Categories: ಹಾಸನ

ಹಾಸನ: ಐ.ಐ.ಟಿ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸದಂತೆ ರೇವಣ್ಣ ಆಗ್ರಹ

ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕನಸಾದ ಐಐಟಿ ಸ್ಥಾಪನೆ ಉದ್ದೇಶಕ್ಕೆ ಗುರುತಿಸಿರುವ ೧೦೨೪ ಎಕರೆ ಭೂಮಿಯನ್ನು ಯಾವುದೇ ಕಾರಣಕ್ಕೂ ಕೈಗಾರಿಕೆ ಅಭಿವೃದ್ಧಿ ಉದ್ದೇಶಕ್ಕೆ ಬಳಸಬಾರದು ಎಂದು ಶಾಸಕ ಎಚ್ ಡಿ ರೇವಣ್ಣ ಆಗ್ರಹಿಸಿದರು.

ನಗರದ ಸಂಸದರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲ ಹಾಸನ ಜಿಲ್ಲೆಯನ್ನು ಕಡೆಗಣಿಸಲಾಗುತ್ತಿದೆ. ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ಜಿಲ್ಲೆಗೆ ಬಹಳಷ್ಟು ಅನ್ಯಾಯವಾಗಿದ್ದು ಇದೀಗ ಐಐಟಿ ಸ್ಥಾಪನೆಗೆ ಮೀಸಲಾದ ಜಾಗವನ್ನು ವಸತಿ ಮತ್ತು ಕೈಗಾರಿಕಾ ಉದ್ದೇಶಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ದೂರಿದರು.

ಐಐಟಿ ಸ್ಥಾಪನೆಗೆ ಭೂಮಿಯನ್ನು ಗುರುತಿಸಿ ಸ್ವಾಧೀನ ಪಡಿಸುವ ಸಂದರ್ಭದಲ್ಲಿ ಪ್ರತಿ ಎಕರೆಗೆ ೫ ಲಕ್ಷ ನಿಗದಿ ಮಾಡಿ ಕೃಷ್ಣೆಗೌಡ ಎಂಬುವರು ಖರೀದಿ ಮಾಡಿದ್ದರು ಆದರೆ ನನ್ನ ಮನವಿಗೆ ಸ್ಪಂದಿಸಿ ಐಐಟಿ ಸ್ಥಾಪನೆಗೆ ಭೂಮಿಯನ್ನು ಬಿಟ್ಟು ಕೊಟ್ಟರು ಕುಮಾರಸ್ವಾಮಿ ಅವರು ಅಧಿಕಾರ ಅವಧಿಯಲ್ಲಿ ಎಲ್ಲಾ ಪ್ರಕ್ರಿಯೆಯು ನಡೆಸಿ ಕೇಂದ್ರ ಸರ್ಕಾರಕ್ಕೆ ದಾಖಲೆ ಒದಗಿಸಲಾಗಿತ್ತು ಆದರೆ ಬಿಜೆಪಿಯೊಂದಿಗೆ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಹಾಸನಕ್ಕೆ ಬರಬೇಕಾದ ಐಐಟಿ ರಾಜಸ್ಥಾನಕ್ಕೆ ವರ್ಗವಾಯಿತು ನಂತರವೂ ಸಹ ಪ್ರಯತ್ನ ಮಾಡಲಾಗಿದ್ದರು ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಗುಲ್ಬರ್ಗಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಮನವಿ ಮೇರೆಗೆ ಐಐಟಿ ಸ್ಥಾಪನೆ ಮಾಡಲಾಗಿದ್ದು ಸದ್ಯ ಹಾಸನದ ಯುವಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪಕ್ಷತೀತವಾಗಿ ಸಹಕರಿಸಲು ಮನವಿ ಮಾಡಿದರು.

