Categories: ಹಾಸನ

ಹಾಸನ: ಯುಜಿಡಿ ಅವ್ಯವಸ್ಥೆ, ನಿವಾಸಿಗಳ ಪರದಾಟ

ಹಾಸನ: ನಗರದ ಕೆ.ಆರ್ ಪುರಂ ನ ೫ನೇ ವಾರ್ಡ್‌ನಲ್ಲಿನ ಅಸಮರ್ಪಕ ಒಳಚರಂಡಿ ವ್ಯವಸ್ಥೆ ಕಾರಣ ನಿವಾಸಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ಹಲವು ವರ್ಷದಿಂದ ಇಲ್ಲಿನ ನಿವಾಸಿಗಳು ಒಳಚರಂಡಿ ಅವ್ಯ ವಸ್ಥೆ ಕುರಿತು ನಗರಸಭೆ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋ ಜನವಾಗಿಲ್ಲ. ಒಳಚರಂಡಿ ನೀರು ವಠಾರದಲ್ಲಿ ಉಕ್ಕಿ ಹರಿಯುತ್ತಿದ್ದು ರಸ್ತೆ ಸೇರಿದಂತೆ ಮನೆಯೊಳಗೆ ನುಗ್ಗುವ ಕಲುಷಿತ ನೀರಿನಿಂದ ಪರಿಸರ ಗಬ್ಬುನಾರುವಂತಾಗಿದೆ.

ಜಂಬೂ ಕಿಡ್ಸ್ ಶಾಲೆ, ಎಂಟು ಮನೆ ವಠಾರ, ನಾರಾಯಣ ಸ್ವಾಮಿ ಹಾಗೂ ಮಧು ಅವರ ಮನೆಯ ಸುತ್ತಮುತ್ತ ಇದೇ ಪರಿಸ್ಥಿತಿ ಇದೆ. ಗಜಾನನ ಹೋಟೆಲ್ ನ ಯುಜಿಡಿ ಹಾಗೂ ಮೋರಿಯ ಅಸಮರ್ಪಕ ನಿರ್ವಹಣೆಯೂ ಇದಕ್ಕೆ ಕಾರಣ ಇರಬಹುದು ಎಂದು ನಿವಾಸಿಗಳು ತಿಳಿಸಿದ್ದಾರೆ.
ಈ ಸಮಸ್ಯೆ ಸಂಬಂಧ ವಾರ್ಡ್‌ನ ಕೌನ್ಸಿಲರ್ ಅವರಿಗೆ ತಿಳಿಸಿದರೂ ಯಾವುದೇ ಪ್ರಯೋಜನ ವಾಗಿಲ್ಲ ಕೂಡಲೇ ನಗರಸಭೆ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಒದಗಿಸಲು ನಿವಾಸಿಗಳು ಒತ್ತಾಯಿಸಿದ್ದಾರೆ.

Ashika S

Recent Posts

ಪ್ರಧಾನಿ ಘೋಷಣೆಗಷ್ಟೇ ಸೀಮಿತ; ಮೋದಿ ವಿರುದ್ದ ಬಿಕೆ ಹರಿಪ್ರಸಾದ ವಾಗ್ದಾಳಿ

ಪ್ರಧಾನಿ ಮೋದಿ ಒಬ್ಬ ಘೋಷಣಾ ವೀರ. ಘೋಷಣೆಗಷ್ಟೇ ಪ್ರಧಾನಿ ಸೀಮಿತವಾಗಿದ್ದು, ಘೋಷಣೆಗಳ ಮೂಲಕವೇ ಹಿರೋ ಆದವರು ಎಂದು ಪ್ರಧಾನಮಂತ್ರ ಮೋದಿ…

3 mins ago

ಅಶ್ಲೀಲ ವಿಡಿಯೋ ವೈರಲ್ ಪ್ರಕರಣ; ಜೆಡಿಎಸ್‌ನಿಂದ ಪ್ರಜ್ವಲ್ ಉಚ್ಛಾಟನೆ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಕೇಸ್‌ಗೆ ದೊಡ್ಡ ತಿರುವು ಸಿಕ್ಕಿದ್ದು, ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಬೆಂಕಿ ಹಚ್ಚಿರುವ…

28 mins ago

ಇಪ್ಪತ್ತೆಂಟು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ : ಯಡಿಯೂರಪ್ಪ

ಕರ್ನಾಟಕದಲ್ಲಿ ಚುನಾವಣೆ ವಾತಾವರಣ ಚೆನ್ನಾಗಿ ಇದೆ. ಈಗ ಚುನಾವಣೆ ನಡೆದಿರೋ 14 ಕ್ಷೇತ್ರಗಳಲ್ಲಿ ನಾವು 14 ಗೆಲ್ಲುತ್ತೇವೆ. ಮುಂದೆ ನಡೆಯುವ…

33 mins ago

ಲಾರಿಗೆ ಡಿಕ್ಕಿ ಹೊಡೆದ ಕಾರು : ಚಾಲಕ ಸ್ಥಳದಲ್ಲೇ ಸಾವು

ಅತಿ ವೇಗದಲ್ಲಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್ ದಾಟಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ…

41 mins ago

ಮೋದಿ ಚುನಾವಣೆಯಲ್ಲಿ ಹತಾಶರಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

ನರೇಂದ್ರ ಮೋದಿ ಈ ಚುನಾವಣೆಯಲ್ಲಿ ಹತಾಶರಾಗಿದ್ದಾರೆ. ಅವರಿಗೆ ಚುನಾವಣೆ ಗೆಲ್ಲುವ ವಿಶ್ವಾಸ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳ್ಳಾರಿ-ವಿಜಯನಗರ ಲೋಕಸಭಾ…

42 mins ago

ರಾಮೇಶ್ವರಂ ಕೆಫೆ ಸ್ಫೋಟ ​​: ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ

ನಗರದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಾದ ಮೊಹಮ್ಮದ್ ಮತೀನ್ ಮತ್ತು ಮುಸಾವಿರ್ ಹುಸೇನ್​ಗೆ 14…

60 mins ago