Categories: ಹಾಸನ

ಹಾಸನ: ಕುಸ್ತಿಪಟುಗಳ ಹೋರಾಟಕ್ಕೆ ಎಐಡಿಎಸ್ಒ ಬೆಂಬಲ

ಹಾಸನ: ಹಲವು ವಾರಗಳಿಂದ ಹೋರಾಟನಿರತ ಕುಸ್ತಿ ಪಟು ಗಳೊಂದಿಗೆ ವಿದ್ಯಾರ್ಥಿಗಳು ನಾವಿದ್ದೇವೆ’, ’ಲೈಂಗಿಕ ಕಿರುಕುಳ ನೀಡಿದ ಅಪರಾಧಿಗೆ ನಿದರ್ಶನೀಯ ಶಿಕ್ಷೆ ವಿಧಿಸಿರಿ’ ಎಂಬ ಘೋಷಣೆ ಗಳೊಂದಿಗೆ ಎಐಡಿಎಸ್ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹೇಮಾವತಿ ಪ್ರತಿಮೆ ಎದುರು ಇಂದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ವೇಳೆ ಜಿಲ್ಲಾ ಸಹ ಸಂಚಾಲಕಿ ಚೈತ್ರಾ ಮಾತನಾಡಿ “ಹೆಣ್ಣುಮಕ್ಕಳ ಮೇಲಿನ ಲೈಂಗಿಕ ಕಿರುಕುಳ, ಹಿಂಸೆಯಂತಹ ಪ್ರಕರಣ ದೇಶದಾಂದ್ಯಂತ ಎಲ್ಲ ರಂಗಗಳಲ್ಲಿಯೂ ನಡೆಯುತ್ತಿದೆ. ಸಿನೆಮಾ, ಕ್ರೀಡೆ, ಕಚೇರಿಗಳು ಯಾವ ಕ್ಷೇತ್ರವೂ ಹೊರತಾಗಿಲ್ಲ ಏಕೆಂದರೆ, ಹೆಣ್ಣು ಮಕ್ಕಳನ್ನು ಕೇವಲ ಭೋಗದ ವಸ್ತುವಾಗಿ ನೋಡುವ ದೃಷ್ಟಿಕೋನ ಎಲ್ಲೆಡೆ ಇದೆ ಎಂದು ಆರೋಪಿಸಿದರು.

ಇಂತಹ ಬೆಳವಣಿಗೆ ಸಮಾಜ ದ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದೆ. ಈ ಕೆಟ್ಟ ಪ್ರವೃತ್ತಿ, ಮನಸ್ಥಿತಿ ಮೊದಲು ಬದಲಾಗಬೇಕು. ಮಹಿ ಳಾ ಕುಸ್ತಿಪಟುಗಳ ವಿಚಾರದಲ್ಲಿ, ಖುದ್ದು ಕೇಂದ್ರ ಬಿಜೆಪಿ ಸರ್ಕಾರವೇ ತನ್ನ ಪಕ್ಷದ ಸಂಸದ ಹಾಗೂ ಕುಸ್ತಿ ಪೇಡರೇಶನ್ ನ ಮುಖ್ಯಸ್ಥನಾದ ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ನನ್ನು ರಕ್ಷಿಸುತ್ತಿದೆ ಎಂದು ದೂರಿದರು.

ಎಷ್ಟೋ ಪ್ರಕರಣಗಳಲ್ಲಿ ಅಧಿಕಾರ ನಡೆಸುವ ಸರ್ಕಾರಗಳೇ ಆರೋಪಿಗಳನ್ನು ರಕ್ಷಣೆ ಮಾಡು ತ್ತವೆ. ಹೀಗಿರುವಾಗ, ನಮ್ಮ ಹೋ ರಾಟ ಮತ್ತಷ್ಟು ತೀಕ್ಷ್ಣಗೊಳ್ಳಬೇಕು ಮತ್ತು ಪುರುಷರು ಹೆಣ್ಣು ಮಕ್ಕಳ ಜೊತೆಯಾಗಿ ನಿಂತು ಬೇಡಿಕೆಗಳು ಈಡೇರುವವರೆಗೂ ಅವರಿಗೆ ಸಾಥ್ ನೀಡಬೇಕು” ಎಂದು ಹೇಳಿದರು. “ಮಹಿಳಾ ಕುಸ್ತಿ ಪಟುಗಳ ಹೋರಾಟ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ. ವಿದ್ಯಾರ್ಥಿ ಸಮೂಹ ನಿಮ್ಮ ಹೋರಾಟವನ್ನು ಸಂಪೂರ್ಣ ಬೆಂಬಲಿಸುತ್ತೇವೆ. ಆಳುವ ಸರ್ಕಾರಗಳು ಕಿಂಚಿತ್ತೂ ಹೆಣ್ಣುಮಕ್ಕಳ ರಕ್ಷಣೆ, ಭದ್ರತೆ ಕಡೆ ಗಮನ ಹರಿಸದೆ ಇರುವುದು, ಕನಿಷ್ಠ ಪ್ರತಿಕ್ರಿಯೆ ಸಹ ನೀಡದೆ ಇರುವುದು ಅವರ ಧೋರಣೆಯನ್ನು ತೋರಿ ಸುತ್ತದೆ. ಆದರೆ, ದೇಶದ ಹೆಮ್ಮೆ ಯಾಗಿರುವ ಕ್ರೀಡಾ ಪದಕ ವಿಜೇತ ಹೆಣ್ಣು ಮಕ್ಕಳು ಅತ್ಯಂತ ದಾರ್ಷ್ಟ ದಿಂದ ಮುಂದುವರೆಯುತ್ತಿ ದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ನಮ್ಮ ಬೆಂಬಲ ಅತ್ಯಂತ ಅವಶ್ಯಕ ಮತ್ತು ಇದು ನಮ್ಮ ಜವಾಬ್ದಾರಿ ಕೂಡ ಆಗಿದೆ ” ಎಂದು ಕರೆ ನೀಡಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಸುಷ್ಮಾ, ಚಂದ್ರಶೇಖರ್, ಜಯಂತ್, ದರ್ಶ ನ್, ಸೌಮ್ಯಾ , ನಯನ ಇನ್ನಿತರ ಹಲವು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Gayathri SG

