Categories: ಹಾಸನ

ಹಾಸನ: ಸಿಇಐಆರ್ ಪೋರ್ಟಲ್‌ನಿಂದ 148 ಮೊಬೈಲ್ ಪತ್ತೆ, ವಾರಸುದಾರರಿಗೆ ಹಸ್ತಾಂತರ

ಹಾಸನ: ಸಿಇಐಆರ್ ಪೋರ್ಟಲ್ ಮೂಲಕ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ ಸುಮಾರು 60 ಲಕ್ಷ ಮೌಲ್ಯದ 148 ಮೊಬೈಲ್ ಗಳನ್ನು ವಶಕ್ಕೆ ಪಡೆದು ವಾರಸುದಾರರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.

ನಗರದಲ್ಲಿ ತಮ್ಮ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಪೋರ್ಟಲ್ ಉದ್ಘಾಟ ನೆಯಾದ ದಿನಾಂಕದಿಂದ ಇಲ್ಲಿಯ ವರೆಗೆ ವಿವಿಧ ಠಾಣೆಯಲ್ಲಿ ಸಾರ್ವ ಜನಿಕರಿಂದ 1418 ಮೊಬೈಲ್‌ಗಳ ಕಳ್ಳತನವಾಗಿರುವ ಕುರಿತು ದೂರು ದಾಖಲಾಗಿದೆ.ಇವುಗಳಲ್ಲಿ ಇಲ್ಲಿಯವರೆಗೆ ಒಟ್ಟು ೧೪೮ ಮೊಬೈಲ್ ಗಳನ್ನು ಪತ್ತೆ ಮಾಡಲಾಗಿದೆ ಎಂದು ಹೇಳಿದರು.

ಕಳೆದ ಏಪ್ರಿಲ್ ನಲ್ಲಿ 25 ಮೊಬೈಲ್‌ಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ನೀಡಲಾಗಿದ್ದು ಇದೀಗ ನೂರಕ್ಕೂ ಹೆಚ್ಚು ಮೊಬೈಲ್‌ಗಳನ್ನು ಪೋರ್ಟಲ್ ಸಹಾಯದಿಂದ ವಶಕ್ಕೆ ಪಡೆಯಲಾಗಿದೆ. ಮೊಬೈಲ್‌ಗಳನ್ನು ನೆರೆ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ನೆರೆ ಜಿಲ್ಲೆಗಳಿಂದ ಪತ್ತೆ ಮಾಡಿ ವಶಪಡಿಸಿಕೊಳ್ಳಲಾಗಿದೆ ಎಂದರು. ವಶಪಡಿಸಿಕೊಂಡ ಮೊಬೈಲ್‌ಗಳ ಪೈಕಿ ವಿವೋ ಕಂಪನಿಯ 74, ಸ್ಯಾಮ್ಸಂಗ್ 25 , ರೆಡ್ಮಿ33, ಒನ್ ಪ್ಲಸ್ 11, ಹಾನರ್ ಎರಡು , ನೋಕಿಯಾ 3 ಮೊಬೈಲ್ ಗಳಾಗಿವೆ.

ಪೋರ್ಟಲ್ ಮೂಲಕ ದಾಖಲಾದ ದೂರುಗಾಳ ಪೈಕಿ 123 ಮೊಬೈಲ್ ಗಳ ಮಾಹಿತಿ ಇದ್ದು ಇವುಗಳನ್ನು ಆದಷ್ಟು ಶೀಘ್ರವಾಗಿ ಪತ್ತೆ ಹಚ್ಚುವ ಕಾರ್ಯವನ್ನು ಮಾಡಿದ್ದೇವೆ ಎಂದು ಹೇಳಿದರು.

