊಜನೆ ಮೂಲಕ ಡಿಸೆಲ್ ಒದಗಿಸಿದೆ. ಕಾಫಿ ಜೊತೆಗೆ ರಾಗಿ ಬೆಳೆಯುವ ೩೫೭೯ ರೂ ಕ್ವಿಂಟಾಲ್‌ಗೆ ಬೆಂಬಲ ಬೆಲೆ ನಿಗದಿ ಮಾಡಿದೆ. ರಣಘಟ್ಟ ಯೋಜನೆ ಜಾರಿಮಾಡಿದ ಕೀರ್ತಿ ಬಿಜೆಪಿ ಸಲ್ಲುತ್ತದೆ ಎಂದರು.

ಬಿಜೆಪಿ ಮುಖಂಡ ಹುಲ್ಲಹಳ್ಳಿ ಸುರೇ ಶ್ ಮಾತನಾಡಿ, ನಮ್ಮ ಸರ್ಕಾರ ಪಕ್ಷಾತೀ ತವಾಗಿ ಕೆಲಸಮಾಡಿದೆ ಬೇಲೂರು ವಿಧಾನ ಸಭೆ ಕ್ಷೇತ್ರದಲ್ಲಿ ನೂರಾರು ಕೋಟಿ ಅನುದಾನ ನೀಡಿದೆ, ನೀರಾವರಿ ಯೋಜನೆಗೂ ಸಾಕಷ್ಟು ನೆರವು ನೀಡಿದೆ ಎಂದರು. ಶಾಸಕ. ಸಿ.ಟಿ ರವಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ್, ಉಪಾಧ್ಯಕ್ಷ ಕೊರಟಗೆರೆ ಪ್ರಕಾಶ್, ತಾಲೂಕು ಅಧ್ಯಕ್ಷ ಅಡಗೂರು ಆನಂದ್, ಮಾಜಿ ಅಧ್ಯಕ್ಷ ಬೆಣ್ಣೂರು ರೇಣು ಕುಮಾರ್, ಬಿಜೆಪಿ ಮುಖಂಡರಾದ ಸಿದ್ದೇಶ್ ನಾಗೇಂದ್ರ, ಸಂತೋಷ್ ಕೆಂಚಾಂಬ, ಪ್ರಭಾಕರ್ ಜಿ.ಕೆ ಕುಮಾರ್, ಸಚಿನ್ ಸೇರಿದಂತೆ ಇತರರು ಹಾಜರಿದ್ದರು

ಬೇಲೂರಿಗೆ ಹೇಮಾವತಿ ನೀರು
ಬೇಲೂರಿನ ಚನ್ನಕೇಶವ ದೇವಾಲಯವನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲಾಗಿದ್ದು ಕೆಲವೇ ದಿನದಲ್ಲಿ ಶಾಶ್ವತ ಟೂರಿಸಂ ಸೆಂಟರ್ ಆಗಲಿದೆ. ಬೇಲೂರು ಸಮಗ್ರ ಅಭಿವೃದ್ಧಿ ಆಗಲಿದೆ ಎಂಬ ಭರವಸೆ ನೀಡುತ್ತೇನೆ. ಯಗಚಿಯಿಂದ ಮಾತ್ರ ಬೇಲೂರಿಗೆ ನೀರು ಪೂರೈಕೆ ಆಗುತ್ತಿತ್ತು ಆದರೆ ಮುಂದಿನ ದಿನ ಹೇಮಾವತಿ ನದಿನೀರು ಸಹ ಪೂರೈಕೆ ಆಗಲಿದೆ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.

ಶಕ್ತಿ ಪ್ರದರ್ಶನ
ಬೇಲೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಹಾಗೂ ಸಾರ್ವಜನಿಕ ಸಭೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಆಗಮಿಸಿದ ಸಂದರ್ಭದಲ್ಲಿ ಬಿಜೆಪಿ ನಾಯಕರಾದ ಹಾಗೂ ಟಿಕೆಟ್ ಆಕಾಂಕ್ಷಿಗಳಾದ ಕೊರಟಕೆರೆ ಪ್ರಕಾಶ್, ಹುಲ್ಲಹಳ್ಳಿ ಸುರೇಶ್, ಸಿದ್ದೇಶ್ ತಮ್ಮ ಬೆಂಬಲಿಗರ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಬೇಲೂರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ತಮ್ಮ ಬೆಂಬಲಿಗರ ಭಾವಚಿತ್ರ ದ ಬಂಟಿಂಗ್ಸ್ ಹಿಡಿದ ಕಾರ್ಯಕ್ರಮ ನಡೆಯುವ ವೇದಿಕೆಯ ಬಳಿ ಮೆರವಣಿಗೆಯಲ್ಲಿ ಸಾಗುವ ದೃಶ್ಯ ಸಾಮಾನ್ಯವಾಗಿತ್ತು, ಈ ರೀತಿ ಶಕ್ತಿ ಪ್ರದರ್ಶನ ಕ್ಕೆ ಆಗಮಿಸುವ ಪ್ರತಿಯೊಬ್ಬರಿಗೆ ೩೦೦-೫೦೦ ರೂ ಹಣ ನೀಡಿದ್ದಾರೆ ಎಂದು ಮೆರವಣಿಗೆಯಲ್ಲಿ ಇದ್ದ ಮಹಿಳಾ ಕಾರ್ಯಕರ್ತೆಯರೇ ತಿಳಿಸಿದ್ದಾರೆ.

ಒಡೆದು ಆಳುವ ನೀತಿಯನ್ನು ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ದೂರ ಇಡುವ ಕೆಲಸ ಆಗಬೇಕು, ಬಿಜಿಪಿ ಸರ್ಕಾರ ಅನೇಕ ಉತ್ತಮ ಕೆಲಸ ಮಾಡಿದ ಕೀರ್ತಿ ಮೋದಿ ನೇತೃತ್ವದ ಹಾಗೂ ರಾಜ್ಯದ ಬೊಮ್ಮಾಯಿ ಸರ್ಕಾರ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
-ಜೆ.ಪಿ. ನಡ್ಡಾ,
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

Gayathri SG

Recent Posts

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗೆದ್ದು ಬೀಗಿದ ಆರ್​​​ಸಿಬಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್​ ಪಂದ್ಯದಲ್ಲಿ ವಿರಾಟ್…

8 mins ago

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

8 hours ago

ಹುಬ್ಬಳ್ಳಿ ಕೊಲೆ ಪ್ರಕರಣ : ಆರೋಪಿ ಎನ್‌ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್‌ ಕೊಲೆ ಆರೋಪಿಗೆ ಎನ್‌ಕೌಂಟರ್‌ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.

8 hours ago

ಗತವೈಭವ ಸಾರುವ ಅಪರೂಪದ ಸಂಗೀತ ರುದ್ರೇಶ್ವರ ದೇವಸ್ಥಾನ

ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…

8 hours ago

ನ್ಯೂಸ್ ಕರ್ನಾಟಕ ವರದಿಗೆ ಎಚ್ಚೆತ್ತ ತಾಲ್ಲೂಕು ಆಡಳಿತ : ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…

8 hours ago

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ : ಶೈಲೇಂದ್ರ

ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…

8 hours ago