Categories: ಹಾಸನ

ರೈತರನ್ನು ಒಕ್ಕಲೆಬ್ಬಿಸುವ ನಿರ್ಧಾರಗಳನ್ನು ಸರ್ಕಾರಗಳು ಜಾರಿಗೆ ತರಬಾರದು: ಶಾಂತಕುಮಾರ್

ಅರಸೀಕೆರೆ:- ಕೃಷಿ ಕ್ಷೇತ್ರದ ಮೇಲೆ ಸರ್ಕಾರಗಳು ಪದೇ ಪದೇ ದುಷ್ಪರಿಣಾಮ ಬೀರುವ ನಿರ್ಧಾರಗಳನ್ನು ಕೈಗೊಳ್ಳುತ್ತಿವೆ, ರೈತರನ್ನು ಒಕ್ಕಲೆಬ್ಬಿಸುವ ನಿರ್ಧಾರಗಳನ್ನು ಜಾರಿಗೆ ತರುತ್ತೇವೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರೈತರತ್ನ ಕುರುಬೂರು ಶಾಂತಕುಮಾರ್ ಹೇಳಿದರು.

ಕನಕಂಚೇನಹಳ್ಳಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಕನಕಂಚೇನಹಳ್ಳಿ ಪಟೇಲ್ ಪ್ರಸನ್ನ ಕುಮಾರ್ ಆಯೋಜಿಸಿದ್ದ ರೈತ ಜಾಗೃತಿ ಸಭೆಯಲ್ಲಿ ಮಾತನಾಡುತ್ತಾ ರೈತರು ಸಂಘಟಿತರಾಗದಿದ್ದರೆ ಸರ್ಕಾರಗಳು ಕೃಷಿ ಕ್ಷೇತ್ರಕ್ಕೆ ಮರಣ ಶಾಸನ ಬರೆಯುತ್ತಾರೆ, ಹಿಂದಿನ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಜಾರಿಗೆ ತಂದು ಖಾಸಗಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿ ಕೊಟ್ಟಿವೆ. ಇದರಿಂದ ರೈತರಿಗೆ ಯಾವುದೇ ಭದ್ರತೆ ಇಲ್ಲ ರೈತರು ಮೋಸಕ್ಕೆ ಒಳಗಾದರೆ ಕಠಿಣ ಕ್ರಮ ಕೈಗೊಳ್ಳುವ ಯಾವುದೇ ಕಾನೂನು ಇಲ್ಲ, ಈಗ ನಾವು ತಿದ್ದುಪಡಿ ಕಾಯ್ದೆಗಳನ್ನು ರದ್ದು ಮಾಡಲು ಹೋರಾಟ ನಡೆಸಬೇಕಾಗಿದೆ, ಆದ್ದರಿಂದ ರೈತರು ಸಂಘಟಿತರಾಗಿ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯಲು ಮುಂದಾಗ ಬೇಕಿದೆ. ರಾಜ್ಯಾದ್ಯಂತ ರೈತರು ಒಗ್ಗಟ್ಟಿನಿಂದ ಹೋರಾಟ ಮಾಡುವುದರಿಂದ ರೈತ ಶಕ್ತಿ ಹೆಚ್ಚುತ್ತದೆ, ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ನಾವು ಸಮರ ಸಾರಲು ಸಿದ್ಧರಾಗಬೇಕೆಂದು ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ರೈತ ಸಂಘದ ರಾಜ್ಯ ಸಂಚಾಲಕ ಕನಕಂಚೇನಹಳ್ಳಿ ಪಟೇಲ್ ಪ್ರಸನ್ನ ಕುಮಾರ್ ವಹಿಸಿದ್ದರು. ಹಾಸನ, ಚಿತ್ರದುರ್ಗ, ತುಮಕೂರು, ಬೇರೆ ಬೇರೆ ಜಿಲ್ಲೆಯ ಭಾಗದಿಂದ ಬಂದಿದ್ದ ನೂರಾರು ರೈತರು, ರೈತ ಮಹಿಳೆಯರು ಸಭೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಮುಂದಿನ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು. ಸಭೆಯಲ್ಲಿ ರಾಜ್ಯ ರೈತ ಸಂಘದ ಆಯುಬ್ ಪಾಷಾ, ಎಜಾಜ್ ಪಾಷಾ, ಮಹಮ್ಮದ್ ದಸ್ತಗಿರ್, ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ರಮೇಶ್, ತಿಮ್ಮಪ್ಪ ,ಹನುಮಂತ,ಶಾಂತಕುಮಾರ್, ಚಂದ್ರಣ್ಣ, ಮಮತಾ, ಪವಿತ್ರ ,ಮಂಜುಳಾ ಇನ್ನಿತರರು ಇದ್ದರು.

