Categories: ಹಾಸನ

ಹಾಸನ: ಚನ್ನಗಿರಿ ಬಳಿ ಭೀಕರ ಅಪಘಾತ, ಅತ್ತೆ-ಸೊಸೆ ಸಾವು

ಹಾಸನ: ದಾವಣೆಗೆರೆಯಿಂದ ಮನೆಯ ಗೃಹ ಪ್ರವೇಶ ಮುಗಿಸಿಕೊಂಡು ವಾಪಸ್ ಬರುವಾಗ ಟಿಪ್ಪರ್ ಲಾರಿಯೊಂದು ಓವರ್ ಟೇಕ್ ಮಾಡಲು ಹೋಗಿ ಚಲಿಸುತ್ತಿದ್ದ ಕಾರಿಗೆ ಟಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ಕು ಜನರಲ್ಲಿ ಅತ್ತೆ ಮತ್ತು ಸೊಸೆ ಇಬ್ಬರು ಸಾವನಪ್ಪಿದ ಘಟನೆ ಚನ್ನಗಿರಿ ಬಳಿ ನಡೆದಿದೆ.

ಬಾಳ್ಳುಪೇಟೆಯ ಕಾಫಿ ಪ್ಲಾಂಟರ್ ಮತ್ತು ಸಹ್ಯಾದ್ರಿ ಥೀಯೇಟರ್ ಮಾಲೀಕರಾಗಿದ್ದ ಬಿ.ಎಸ್. ಗುರುನಾಥ್ ಅವರ ಪತ್ನಿ ಮೈತ್ರಿದೇವಿ ೭೦ ವರ್ಷ ಹಾಗೂ ಸೊಸೆ ಸೌಜನ್ಯ (೪೮) ಎಂಬುವರೇ ರಸ್ತೆ ಅಪಘಾತದಲ್ಲಿ ಸಾವನಪ್ಪಿದ ದುರ್ದೈವಿಗಳು.

ದಾವಣಗೆರೆಯಿಂದ ಹಿಂದಿರುಗಿ ಬರುವಾಗ ಚನ್ನಗಿರಿ ಬಳಿ ಟಿಪ್ಪರ್ ವಾಹನದ ಚಾಲಕ ಅತೀ ವೇಗದಲ್ಲಿ ಓವರ್ ಟೇಕ್ ಮಾಡುವ ಅವಸರದಲ್ಲಿ ಕಾರಿಗೆ ರಭಸವಾಗಿ ಗುದ್ದಿದ ಪರಿ ಣಾಮ ಕಾರು ಮೂರು ಪಲ್ಟಿಯಾಗಿ ರಸ್ತೆಗೆ ಉರುಳಿದೆ.

ಈ ವೇಳೆ ಕಾರಿನಲ್ಲಿ ಮುಂಭಾಗ ಇದ್ದ ಬಿ.ಎಸ್. ಗುರುನಾಥ್ ಹಾಗೂ ಪುತ್ರ ರಾಜೇಶ್ ಇಬ್ಬರಿಗೆ ಗಾಯಗಳಾಗಿದ್ದು ಹಿಂಬದಿ ಕುಳಿತಿದ್ದ ಗುರು ನಾಥ್ ಪತ್ನಿ ಮೈತ್ರಿದೇವಿ ಮತ್ತು ಸೊಸೆ ಸೌಜನ್ಯ ಸೇಫ್ಟಿ ಬೆಲ್ಟ್ ಹಾಕಿ ರದ ಕಾರಣ ದೇಹಕ್ಕೆ ತೀವ್ರವಾದ ಪೆಟ್ಟು ಬಿದ್ದು ಸಾವನಪ್ಪಿದ್ದಾರೆ. ಪಾರ್ಥಿವ ಶರೀರವನ್ನು ಮಲ್ಲಿಗೆ ಹೋಟೇಲ್ ಮುಂಭಾಗದ ರಸ್ತೆ ಬಳಿ ಇರುವ ನಿವಾಸದಲ್ಲಿ ಇಡ ಲಾಗಿ ನಂತರ ಬಾಳ್ಳುಪೇಟೆ ಯಲ್ಲಿರುವ ಅವರ ಕಾಫಿತೋಟ ದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವುದು.

ಶಾಸಕ ಪ್ರೀತ್ರಮ್ ಜೆ. ಗೌಡ, ಮಲೆನಾಡು ತಾಂತ್ರಿಕ ವಿದ್ಯಾಲ ಯದ ಆರ್.ಟಿ. ದೇವೇಗೌಡ, ತಿಪಟೂರು ಕ್ಷೇತ್ರದ ಮಾಜಿ ಶಾಸಕ ಷಡಕ್ಷರಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಹೆಚ್.ಪಿ. ಮೋಹನ್, ಹಿರಿಯ ಪತ್ರಕರ್ತರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರು ಆರ್.ಪಿ. ವೆಂಕಟೇಶ್ ಮೂರ್ತಿ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷರು ಜಿ.ಎಲ್. ಮುದ್ದೇ ಗೌಡ, ಮಾಜಿ ಶಾಸಕ ಬಿ.ಆರ್. ಗುರುದೇವ್ ಅಖಿಲ ಭಾರತ ವೀರ ಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಇತರರು ಅಂತಿಮ ದರ್ಶನ ಪಡೆದರು.