ಪೋರ್ಟಲ್ ನಲ್ಲಿ ದಾಖ ಲಾದ ಬಹುತೇಕ ಪ್ರಕರಣಗಳು ಕಳವಾಗಿರುವುದು ಹಾಗೂ ಸಾರ್ವ ಜನಿಕರೇ ಕಳೆದುಕೊಂಡಿರುವು ದಾಗಿದೆ ಹೆಚ್ಚಿನ ಪ್ರಮಾಣದಲ್ಲಿ ಅಂದರೆ, ಕಳ್ಳತನ ಮಾಡುವ ಗುಂಪು ( ನೆಟ್ವರ್ಕ್) ಮೂಲಕ ಕಾರ್ಯನಿರ್ವಹಿಸುತ್ತಿದ್ದರೆ ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪತ್ತೆಹಚ್ಚಲಾಗುವುದು ಆದರೆ ಇದುವರೆಗೂ ದಾಖಲಾಗಿರುವ ದೂರುಗಳಲ್ಲಿ ಅಂತಹ ಯಾವುದೇ ಅಂಶಗಳು ಇಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಈ ಪೋರ್ಟಲ್ ಮೂಲಕ ಮೊಬೈಲ್ ಗಳನ್ನು ಪತ್ತೆ ಹಚ್ಚುವ ಕಾರ್ಯ ತ್ವರಿತಗತಿಯಲ್ಲಿ ಆಗುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಎಸ್ಪಿ ಮನವಿ ಮಾಡಿದರು. ನೆರೆ ರಾಜ್ಯದಲ್ಲಿ 20ಕ್ಕೂ ಹೆಚ್ಚು ಮೊಬೈಲ್ ಕಳ್ಳತನ ಪ್ರಕರಣಗಳು ಪತ್ತೆಯಾದಾಗ ನಿರ್ದಿಷ್ಟ ಠಾಣೆ ಯಿಂದ ಸಿಬ್ಬಂದಿಗಳನ್ನು ಕಳುಹಿಸಿ ಪ್ರಕರಣಗಳನ್ನು ಇತ್ಯರ್ಥಪಡಿ ಸಲಾಗುತ್ತಿದೆ ಎಂದು ತಿಳಿಸಿದರು.

ಇತ್ತೀಚಿಗೆ ನಗರದ ಮಸೀ ದಿಯಲ್ಲಿ ಕಂಪ್ಯೂಟರ್ ಹಾಗೂ ಕ್ಯಾಮೆರಾ ಕಳ್ಳತನ ಪ್ರಕರಣ ಸಂಬಂಧ ಅಗತ್ಯ ಕ್ರಮಗಳನ್ನು ಕೈ ಗೊಳ್ಳಲಾಗಿದ್ದು ಆದಷ್ಟು ಶೀಘ್ರ ವಾಗಿ ಪ್ರಕರಣ ಪತ್ತೆಹಚ್ಚಲಾಗು ವುದು ಎಂದು ಹೇಳಿದರು.

ಮೊಬೈಲ್ ಕಳೆದರೆ ಇಷ್ಟು ಮಾಡಿ: ಗೂಗಲ್ ಪ್ಲೇ ಸ್ಟೋರ್ ಮೂಲಕ ಕೆಎಸ್ ಪಿ ಆಪ್ ಡೌನ್ಲೋಡ್ ಮಾಡಿಕೊಂಡು ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿ ದೂರನ್ನು ವರದಿ ಮಾಡಿ ರಶೀದಿ ಪಡೆಯಬೇಕು , ನಿಮ್ಮ ಮೊಬೈಲ್ ಕಳೆದು ಹೋದ ತಕ್ಷಣ ಪ್ರಸ್ತುತ ಕಳೆದು ಹೋದ ಮೊಬೈಲ್ ನಲ್ಲಿದ್ದ ಮೊಬೈಲ್ ನಂಬರ್ ನ ಡುಪ್ಲಿಕೇಟ್ ಸಿಮ್ ನಂಬರನ್ನು ಪಡೆದುಕೊಳ್ಳಬೇಕು ವಾಟ್ಸಪ್ ಮೂಲಕ 8277959500 ನಂಬರ್ಗೆ HI ಎಂದು ಮೆಸೇಜ್ ಕಳಿಸಿದರೆ ಒಂದು ಲಿಂಕ್ ಬರುತ್ತದೆ ನಂತರ ಈ ಲಿಂಕ ಅನ್ನು ತೆರೆದು ಅದರಲ್ಲಿನ ಮಾಹಿತಿಯನ್ನು ಭರ್ತಿ ಮಾಡಿ ಸಬ್ಮಿಟ್ ಮಾಡಬೇಕು ಅಥವಾ ಸಾರ್ವಜನಿಕರು www.ceir.gov.in ಲಿಂಕ್ ನ ಸಹಾಯದಿಂದ ಸಿಇಐಆರ್ ಪೋರ್ಟಲ್ ಅನ್ನು ಓಪನ್ ಮಾಡಿ ಅದರಲ್ಲಿರುವ ಅವಶ್ಯಕ ಮಾಹಿತಿ ಯನ್ನು ಭರ್ತಿ ಮಾಡಿ ದೂರು ದಾಖಲಿಸಬಹುದು ಎಂದರು.