Sneha Gowda

Recent Posts

ಅಸ್ಸಾಂ, ಗೋವಾದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ

ಏತನ್ಮಧ್ಯೆ, ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಹೊಸ ಬೆಲೆಗಳನ್ನು ಬಿಡುಗಡೆ ಮಾಡಿವೆ. ದೇಶದ ಕೆಲವು ರಾಜ್ಯಗಳು ಮತ್ತು…

18 mins ago

ಬಾತ್​ರೂಂನಲ್ಲಿ ಹುಟ್ಟಿದ ನವಜಾತ ಶಿಶು : ತಕ್ಷಣವೆ ಕತ್ತು ಹಿಸುಕಿ ಕೊಂದ ತಾಯಿ

ಕೊಚ್ಚಿಯ ಮಹಿಳೆಯರೊಬ್ಬರು ನವಜಾತ ಶಿಶುವನ್ನು ಕತ್ತು ಹಿಸುಕಿ, ಕೆಳಗೆ ಎಸೆದು ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ಕೊಚ್ಚಿಯ  ಅಪಾರ್ಟ್‌ಮೆಂಟ್‌ನಲ್ಲಿ ಪೋಷಕರೊಂದಿಗೆ…

47 mins ago

ಮುಕ್ಕಾಲು ಕರ್ನಾಟಕಕ್ಕೆ ಸುಡು ಬಿಸಿಲು : ಉಳಿದೆಡೆ ಗುಡುಗು ಸಹಿತ ಮಳೆ

ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗಲಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಪ್ರಮುಖವಾಗಿ ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಂಗಳೂರು…

1 hour ago

ಈ ರಾಶಿಯವರಿಗೆ ಇಂದು ಆಪ್ತರಿಂದ ಆರ್ಥಿಕವಾಗಿ ಸಹಾಯ

ದೈಹಿಕ ಶ್ರಮ ಹೆಚ್ಚಲಿದೆ. ಸಂಶಯಾಸ್ಪದವಾದ ಹಣಕಾಸು ವ್ಯವಹಾರದಲ್ಲಿ ತೊಡಗುವುದು ಬೇಡ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಆಪ್ತರಿಂದ ಸಿಹಿ…

2 hours ago

85 ರೂನಷ್ಟು ಕಡಿಮೆಗೊಂಡ ಚಿನ್ನದ ಬೆಲೆ : ಇಲ್ಲಿದೆ ಇವತ್ತಿನ ದರಪಟ್ಟಿ

ಮೂರ್ನಾಲ್ಕು ವಾರಗಳ ಅದ್ವಿತೀಯ ರೀತಿಯಲ್ಲಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಈ ವಾರ ಶಾಂತಗೊಂಡಿವೆ. ಈ ವಾರ…

2 hours ago

ಇಂದು ವಿಶ್ವ ನಗುವಿನ ದಿನ : ನಾವು ನಗೋಣ, ಇನ್ನೊಬ್ಬರನ್ನು ನಗಿಸೋಣ

ʻನಗುʼ ಇದು ಎಲ್ಲ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳನ್ನು ದೂರವಿರಿಸುವ ಒಂದು ಅಸ್ತ್ರ.ಹೀಗಾಗಿಯೇ ನಗುವಿನ ಪ್ರಾಮುಖ್ಯತೆಯನ್ನು ಸಾರಲು ವಿಶ್ವದಾದ್ಯಂತ ಮೇ…

2 hours ago