ಹಾಸನ

ಹಾಸನ: ಡಬಲ್ ಇಂಜಿನ್ ಸರ್ಕಾರ ಮತ್ತೆ ಅಧಿಕಾರಕ್ಕೆ- ಪ್ರಹ್ಲಾದ್ ಜೋಶಿ

ಹಾಸನ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ೨೦೧೮ರ ಫಲಿತಾಂಶಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭವಿಷ್ಯ ನುಡಿದರು.

ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಜಾವಗಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾರತೀಯ ಜನತಾ ಪಾರ್ಟಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಾಗೂ ಮಾರ್ಗದರ್ಶನದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದು ೨೦೧೮ ಕಿಂತ ಹೆಚ್ಚಿನ ಸ್ಥಾನವನ್ನು ಪಡೆದು ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ ಎಂದರು.

ಡಬಲ್ ಇಂಜಿನ್ ಸರ್ಕಾರದ ಪರಿಣಾಮ ದೇಶದಲ್ಲಿ ಬದಲಾವಣೆ ಕಂಡಿದೆ ಇದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ಎಷ್ಟು ಪ್ರಮಾಣದಲ್ಲಿ ರೈಲ್ವೆ, ರಸ್ತೆ ಅಭಿವೃದ್ಧಿಯಾಗುತ್ತಿದೆ. ಎಲ್ಲಾ ಸಂಗತಿಗಳನ್ನು, ಮೂಲಭೂತ ಸೌಲಭ್ಯ ಸ್ಕೀಮ್ ಗಳನ್ನು ಜನ ನೋಡಿದ್ದಾರೆ. ಇದೇ ಡಬಲ್ ಇಂಜಿನ್ ಸರ್ಕಾರ ಮುಂದೆಯು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಯಾತ್ರೆಯನ್ನು ನಾವು ಮಾಡುತ್ತಿದ್ದೇವೆ ಈ ಬಾರಿ ಜನರು ಪರಿವಾರದ ವಿರುದ್ಧ ಭ್ರಷ್ಟಾಚಾರದ ವಿರುದ್ಧ ಮತ್ತು ನರೇಂದ್ರ ಮೋದಿ ಬಿಜೆಪಿ ಪಾರ್ಟಿಗೆ ಮತವನ್ನು ಕೊಡಲಿದ್ದಾರೆ ಎಂದರು. ಬೇಲೂರು, ಸಕಲೇಶಪುರ, ಹಾಸನದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ನಾನು ಸಹೋದರಿ ಶೋಭಾ ಕರಂದ್ಲಾಜೆ ಬಂದಿದ್ದೇವೆ. ನಾನು ಉತ್ತರ ಕರ್ನಾಟಕ ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಭಾಗವಹಿಸಿ ಇದೀಗ ಹಾಸನಕ್ಕೆ ಬಂದಿದ್ದು ನಮ್ಮ ನಿರೀಕ್ಷೆಗೂ ಮೀರಿ ವಿಜಯ ಸಂಕಲ್ಪ ಯಾತ್ರೆ ಯಶಸ್ವಿಯಾಗಲಿದೆ ಎಂದು ಹೇಳಿದರು.

ಮಾಡಾಳು ವಿರೂಪಾಕ್ಷಪ್ಪ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು ಲೋಕಾಯುಕ್ತಕ್ಕೆ ಅಧಿಕಾರ ಕೊಟ್ಟು ಅದನ್ನು ಬಲಗೊಳಿಸಿದ್ದು ಬಿಜೆಪಿ ಬೊಮ್ಮಾಯಿ ನೇತೃತ್ವದ ಸರ್ಕಾರ , ಈ ಸರ್ಕಾರಕ್ಕೆ ಅವರು ತಾಂತ್ರಿಕವಾಗಿ ಸಲಹೆ ಕೊಟ್ಟಿದ್ದಾರ ಹೇಳಲಿ, ಎಸಿಬಿ ವಿರುದ್ಧವಾಗಿ ಲೋಕಾಯುಕ್ತ ಪರವಾಗಿ ಏನು ಆದೇಶ ಬಂದಿದೆ ಇದರ ವಿರುದ್ಧ ಸುಪ್ರೀಂ ಕೋರ್ಟ್ ಗೆ ಅಪಿಲ್ ಹೋಗಬೇಕು ಅಂತ ಇದೇ ಕಾಂಗ್ರೆಸ್ ಪಾರ್ಟಿಯವರು ಹೇಳಿದರು.