Recent Posts

ಚರಂಡಿ ಸ್ವಚ್ಛಗೊಳಿಸುವಂತೆ ಸಾರ್ವಜನಿಕರ ಆಗ್ರಹ

ಪಟ್ಟಣದ ವಿವಿಧ ವಾರ್ಡ್‌ಗಳು ಹಾಗೂ ಪ್ರಮುಖ ವೃತ್ತಗಳಲ್ಲಿನ ಚರಂಡಿಗಳು ಕಟ್ಟಿಕೊಂಡು ದುರ್ನಾತ ಬೀರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಅಧಿಕಾರಿಗಳ…

11 mins ago

ನಿವೃತ್ತಿ ಘೋಷಿಸಿದ ಇಂಗ್ಲೆಂಡ್​ ತಂಡ ವೇಗದ ಬೌಲರ್​ : ಕಾರಣ ಇಲ್ಲಿದೆ

ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು…

22 mins ago

ಹಾಡಹಗಲೇ ಮನೆಗೆ ನುಗ್ಗಿ‌ದ ದುಷ್ಕರ್ಮಿಗಳು : ಜೀಪ್​ಗೆ ಬೆಂಕಿ ಹಚ್ಚಿ ಪರಾರಿ

ಹಾಡಹಗಲೇ ದುಷ್ಕರ್ಮಿಗಳು ಮನೆಗೆ ನುಗ್ಗಿ‌ ಟಿವಿ, ಫ್ರಿಡ್ಜ್ ಹಾಳು ಮಾಡಿರುವ ಘಟನೆ ಪಂಚಾಕ್ಷರಿ ನಗರದಲ್ಲಿ ನಡದಿದೆ.

26 mins ago

ಮ್ಯಾಗಿ ತಿಂದು 10 ವರ್ಷದ ಬಾಲಕ ಸಾವು : 6 ಮಂದಿ ಅಸ್ವಸ್ಥ

ಉತ್ತರ ಪ್ರದೇಶದ ಪಿಲಿಬಿತ್‌ ಜಿಲ್ಲಯಲ್ಲಿ ಒಂದು ದಾರುಣ ಘಟನೆ ನಡೆದಿದ್ದು 10 ವರ್ಷದ ಅಪ್ರಾಪ್ತ ಬಾಲಕ ಅನ್ನದೊಂದಿಗೆ ಮ್ಯಾಗಿ ತಿಂದ…

41 mins ago

ಪಲ್ಟಿಯಾದ ಲಾರಿಯಲ್ಲಿ 7 ಕೋ. ಹಣ ಪತ್ತೆ: ವಶಕ್ಕೆ ಪಡೆದ ಪೊಲೀಸರು

ಪಲ್ಟಿಯಾದ ಲಾರಿಯಲ್ಲಿ ಬರೋಬ್ಬರಿ 7 ಕೋಟಿ ಹಣವನ್ನು ವಶಕ್ಕೆ ಪಡೆದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

56 mins ago

ಪುಸ್ತಕದಲ್ಲಿ ಬೈಬಲ್‌ ಪದ ಬಳಕೆ : ಕರೀನಾ ಕಪೂರ್‌ಗೆ ಕೋರ್ಟ್‌ ನೋಟಿಸ್‌

ಗರ್ಭಧಾರಣೆಗೆ (ಪ್ರಗ್ನೆನ್ಸಿ) ಸಂಬಂಧಿಸಿದಂತೆ ಬರೆದ ಪುಸ್ತಕದ ಶೀರ್ಷಿಕೆಯಲ್ಲಿ ‘ಬೈಬಲ್’ ಪದ ಬಳಕೆ ಮಾಡಿದಕ್ಕಾಗಿ ಮಧ್ಯಪ್ರದೇಶ ಹೈಕೋರ್ಟ್ ಬಾಲಿವುಡ್ ನಟಿ ಕರೀನಾ…

1 hour ago