Categories: ಹಾಸನ

ಬೇಲೂರು: ಕಾಡಾನೆ ದಾಳಿಗೆ ಬಾಳೆ, ಅಡಿಕೆ ತೋಟ ನಾಶ

ಬೇಲೂರು : ಕಾಡಾನೆ ಹಿಂಡೊಂದು ಗೊನೆಗೆ ಬಂದಿದ್ದ ಬಾಳೆ ಮತ್ತು ಅಡಿಕೆ ತೋಟವನ್ನು ನಾಶ ಮಾಡಿ ಸಾವಿರಾರು ರೂಪಾಯಿ ನಷ್ಟಮಾಡಿರುವ ಘಟನೆ ಸೂರಕೋಡು ಗ್ರಾಮದಲ್ಲಿ ರಾತ್ರಿ ನಡೆದಿದೆ.

ಬೇಲೂರು ತಾಲ್ಲೂಕು ಅರೇಹಳ್ಳಿ ಹೋಬಳಿ ಸೂರಕೋಡು ಗ್ರಾಮದ ಅಣ್ಣಪ್ಪ ಶೆಟ್ಟಿ ಮತ್ತು ಅರುಣ್ ಅವರ ಬಾಳೆ ತೋಟ ಆನೆ ದಾಳಿಗೆ ತುತ್ತಾಗಿದೆ. ಇವರು ನಾಲ್ಕು ಎಕರೆಯಲ್ಲಿ ಬಾಳೆ ಬೆಳೆದಿದ್ದರು. ಕಾಯಿ ಬಲಿತು ಕಟಾವು ಹಂತ ತಲುಪಿತ್ತು. ಆದರೆ ಕಾಡಾನೆ ಹಿಂಡು ತೋಟವನ್ನು ಬಹುತೇಕ ಹಾಳು ಮಾಡಿವೆ. ಗಿಡವನ್ನು ಬುಡಮೇಲು ಮಾಡಿ ತಿರುಳನ್ನು ತಿಂದುಹಾಕಿವೆ. ಮತ್ತಷ್ಟು ಗಿಡಗಳನ್ನು ತುಳಿದು ಹಾಕಿವೆ. ಅರೇಹಳ್ಳಿ ಭಾಗದಿಂದ ಆನೆ ಬಂದಿವೆ ಎಂದು ಊಹಿಸಲಾಗಿದೆ.

ಈ ಸಂದರ್ಭದಲ್ಲಿ ರೈತ ಅಣ್ಣಪ್ಪ ಶೆಟ್ಟಿ ಮಾತನಾಡಿ, ಈ ಭಾಗದಲ್ಲಿ ಪ್ರತಿವರ್ಷ ಆನೆ ದಾಳಿಗೆ ಲಕ್ಷಾಂತರ ಬೆಲೆಯ ಬೆಳೆಗಳು ಹಾಳಾಗುತ್ತಿವೆ. ಆನೆ ದಾಳಿ ತಪ್ಪಿಸಲು ಶಾಶ್ವತ ಪರಿಹಾರ ಕಂಡುಹಿಡಿ ಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ.

ಈ ವಿಚಾರವಾಗಿ ಅಧಿಕಾರಿಗಳಿಗೆ ತಿಳಿಸಲು ನೋಡಿದರೆ ಎಲ್ಲಾ ಅಧಿಕಾರಿಗಳು ಚುನಾವಣೆ ಕೆಲಸದಲ್ಲಿದ್ದೇವೆ ಎಂದು ಹೇಳುತ್ತಾರೆ, ಇನ್ನೂ ಬೇಲೂರು ವಿಧಾನ ಸಭಾ ಅಭ್ಯರ್ಥಿಗಳು ಚುನಾವಣೆಗೆಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ ಆದರೆ ನಮ್ಮಂತ ಬೇಳೆ ನಾಶ ಮಾಡಿಕೊಂಡವರ ಕಷ್ಟ ಆಲಿಸಲು ಯಾರು ಮುಂದಾಗುತ್ತಿಲ್ಲ, ಬಿಕ್ಕೋಡು ಅರೇಹಳ್ಳಿ ಭಾಗಗಳಲ್ಲಿ ಆನೆಗಳ ದಾಳಿ ಇಂದು ನೆನ್ನೆಯದಲ್ಲ ಸುಮಾರು ವರ್ಷಗಳಿಂದ ನಡೆಯುತ್ತಲೆ ಇದೆ, ಅಲ್ಲದೆ ಅನೆಗಳಿಂದ ಕೆಲಸವರು ಪ್ರಾಣ ಕಳೆದು ಕೊಂಡಿದ್ದರು ಕೂಡ ಆನೆಗಳನ್ನು ಸ್ಥಳಾಂತರ ಮಾಡಲು ಮುಂದಾಗದಿರುವ ಇದಕ್ಕೆಲ್ಲ ಕಾರಣವಾಗಿದೆ ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಆನೆ ದಾಳಿ ತಪ್ಪಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಅರೇಹಳ್ಳಿ ಬಿಕ್ಕೋಡು ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Sneha Gowda