ಐಐಟಿ ಸ್ಥಾಪನೆಗೆ ಗುರುತಿಸಲಾಗಿರುವ ಸಾವಿರ ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶಕ್ಕೆ ಬಳಸಿಕೊಳ್ಳಲು ಕೆ ಐ ಎ ಡಿ ಬಿ ವತಿಯಿಂದ ಭೂಸ್ವಾಧೀನ ಮಾಡಿರುವ ಜಾಗವನ್ನು ಕೈಗಾರಿಕಾ ವಲಯ ಮತ್ತು ವಸತಿ ಯೋಜನೆಯನ್ನು ರಚಿಸಿ ಟೆಂಡರ್ ಕರೆದು ಅನುಷ್ಠಾನಗೊಳಿಸುತ್ತಿದ್ದು ಈ ಪ್ರಕ್ರಿಯೆಯನ್ನು ಸಾರ್ವಜನಿಕ ಹಿತ ದೃಷ್ಟಿಯಿಂದ ಕೂಡಲೇ ರದ್ದುಗೊಳಿಸುವಂತೆ ಮಾಜಿ ಪ್ರಧಾನಿ ದೇವೇಗೌಡರು ಸಹ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು ಈ ಸಂಬಂಧ ಯಾವುದೇ ಪ್ರಕ್ರಿಯೆ ನಡೆಸದಂತೆ ಮುಖ್ಯಮಂತ್ರಿಗಳು ಸಹ ಮನವಿ ಪತ್ರದಲ್ಲಿ ಟಿಪ್ಪಣಿ ಬರೆದಿದ್ದಾರೆ ಎಂದು ರೇವಣ್ಣ ಹೇಳಿದರು.

ಇತ್ತೀಚೆಗೆ ಪ್ರಧಾನಿಯನ್ನು ಭೇಟಿ ಮಾಡಿದ ಎಚ್ .ಡಿ ದೇವೇಗೌಡರು ಐಐಟಿ ಸ್ಥಾಪನೆ ಕುರಿತು ಮಾತನಾಡಿದ್ದು ಪ್ರಧಾನಿಗಳು ಸಹ ಆಶಾದಾಯಕ ಉತ್ತರ ನೀಡಿದ್ದು ಜಿಲ್ಲೆಗೆ ಐಐಟಿ ತರುವ ನಿಟ್ಟಿನಲ್ಲಿ ಪಕ್ಷತೀತವಾಗಿ ಎಲ್ಲರ ಬೆಂಬಲ ಅಗತ್ಯವಿದೆ ಎಂದು ಹೇಳಿದರು.

ಒಂದು ವೇಳೆ ರಾಜ್ಯ ಸರ್ಕಾರ ಜಿಲ್ಲೆಯ ಜನತೆ ಆಶಯಕ್ಕೆ ವಿರುದ್ಧವಾಗಿ ಕ್ರಮ ಕೈಗೊಂಡರೆ ಜಿಲ್ಲೆಯ ಶಾಸಕರು ಲೋಕಸಭಾ ಸದಸ್ಯರು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ವಿಧಾನಸೌಧ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರೇವಣ್ಣ ಎಚ್ಚರಿಸಿದರು.

ಹಾಸನ ಬೇಲೂರು ಚಿಕ್ಕಮಗಳೂರು ರೈಲ್ವೆ ಮಾರ್ಗಕ್ಕೆ ೨೮೦ ಎಕರೆ ಜಾಗವನ್ನು ಗುರುತಿಸಲಾಗಿದ್ದು ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು ಹಾಗೂ ಅಗತ್ಯ ಭೂಮಿಯನ್ನು ಗುರುತಿಸುವಂತೆ ಆಂ ದಿನ ಕೇಂದ್ರ ಸಚಿವರು ಸಹ ಸೂಚನೆ ನೀಡಿದ್ದರು.

