Categories: ಹಾಸನ

ಪ್ರತಿಯೊಬ್ಬ ಕಾರ್ಯಕರ್ತನಿಗೂ ಟಿಕೆಟ್ ಕೇಳುವ ಹಕ್ಕಿದೆ: ಸಿ.ಎಂ. ಇಬ್ರಾಹಿಂ

ಬೇಲೂರು: ಹಾಸನ ವಿಧಾನ ಸಭೆ ಕ್ಷೇತ್ರದ ಜೆಡಿಎಸ್ ಟಿಕೇಟ್ ವಿಚಾ ರದಲ್ಲಿ ಕೆಲವರು ಗೊಂದಲ ಉಂಟು ಮಾಡುತ್ತಿದ್ದು ಪ್ರತಿಯೊಬ್ಬ ನಿಷ್ಟಾವಂತ ಕಾರ್ಯಕರ್ತರಿಗೆ ಟಿಕೇಟ್ ಕೆಳುವ ಹಕ್ಕಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತಿಳಿಸಿದರು.

ಚಿಕ್ಕಮಗಳೂರು ಪಂಚರಥ ಯಾತ್ರೆಗೆ ತೆರಳುವ ಸಂದರ್ಭದಲ್ಲಿ ನೆಹರೂ ವೃತ್ತದ ಬಳಿ ಶಾಸಕ ಕೆ ಎಸ್ ಲಿಂಗೇಶ್ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಅವರನ್ನು ಸ್ವಾಗತಿಸಿದರು.

ಇದೇ ವೇಳೆ ಸುದ್ದಿಗಾರರೊಂ ದಿಗೆ ಮಾತನಾಡಿದ ಅವರು ಕೆಲ ವರು ಹಾಸನ ಕ್ಷೇತ್ರದ ಜೆಡಿಎಸ್ ಟಿಕೇಟ್ ಬಗ್ಗೆ ಗೊಂದಲ ಉಂಟು ಮಾಡುತ್ತಿದ್ದಾರೆ. ಟಿಕೇಟ್ ಕೇಳುವ ಹಕ್ಕು ಸ್ವರೂ ಪ್ ಹಾಗೂ ಭವಾನಿರೇವಣ್ಣರವರಿಗೆ ಇದ್ದು ಕೇವಲ ಅವರಿಗೆ ಮಾತ್ರ ವಲ್ಲದೆ ಪ್ರತಿಯೊಬ್ಬ ಜನತಾದಳದ ಕಾರ್ಯ ಕರ್ತರಿಗೆ ಟಿಕೇಟ್ ಕೇಳುವ ಹಕ್ಕಿದೆ. ಯಾರಿಗೆ ಕೊಡಬೇಕೆನ್ನುವುದು ಪಕ್ಷ ತೀರ್ಮಾನ ಮಾಡುತ್ತದೆ. ಅಲ್ಲದೆ ಇತ್ತೀಚಿಗೆ ಬೆಂಗಳೂರಿನ ಜೆಪಿ ಭವನ ದಲ್ಲಿ ಸಭೆ ಕರೆದಿದ್ದರು ಎನ್ನುವುದು ಶುದ್ದ ಸುಳ್ಳು, ಒಬ್ಬ ರಾಜ್ಯಾಧ್ಯಕ್ಷನಾಗಿ ನಾನು ಸಭೆ ಕರೆಯಬೇಕು. ಯಾವ ಸಭೆಯೂ ಇರಲಿಲ್ಲ. ಇದು ಕೆಲವರ ಸೃಷ್ಟಿಯಾಗಿದೆ. ರೇವಣ್ಣ ಹಾಗೂ ಕುಮಾರಸ್ವಾಮಿಯವರ ನಡುವೆ ಭಿನ್ನಾಭಿಪ್ರಾಯ ಇದೆ ಎನ್ನುವುದು ಕೆಲವರ ತಪ್ಪು ಕಲ್ಪನೆ ನಾನು ೫೦ ವರ್ಷದಿಂದ  ನೋಡುತ್ತಿದ್ದೇನೆ. ರೇವಣ್ಣ ಕುಮಾರಸ್ವಾಮಿ ಬಾಲಕೃಷ್ಣ ರಮೇಶ್ ಈ ನಾಲ್ವರು ಸಹೋ ದರರ ನಡುವೆ ಭಿನ್ನಾಭಿಪ್ರಾಯ ಬರುತ್ತದೆ ಅದು ದೇವರೆ ಬಂದು ದೂರ ಮಾಡಬೇಕಷ್ಟೇ ಇದು ತಪ್ಪು ಕಲ್ಪನೆ ಎಂದ ಅವರು ಕಾಂಗ್ರೆಸ್ ಪಕ್ಷದ ಮನೆಗೆ ಬಾಗಿಲೇ ಇಲ್ಲಾ, ನಾವಾದರೂ ಮೊದಲಿಗೆ ೯೩ ಜನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇವೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಕ್ಕೆ ನಿಜವಾಗಿ ಗಂಡಸ್ತನ, ಶಕ್ತಿ ಇದ್ದರೆ ಅವರು ಮೊದಲು ಅಭ್ಯರ್ಥಿಗಳನ್ನು ಘೋಷಣೆ ಮಾಡಲಿ ಅವರ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುವುದನ್ನು ಘೋಷಿಸಲಿ. ನಾವು ರೈತರ ಮಕ್ಕಳು ಅದಕ್ಕಾಗಿ ನಮ್ಮ ಹೆಚ್.ಡಿ. ಕುಮಾರ ಸ್ವಾಮಿ ಮುಂದಿನ ಮುಖ್ಯಮಂತ್ರಿ ಎಂದು ಹೇಳಿದ್ದೇವೆ. ನಾಳೆ ನಡೆಯುವ ಸಭೆಯಲ್ಲಿ ಮುಖ್ಯ ಮಂತ್ರಿ ಯಾರು ಎಂದು ಘೋಷಣೆ ಮಾಡಲಿ.