Recent Posts

ಕಲಬುರಗಿ ಮಹಾನಗರ ಪಾಲಿಕೆ ಮಾಜಿ ಮೇಯರ್ ವಾಹನದಲ್ಲಿ 2 ಕೋಟಿ ರೂ.ಪತ್ತೆ

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅತ್ಯಂತ ಸನ್ನದ್ಧ ಸ್ಥಿತಿಯಲ್ಲಿರುವ ಇಲ್ಲಿನ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಕಾರೊಂದರಲ್ಲಿ ಸಾಗಾಟ ಮಾಡುತ್ತಿದ್ದ 2…

4 mins ago

ಕುಡಿದ ನಶೆಯಲ್ಲಿ ಸ್ನೇಹಿತನಿಗೆ ಬೆಂಕಿ ಹಚ್ಚಿ ಪರಾರಿ: ಆರೋಪಿಗಳು ಪೊಲೀಸರ ವಶಕ್ಕೆ

ಬಾರ್‌ನಲ್ಲಿ ಕುಡಿಯಲು ಹೋದವರು ಮತ್ತಿನಲ್ಲಿ ಗಲಾಟೆ ಮಾಡಿಕೊಂಡು ನಶೆಯ ಗುಂಗಿನಲ್ಲಿ ಸ್ನೇಹಿತನಿಗೆ ಬೆಂಕಿ ಹಚ್ಚಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

14 mins ago

ಕೇಳಿದಷ್ಟು ಬರ ಪರಿಹಾರ ನೀಡಿಲ್ಲ ಎಂದು ನಾಳೆ ವಿಧಾನಸೌಧದಲ್ಲಿ ಕಾಂಗ್ರೆಸ್‌ ಪ್ರತಿಭಟನೆ

ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ನೀಡಿದೆ. ಕೇಳಿದಷ್ಟು ಬರ ಪರಿಹಾರ ನೀಡಿಲ್ಲ ಎಂದು ನಾಳೆ…

48 mins ago

ಅಂಬುಲೆನ್ಸ್‌ನ ನಿಯಂತ್ರಣ ತಪ್ಪಿ ಸರಣಿ ಅಪಘಾತ: ಚಾಲಕ ಪೊಲೀಸರ ವಶಕ್ಕೆ

ಅಂಬುಲೆನ್ಸ್‌ ಚಾಲಕನಿಗೆ ನಿಯಂತ್ರಣ ಸಿಗದೆ ಮೂರು ಕಾರು ಮತ್ತು ಒಂದು ಬೈಕ್‌ಗೆ ಸರಣಿಯಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ…

1 hour ago

ರೋಬೋ ನಡೆಸಿದ ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿ

ಮೂತ್ರಪಿಂಡ ಬಳಸಿ ವೈಫಲ್ಯದಿಂದ ಬಳಲುತ್ತಿದ್ದ 39 ವರ್ಷದ ರೋಗಿಯೊಬ್ಬರಿಗೆ ದೆಹಲಿಯ ಸಫ್ದಜಂಗ್‌ ಆಸ್ಪತ್ರೆಯಲ್ಲಿ ರೊಬೊ ಬಳಸಿ ಯಶಸ್ವಿಯಾಗಿ ಅಂಗಾಂಗ ಕಸಿ…

1 hour ago

ಮೋದಿ ಮತ್ತೊಮ್ಮೆ ಪ್ರಧಾನಿ ಆದ್ರೆ ಮುಸ್ಲಿಂ ಮೀಸಲಾತಿ ತೆಗೆಯುತ್ತೇವೆ: ಯತ್ನಾಳ್

ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಮುಸ್ಲಿಂ ಮೀಸಲಾತಿ ತೆಗೆಯುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

1 hour ago