Categories: ಹಾಸನ

ಹಾಸನ: ಸಂಕ್ರಾಂತಿ ಸಂಭ್ರಮ, ವ್ಯಾಪಾರ ಬಲು ಜೋರು

ಹಾಸನ: ಮಕರ ಸಂಕ್ರಾಂತಿ ಹಬ್ಬದ ಮೊದಲ ದಿನ ಇಂದು ಭೋಗಿ ಸಂಭ್ರಮ ಜೋರಾಗಿದೆ. ಇಂದು ಹಳೆಯದನ್ನು ತ್ಯಜಿಸಿ, ಬದಲಾವಣೆ ಕಾರಣವಾಗುವ ಹೊಸ ವಿಷಯಗಳ ಮೇಲೆ ಕೇಂದ್ರೀಕರಿಸುವ ಸಂಕೇತವಾಗಿ ಆಚರಿಸಲಾಗುತ್ತದೆ.

ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಕಳೆಗುಂಡಿದ್ದ ಸಂಕ್ರಾಂತಿ ಹಬ್ಬವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಮುಂದಾಗಿದ್ದಾರೆ. ಇದು ವರ್ಷದ ಮೊದಲ ಹಬ್ಬ ಆಗಿರೋ ಕಾರಣ, ಜನರು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇಂದು ಬೆಳಗಿನಿಂದಲೇ ವ್ಯಾಪಾರ ಸಖತ್ ಜೋರಾಗಿದೆ. ನಾಳೆ ಸಂಕ್ರಾಂತಿ ಹಬ್ಬ ಹಿನ್ನೆಲೆ ಹೂ, ಹಣ್ಣು, ಕಬ್ಬು, ಗೆಣಸು, ಕಡಲೆಕಾಯಿ, ತರಕಾರಿ ಇತರ ಸಾಮಗ್ರಿಗಳ ಖರೀದಿಯಲ್ಲಿ ಜನರು ಫುಲ್ ಬ್ಯುಸಿಯಾಗಿದ್ದಾರೆ. ನಗರದ ಸಹ್ಯಾದ್ರಿ ವೃತ್ತ ,ಕಟ್ಟಿನ ಕೆರೆ ಮಾರುಕಟ್ಟೆ ಮಹಾವೀರ ಸರ್ಕಲ್, ತಣ್ಣೀರು ಹಳ್ಳ ರಸ್ತೆ, ಸಂತೆಪೇಟೆ ಸರ್ಕಲ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹಬ್ಬದ ಕಾರಣದಿಂದ ವ್ಯಾಪಾರಿಗಳು ಮಾರಾಟ ಆರಂಭಿಸಿದ್ದು, ಹೂವು ಮತ್ತು ಬಟ್ಟೆಗಳ ವ್ಯಾಪಾರ ಬಿರುಸಿನಿಂದ ಸಾಗಿದೆ. ಹಬ್ಬದ ಕಾರಣ ಎಂದಿನಂತೆ ಹೂವುಗಳ ಮಾರಾಟ ಸಹ ಹೆಚ್ಚಾಗಿದ್ದು, ಮಾರಾಟದ ಜೊತೆಗೆ ಬೆಲೆಯೂ ಏರಿಕೆಯಾಗಿಯೂ ಆಗಿದೆ. ಬೆಲೆ ಏರಿಕೆ ನಡುವೆಯೂ ಜನರ ಖರೀದಿ ಮುಂದುವರಿದಿದೆ.

ಮಾರುಕಟ್ಟೆಯಲ್ಲಿ ಖರೀದಿ ಜೋರು:
ವಿಶೇಷ ಎಂದರೇ, ಈ ಬಾರಿ ಉತ್ತಮ ಬೆಳೆ ಬಂದಿರುವುದರಿಂದ ಮಾರುಕಟ್ಟೆಗೆ ಉತ್ತಮ ಗುಣಮಟ್ಟದ ಕಡಲೆಕಾಯಿ, ಕೊಬ್ಬರಿ, ಎಳ್ಳು ಲಭ್ಯವಾಗುತ್ತಿದೆ. ಅಲ್ಲದೇ ಬಣ್ಣ ಬಣ್ಣದ ಎಳ್ಳು ಬೆಲ್ಲದ ಮಿಶ್ರಣ ಎಲ್ಲರನ್ನು ಆಕರ್ಷಣೆ ಮಾಡುತ್ತಿದೆ. ಇನ್ನು, ಸಾಂಪ್ರದಾಯಿಕವಾಗಿ ಹಬ್ಬ ಆಚರಣೆ ಮಾಡುವವರು ಪ್ರತ್ಯೇಕವಾಗಿ ಎಳ್ಳು, ಬೆಲ್ಲ ಖರೀದಿ ಮಾಡುತ್ತಿದ್ದಾರೆ.

Sneha Gowda

Recent Posts

ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ ದರ ಪಟ್ಟಿ ಹೀಗಿದೆ!

ಇಂದು ಅಕ್ಷಯ ತೃತೀಯ ದಿನವಾಗಿದ್ದು, ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸತತ ಏರಿಕೆಯ ಬಳಿಕ ಎರಡು ದಿನ ಸತತ ಬೆಲೆ…

12 mins ago

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

8 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

8 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

8 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

9 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

10 hours ago