ಯಾರೋ ಹೆಸರು ಹೇಳಿಕೊಂಡು ಉದೋ ಎನ್ನುವುದಲ್ಲ ಒಬ್ಬರು ಸೋನಿಯಮ್ಮನ ಉದೋ ಎನ್ನುವ ಬದಲು ಕನ್ನಡಮ್ಮನ ಪರವಾಗಿ ಕೈಎತ್ತಿ. ಈ ಬಾರಿ ಪ್ರಾದೇಶಕ ಪಕ್ಷ ಉದ ಯವಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳಿಂದ ರೈತರ ಹಾಗೂ ಜನಸಾಮಾನ್ಯರ ಮೇಲೆ ಮಾಡುತ್ತಿರುವ ದೌರ್ಜನ್ಯ ತೊಳೆಯಲು ಹೆಚ್ ಡಿ ದೇವೇಗೌಡ , ನಿಜಲಿಂಗಪ್ಪ ಹಾಗೂ ವಿರೇಂದ್ರ ಪಾಟೀಲ್ ಕಟ್ಟಿದಂತಹ ಜೆಡಿಎಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಹಿಡಿಯುವುದಕ್ಕೆ ಪ್ರತೀ ತಾಲೂಕಿನಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾ ತ್ರೆಯೇ ಸಾಕ್ಷಿ.ಅತಿ ಶೀಘ್ರದಲ್ಲೇ ಬೇಲೂ ರಿನಲ್ಲಿ ಸಹ ಪಂಚರತ್ನ ರಥಯಾತ್ರೆ ಆಗಮಿಸಲಿದ್ದು ನಮ್ಮ ಶಕ್ತಿ ಏನು ಎಂಬುವುದನ್ನು ಮತ್ತೊಮ್ಮೆ ಪ್ರದರ್ಶನ ಮಾಡುತ್ತೇವೆ.ಶ್ರೀ ಚನ್ನಕೇಶವ ಆರ್ಶಿರ್ವಾದದಿಂದ ಲಿಂಗೇಶ್ ಗೆದ್ದು ಬರುತ್ತಾರೆ ನಾವೇ ಅಧಿಕಾರ ಹಿಡಿಯುವುದು ಶತಸಿದ್ಧ ಎಂದರು.