ದೂರು ನೀಡುವ ಸಂದರ್ಭದಲ್ಲಿ ಮೊಬೈಲ್ ನ ಐಎಂಇಐ ನಂಬರ್ ಕಡ್ಡಾಯವಾಗಿದ್ದು ಒಂದು ವರ್ಷದ ಮೊಬೈಲ್ ಕಳವು ಅಥವಾ ಕಳೆದು ಹೋದ ಹಳೆಯ ಮೊಬೈಲ್‌ಗಳ ದೂರು ದಾಖಲಿಸಬ ಹುದಾಗಿದೆ ಎಂದರು.

Ashika S

Recent Posts

ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಛೇದನ ಪಡೆದುಕೊಂಡ ಯಶ್‌ ಹೀರೋಯಿನ್‌!

ಸಿನಿಮಾ ರಂಗದಲ್ಲಿ ಮತ್ತೊಂದು ವಿಚ್ಛೇದನ ಖಚಿತವಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

27 mins ago

ಐದು ಮಂದಿಗೆ ವೆಸ್ಟ್ ನೈಲ್ ಜ್ವರ ಪತ್ತೆ; ಅಲರ್ಟ್ ಆದ ಸರಕಾರ

ವೆಸ್ಟ್ ನೈಲ್ ಫೀವರ್ ನ ಐದು ಪ್ರಕರಣಗಳು ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಇದೀಗ ಆತಂಕಕ್ಕೆ ಕಾರಣವಾಗಿದೆ.

38 mins ago

ಆಂಬುಲೆನ್ಸ್ ನೌಕರರ ಮುಷ್ಕರ ತಾತ್ಕಾಲಿಕ ಮುಂದೂಡಿಕೆ

ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಗೆ ಆಗ್ರಹಿಸಿ 108-ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.

45 mins ago

ಬೆಂಗಳೂರಿನಲ್ಲಿ ರೌಡಿಶೀಟರ್​ ಕಾರ್ತಿಕೇಯನ್ ಬರ್ಬರ ಹತ್ಯೆ

ನಗರದ ಬಾಣಸವಾಡಿ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ರೌಡಿಶೀಟರ್​ ಕಾರ್ತಿಕೇಯನ್(40) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ.

1 hour ago

ಪಕ್ಷದ ಬ್ಯಾಡ್ಜ್ ಧರಿಸಿ ಮತದಾನ; ಖೂಬಾ ವಿರುದ್ಧ ಪ್ರಕರಣ ದಾಖಲು

ಬೀದರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರು ತಮ್ಮ ಅಂಗಿ ಮೇಲೆ ಪಕ್ಷದ ಚಿಹ್ನೆ…

2 hours ago

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

ಬೀದರ್ ಲೋಕಸಭಾ ಕ್ಷೇತ್ರದ ಒಟ್ಟು ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಮೇ 7 ರಂದು ಶಾಂತಿಯುತವಾಗಿ ಮತದಾನ ನಡೆಯಿತು.

2 hours ago