ನಾವು ಲೋಕಾಯುಕ್ತಕ್ಕೆ ಬಲವನ್ನು ತುಂಬಿದ್ದೇವೆ ಯಾರು ಭ್ರಷ್ಟಾಚಾರ ಮಾಡಿದರು ಬಿಡುವುದಿಲ್ಲ ಎಂಬ ಸಂದೇಶವನ್ನು ರವಾನೆ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು .

ದಶಪಥ ಯೋಜನೆ ಕ್ರೆಡಿಟ್ ವಾರ್ ವಿಚಾರವಾಗಿ ಪ್ರತಿಕ್ರಿಸಿದ ಅವರು ಇದರಲ್ಲಿ ಕ್ರೆಡಿಟ್ ವಾರ್ ಪ್ರಶ್ನೆ ಇಲ್ಲ..;! ಇವರ ಕಾಲದಲ್ಲಿ ಆಗಿಲ್ಲ ಅನ್ನೋದು ಸತ್ಯ ಅವರ ರೀತಿ ಹೇಗಿದೆ ಅಂದ್ರೆ ನಾವು ಮಾಡಿರಲಿಲ್ಲ ನಾವು ಮಾಡದಿರುವುದ್ದಕ್ಕೆ ನೀವು ಈಗ ಮಾಡಿದ್ದೀರಿ ಅದಕ್ಕೆ ನಮಗೆ ಕ್ರೆಡಿಟ್ ಸಲ್ಲಬೇಕು ಅಂದ್ರೆ ಒಪ್ಪಲು ಸಾಧ್ಯವೇ.ಅವರು ಮಾಡಿದ್ದರೆ ನಮಗೆ ಮಾಡಲು ಆಗುತ್ತಿರಲಿಲ್ಲವೇ ಎಂದು ಟೀಕಿಸಿದರು.

ನಾವು ಬಿಟ್ಟು ಹೋಗಿದ್ದಕ್ಕೆ ನೀವು ಮಾಡಿದ್ದೀರಿ ಅನ್ನುವ ರೀತಿಯಲ್ಲಿ ಅವರು ಕ್ರೆಡಿಟ್ ತಗೊಳ್ಳುವಂತಹದ್ದು ಕಾಣ್ತಾ ಇದೆ.ನೂರು ಪ್ರತಿಶತ ಭೂಸ್ವಾಧೀನ ಸಹಿತವಾಗಿ ೧೦ ಸಾವಿರ ಕೋಟಿ ನರೇಂದ್ರ ಮೋದಿಯವರ ಕಾಲದಲ್ಲಿ ಬಿಡುಗಡೆಯಾಗಿದೆ. ಅವರು ಯಾವುದು ಹೇಳಿದ್ರು ಸಹಿತ ನಮ್ಮದು ಎಂದು ಹೇಳುವುದು ಸಾಮಾನ್ಯವಾಗಿದೆ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಅವರಿಗೆ ಇತ್ತೀಚಿಗೆ ಒಂದು ಅಭ್ಯಾಸ ಆಗಿಬಿಟ್ಟಿದ್ದು ಯಾರು ಏನು ಮಾಡಿದರು ಅದು ನಂದು ಅಂತ ಹೇಳುವ ಚಾಳಿ ಶುರುವಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಡುತ್ತಿದೆ ಮುಖ್ಯಮಂತ್ರಿ ವಸೂಲಿ ಗೆ ಇಳಿದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಸಿದ ಅವರು ಡಿ.ಕೆ ಶಿವಕುಮಾರ್ ಜೈಲಿಗೆ ಏಕೆ ಹೋಗಿದ್ದರು ಎಂಬುದನ್ನು ಮೊದಲು ಅವರನ್ನು ಕೇಳಲಿ. ಅವರ ಮನೆಯಲ್ಲಿ ಅಪಾರ ಪ್ರಮಾಣದ ಹಣ ಮತ್ತು ಇತರೆ ದಾಖಲೆಗಳು ಲಭ್ಯವಾಯಿತು. ಡಿ.ಕೆ ಶಿವಕುಮಾರ್ ಅವರು ರಾಜಕೀಯಕ್ಕೆ ಬರುವ ಮೊದಲು ಅವರ ಒಟ್ಟು ಆಸ್ತಿ ಎಷ್ಟು , ಇಂದು ಎಷ್ಟಿದೆ ಎಂಬುದನ್ನು ಲೆಕ್ಕ ತೆಗೆಯಲಿ ಎಂದು ಪ್ರಶ್ನಿಸಿದರು.