ಪ್ರಧಾನ ಕಾರ್ಯ ದರ್ಶಿ ಸಿ ಹೆಚ್ ಮಹೇಶ್, ಮುಖಂಡರಾದ ಬಿಡಿ ಚಂದ್ರೇ ಗೌಡ, ಚೇತನ್, ಖಾದರ್, ಸೋಮಯ್ಯ, ದಿಲೀಪ್, ಭಾರತಿ, ಸೌಮ್ಯ ಆನಂದ್, ಕಮಲಾ ಚನ್ನಪ್ಪ, ಸುಭಾನ್, ಜಯರಾಂ, ಸತೀಶ್ ಸೇರಿದಂತೆ ಇತರರು ಹಾಜರಿದ್ದರು.

Sneha Gowda

Recent Posts

ದುಬೈನಲ್ಲಿ ಕನ್ನಡಿಗರ ಸಾಂಸ್ಕೃತಿಕ ಸಂಸ್ಥೆಯಿಂದ ಮೇ 26ರಂದು ʼದುಬೈ ಡ್ಯಾನ್ಸ್ ಕಪ್ -2024ʼ ಆಯೋಜನೆ

1985 ರಲ್ಲಿ ಆರಂಭವಾದ ದುಬೈನ ಮೊಟ್ಟ ಮೊದಲ ಕನ್ನಡಿಗರ ಸಾಂಸ್ಕೃತಿಕ ಸಂಸ್ಥೆ ಎಂದು ಪ್ರಖ್ಯಾತಿ ಪಡೆದಿರುವ ಕರ್ನಾಟಕ ಸಂಘ ದುಬೈ…

5 mins ago

ಪ್ರಿಯತಮನೊಂದಿಗೆ ವಿಪರೀತ ಶೋಕಿ : ಮನೆ ಮಾಲಕಿಯನ್ನೆ ಕೊಂದ ಯುವತಿ ಅರೆಸ್ಟ್‌

ಪ್ರಿಯತಮನೊಂದಿಗೆ ಶೋಕಿಮಾಡಿಕೊಂಡು ಹೆಚ್ಚು ಕೈ ಸಾಲಗಳನ್ನು ಮಾಡಿಕೊಂಡಿದ್ದ ಯುವತಿ ಮನೆ ಮಾಲಕಿಯನ್ನೆ ಕೊಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದಿದ್ದು ಕೆಂಗೇರಿ ಠಾಣೆ…

9 mins ago

ಏಕಾಏಕಿ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಸರ್ವರ್‌ ಡೌನ್‌

ಮೆಟಾದ ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ಗಳಾದ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ವಿಶ್ವಾದ್ಯಂತ ಸಾವಿರಾರು ಬಳಕೆದಾರರಿಗೆ ಏಕಾಏಕಿ ಸ್ಥಗಿತಗೊಂಡಿವೆ ಎಂದು ಸ್ಥಗಿತ…

16 mins ago

ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿ : ಓರ್ವ ಸಾವು, 13 ಮಂದಿ ಗಾಯ

ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಯುನಿವರ್ಸಿಟಿ ಸಮೀಪ ಬೆಳಗ್ಗೆ ಡಿಸೇಲ್‌ ಖಾಲಿಯಾಗಿ ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿ ಹಿಡೆದ ಪರಿಣಾಮ ಓರ್ವ…

37 mins ago

ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಶುಂಠಿ ಕೊಪ್ಪದ ಕೀರ್ತನ ಪಿ. ಎಸ್ ರವರಿಗೆ 593 ಅಂಕ

2023 ಹಾಗೂ 24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಕೊಡಗಿನ ಶುಂಠಿ ಕೊಪ್ಪ ನಿವಾಸಿ…

45 mins ago

ಡೆತ್ ನೋಟ್ ಬರೆದಿಟ್ಟು ಮಹಿಳೆ ನೇಣಿಗೆ ಶರಣು

ಮಾನಸಿಕವಾಗಿ ನೊಂದ ಮಹಿಳೆಯೊರ್ವಳು ಮನೆಯ ಅಡಿಗೆ ಮನೆಯ ಮಾಡಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊರಂಗ್ರಪಾಡಿಯ ಸಾಯಿಬಾಬ…

56 mins ago