Sneha Gowda

Recent Posts

ಭೂದೇವಿ ಸಮೇತ ಶ್ರೀಲಕ್ಷ್ಮಿವರಾಹಸ್ವಾಮಿಗೆ ಅಭಿಷೇಕ

ವರಹಾ ಜಯಂತಿಯ ಅಂಗವಾಗಿ ಕೃ?ರಾಜಪೇಟೆ ತಾಲ್ಲೂಕಿನ ಕಲ್ಲಹಳ್ಳಿಯ ಭೂದೇವಿ ಸಮೇತ ಶ್ರೀಲಕ್ಷ್ಮಿ ಭೂವರಾಹಸ್ವಾಮಿಯ ಶಿಲಾಮೂರ್ತಿಗೆ ವಿಶೇ? ಅಭಿ?ಕ ನಡೆಯಿತಲ್ಲದೆ, ಸ್ವಾಮಿಯ…

6 hours ago

ನನ್ನ ವಿರುದ್ಧ ದೇವರಾಜೇಗೌಡ ಮಾಡಿರುವ ಆಪಾದನೆಗಳು ಆಧಾರ ರಹಿತ: ಡಿಕೆ ಶಿವಕುಮಾರ್

ಹಾಸನ ವಿಡಿಯೋ ಪೆನ್​ಡ್ರೈವ್​ ಸೂತ್ರಧಾರಿ ಡಿಕೆ ಶಿವಕುಮಾರ್ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿ ಆಡಿಯೋವೊಂದನ್ನು…

6 hours ago

ರಾಜ್ಯದ ಹಲವೆಡೆ ಮುಂದಿನ 5 ದಿನಗಳ ಕಾಲ‌ ಗುಡುಗು ಸಹಿತ ಮಳೆ ಸಾಧ್ಯತೆ

ರಾಜ್ಯದ ಹಲವೆಡೆ ಇಂದಿನಿಂದ ಮೇ 11ರವರೆಗೆ ವರುಣ ಆಗಮನ ಆಗುವ ಮುನ್ಸೂಚನೆ. ಹಾಗೂ ಮುಂದಿನ 5 ದಿನಗಳ ಕಾಲ‌ ಗುಡುಗು…

7 hours ago

ಬೀದರ್ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರು ಮಾವಿನ ಹಣ್ಣಿನ ದರ್ಬಾರ್‌

ಯುಗಾದಿ ಮುಗಿಯುತ್ತಿದ್ದಂತೆ ಎಲ್ಲೆಡೆ ಮಾವಿನ ಹಣ್ಣುಗಳ ದರ್ಬಾರ ಕಂಡುಬರುತ್ತಿದೆದೆ. ಮಾರುಕಟ್ಟೆಗೆ ಮಾವಿನಕಾಯಿ ಹೆಚ್ಚಾಗಿ ಬರುತ್ತಿದೆ. ಸಾಲಾಗಿ ಜೋಡಿಸಿಟ್ಟ ಮಾವಿನ ಹಣ್ಣು…

7 hours ago

ಬಾಲಕಿ ಮೇಲೆ 2 ರಾಟ್‌ವೀಲರ್ ನಾಯಿಗಳಿಂದ ದಾಳಿ: ಮಾಲೀಕ ಅರೆಸ್ಟ್

ಎರಡು ರಾಟ್‌ವೀಲರ್ ನಾಯಿಗಳು ಐದು ವರ್ಷದ ಬಾಲಕಿ ಮೇಲೆ ದಾಳಿ ಮಾಡಿದ ಘಟನೆ ಚೆನ್ನೈನ ಥೌಸಂಡ್ ಲೈಟ್ಸ್ ಪ್ರದೇಶದ ಸಾರ್ವಜನಿಕ…

7 hours ago

ಬೀದರ್: ಬಿಸಿಲಿನ ಝಳಕ್ಕೆ ಚುನಾವಣೆ ಸಿಬ್ಬಂದಿ ತತ್ತರ

ಮಂಗಳವಾರ ನಡೆಯಲಿರುವ ಲೋಕಸಭೆ ಚುನಾವಣೆಗೆ ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸೋಮವಾರ ಮಧ್ಯಾಹ್ನದಿಂದಲೇ ಕರ್ತವ್ಯ ನಿರತ ಸಿಬ್ಬಂದಿ ಮತಗಟ್ಟೆಗೆ…

8 hours ago