ಈ ದೇಶದೊಳಗೆ ಭ್ರಷ್ಟಾಚಾರದ ನಿರ್ಮಾಪಕರು ಭ್ರಷ್ಟಾಚಾರದ ಜನಕರು, ಕಾಂಗ್ರೆಸ್ ಪಾರ್ಟಿಯವರು, ಬಿಜೆಪಿ ಅಥವಾ ಇನ್ನಿತರ ಯಾವುದೇ ಪಾರ್ಟಿ ಅಧಿಕಾರದ ಹತ್ತಿರಕ್ಕೆ ಬಂದಿರೋದು ಇತ್ತೀಚೆಗೆ ೭೫ ವರ್ಷಗಳ ಸತತವಾಗಿ ದೇಶವನ್ನು ಜನರನ್ನು ಕತ್ತಲೆಯಲ್ಲಿಟ್ಟು ಭ್ರಷ್ಟಾಚಾರದ ಮೇಲೆ ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ ಪಕ್ಷ ಎಂಬುದನ್ನು ಮರೆಯಬಾರದು.

ಇತ್ತೀಚಿನ ೨೫ ವರ್ಷದಲ್ಲಿ ಭ್ರಷ್ಟಾಚಾರ ಅನ್ನುವ ಶಬ್ದ ಕಡಿಮೆ ಹಾಗಿದೆ.ಹಿಂದೆ ಹಗರಣಗಳು ಶುರು ಮಾಡಿದಂತಹ ಕಾಂಗ್ರೆಸ್ ಪಾರ್ಟಿ ಮತ್ತು ಡಿಕೆ ಶಿವಕುಮಾರ್ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದು ಜರಿದರು.

Gayathri SG

Recent Posts

ಸ್ವಾತಿ ಮಲಿವಾಲ್‌ ಮೇಲೆ ದೂರು ದಾಖಲಿಸಿದ ಆರೋಪಿ ಬಿಭವ್‌

ಆಪ್‌ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣದ ಆರೋಪಿಯಾಗಿರುವ ಬಿಭವ್‌ ಕುಮಾರ್‌ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ…

11 mins ago

ತಾಲೂಕು ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿವ್ಯವಸ್ಥೆ ಪರಿಶೀಲಿಸಿದ ಡಿವೈಎಸ್ಪಿ

ಲೋಕಾಯುಕ್ತದ ಕಲಬುರಗಿ ಡಿವೈಎಸ್ಪಿ ಆಯಂಟನಿ ಜಾನ್ ಹಾಗೂ ಇತರೆ ಅಧಿಕಾರಿಗಳು ಗುರುವಾರ ನಗರದಲ್ಲಿನ ತಾಲ್ಲೂಕು ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ…

26 mins ago

ಪವಿತ್ರಾ ಜಯರಾಂ ಮೃತಪಟ್ಟ ಬೆನ್ನಲ್ಲೇ ನಟ ಚಂದು ಆತ್ಮಹತ್ಯೆ

ಇತ್ತೀಚೆಗಷ್ಟೇ ತ್ರಿನಯನಿ ಧಾರಾವಾಹಿಯ ನಟಿ ಪವಿತ್ರಾ ಜಯರಾಂ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ  ತೆಲುಗು ಧಾರಾವಾಹಿ ನಟ…

38 mins ago

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

9 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

9 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

9 hours ago