ಇದೀಗ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ನಂತರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಎಚ್ ಡಿ ಕುಮಾರಸ್ವಾಮಿ ಜನರಿಗೆ ಟೋಪಿ ಹಾಕುತ್ತಿದ್ದಾರೆ ಎಂಬ ಡಿ.ಕೆ ಸುರೇಶ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರೇವಣ್ಣ ಅವರು “ಯಾರು ಯಾರಿಗೆ ಟೋಪಿ ಹಾಕುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ” ಆರು ಜನ ಶಾಸಕರಿದ್ದರು ಸಹ ಮುನಿಯಪ್ಪ ಅವರನ್ನು ಸೋಲಿಸಿದ ಕಾಂಗ್ರೆಸ್ ಪಕ್ಷ “ಟೋಪಿ ಹಾಕುವುದು ಕಾಂಗ್ರೆಸ್ನ ಸಂಸ್ಕೃತಿ”ಯಾಗಿದೆ ಎಂದು ಜರಿದರು.

Gayathri SG

Recent Posts

ಮುಂಗಾರು: ಭೂಮಿ ಹದ ಮಾಡಲು ಮುಂದಾದ ರೈತರು

ಹಲವು ದಿನಗಳಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಇದರಿಂದ ರೈತರು ಭೂಮಿ ಹದ ಮಾಡುವ ಕೆಲಸಕ್ಕೆ ಮುಂದಡಿ ಇಟ್ಟಿದ್ದಾರೆ.

4 mins ago

ಪಿಕಪ್ ವಾಹನ ಪಲ್ಟಿಯಾಗಿ 15 ಮಂದಿ ಸಾವು !

ಇಲ್ಲಿನ ಕವರ್ಧಾದಲ್ಲಿ ಪಿಕಪ್ ವಾಹನ ಪಲ್ಟಿಯಾಗಿ 15 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ತನಿಖೆ ನಡೆಸುತ್ತಿದ್ದಾರೆ.

16 mins ago

ಶ್ರೀಲಂಕಾದ ನಾಲ್ವರು ಐಸಿಸ್ ಭಯೋತ್ಪಾದಕರನ್ನು ಬಂಧಿಸಿದ ಎಟಿಎಸ್

ಶ್ರೀಲಂಕಾದ ನಾಲ್ವರು ಐಸಿಸ್ ಭಯೋತ್ಪಾದಕರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ  ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ…

33 mins ago

ಮೇಲ್ಛಾವಣಿಗೆ ಬಿದ್ದು ಬದುಕುಳಿದ ಮಗು; ಆದರೆ ಟೀಕೆಯಿಂದ ಬೇಸತ್ತು ತಾಯಿ ಆತ್ಮಹತ್ಯೆ

ಕಳೆದ ಏಪ್ರಿಲ್​ ತಿಂಗಳಿನಲ್ಲಿ ಚೆನ್ನೆೈನ ಅಪಾರ್ಟ್ ಮೆಂಟ್​ವೊಂದರ ಮೇಲ್ಛಾವಣಿಯಲ್ಲಿ ಮಗು ಸಿಲುಕಿಕೊಂಡಿತ್ತು. ಆ ಮಗುವನ್ನು ಸ್ಥಳೀಯರ ನೆರವಿನಿಂದ ರಕ್ಷಿಸಲಾಗಿತ್ತು. ಮಗುವಿನ…

37 mins ago

ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ಹೇಳಿದಂಗೆ ಮಾಡ್ತೀವಿ: ಸಿಎಂ

ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ಹೇಳಿದಂಗೆ ಮಾಡ್ತೀವಿ,  ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

48 mins ago

ಪಡೀಲಿನಲ್ಲಿ ಕಾರು ಚಲಾಯಿಸುತ್ತಿದ್ದ ಮಹಿಳೆಯ ನಿರ್ಲಕ್ಷ್ಯಕ್ಕೆ ಅಮಾಯಕ ವ್ಯಕ್ತಿ ಬಲಿ !

ಕಾರು ಚಲಾಯಿಸುತ್ತಿದ್ದ ಮಹಿಳೆಯ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದಾಗಿ ರಸ್ತೆ ಬದಿ ಬೈಕ್ ನಿಲ್ಲಿಸಿ ಮೊಬೈಲಿನಲ್ಲಿ ಮಾತನಾಡುತ್ತಿದ್ದ ಅಮಾಯಕ ವ್ಯಕ್ತಿಯೊಬ್ಬರು ಪ್ರಾಣ…

53 mins ago