News Karnataka Kannada
Wednesday, May 01 2024
ಹಾಸನ

ಎಟಿಆರ್ ಬಿಜೆಪಿ ಸೇರ್ಪಡೆ: ಜೆಡಿಎಸ್‌ನಲ್ಲಿ ನಿಷ್ಟರಿಗೆ ಬೆಲೆ ಇಲ್ಲ ಎಂಬುದಕ್ಕೆ ಇದೇ ಸಾಕ್ಷಿ

ATR joins BJP: This is proof that loyalists in JD(S) have no value
Photo Credit : News Kannada

ಹೊಳೆನರಸೀಪುರ: ಈಗಾಗಲೆ ಶಾಸಕ ಸಜ್ಜನ ರಾಜಕಾರಣಿ ಎ.ಟಿ ರಾಮಸ್ವಾಮಿ,ಪ್ರಧಾನಿ ಮೋದಿ ಆಡಳಿತವನ್ನು ಒಪ್ಪಿ ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷ ಸೇರಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ, ಬಿಜೆಪಿ ಸಂಭಾವ್ಯ ಅಭ್ಯರ್ಥಿ ವಕೀಲ ದೇವರಾಜೇಗೌಡ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವಿಶೇಷವಾಗಿ ರಾಮಸ್ವಾಮಿ ಯಂತಹ ನಿಷ್ಠಾವಂತ ರಾಜಕಾರಣಿಗಳೇ ಜೆಡಿಎಸ್ ಪಕ್ಷವನ್ನು ಬಿಟ್ಟು ಹೊರ ಬರುತ್ತಾರೆ ಎಂದರೆ ಆ ಪಕ್ಷವು ಯಾವ ಸ್ಥಿತಿಯಲ್ಲಿದೆ ಪಕ್ಷದ ಕುಟುಂಬ ರಾಜಕಾರಣ ಯಾವ ಮಟ್ಟದಲ್ಲಿದೆ ಎಂಬುದು ಗೊತ್ತಾಗುತ್ತದೆ. ರೇವಣ್ಣ ರವರ ಕುಟುಂಬದಲ್ಲಿ ಅವರ ಕುಟುಂಬದ ಅಟ್ಟಹಾಸ ಎಷ್ಟು ಮಿತಿಮೀರಿದೆ ಎಂದರೆ ಈಗಾಗಲೇ ಹಾಸನ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಇಡೀ ರಾಜ್ಯ ದೇಶವೆಲ್ಲ ನೋಡುತ್ತಿದೆ ತಮ್ಮ ಕುಟುಂಬದ ಸದಸ್ಯರುಗಳು ಮಾತ್ರ ರಾಜಕೀಯದಲ್ಲಿ ಮುಂದೆ ಬರಬೇಕು ಯಾವ ಕಾರ್ಯಕರ್ತರುಗಳು ಯಾವ ನಾಯಕರು ಅವರಿಗೆ ಬೇಕಿಲ್ಲ ಎಂಬ ಭ್ರಮೆಯಲ್ಲಿ ಅವರು ಓಡಾಡುತ್ತಿದ್ದಾರೆ ಇದಕ್ಕೆ ತಕ್ಕ ಪಾಠವನ್ನು ಜಿಲ್ಲೆಯ ಜನ ಕಲಿಸುತ್ತಾರೆ ಎಂದರು .

ಈ ಚುನಾವಣೆಯಲ್ಲಿ ಹೆಚ್.ಡಿ ರೇವಣ್ಣ ರವರನ್ನು ಜನ ಧಿಕ್ಕರಿಸುತ್ತಾರೆ ಎಂಬ ಆಶಾ ಭಾವನೆ ಇದೆ. ಈ ತಾಲ್ಲೂಕಿನಲ್ಲಿ ಹತ್ತು ಮಂದಿ ಅಧಿಕಾರಿಗಳು ಬೆಳಿಗ್ಗೆಯಾದರೆ ರೇವಣ್ಣರ ಕೆಲಸ ಮಾಡುತ್ತಿದ್ದಾರೆ, ಶಿವಕುಮಾರ್ ಎಂಬ ಡೆಪ್ಯೂಟಿ ತಹಸೀಲ್ದಾರ್, ಸುನಿತ ಎಂಬ ಎಫ್.ಡಿ.ಎ ಎಲೆಕ್ಷನ್ ಬ್ರಾಂಚ್ ಉದಯಕುಮಾರ್ ಆರ್.ಐ, ಸತೀಶ್ ವಿಎ, ಲೋಕೇಶ ವಿ.ಎ ಇವರೆಲ್ಲರೂ ೮-೧೦ ಜನ ಸುಮಾರು ೨೦ ವರ್ಷಗಳಿಂದ ನಿರಂತರವಾಗಿ ಇದ್ದಾರೆ,

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ, ಸ್ಥಳೀಯ ಅಧಿಕಾರಿಗಳಿದ್ದಾರೆ, ಇದೆ ಕ್ಷೇತ್ರದ ಮತದಾರ ರಾಗಿದ್ದಾರೆ, ಆದರೂ ಅವರನ್ನು ವರ್ಗಾವಣೆಗೊಳಿಸುತ್ತಿಲ್ಲ, ಇದೆ ವಿಚಾರಕ್ಕೆ ಸಂಬಂಧಿಸಿದ ೨೧.೩.೨೩ ರಂದು ಚುನಾವಣಾ ಆಯೋಗ ಕ್ಕೆ ಪತ್ರ ಬರೆದಿದ್ದೇನೆ, ಅದಕ್ಕೆ ರಾಜ್ಯ ಚುನಾವಣಾ ಆಯುಕ್ತ ರಿಂದ ಪತ್ರ ಬಂದಿರುತ್ತೆ, ಇವರು ಎಷ್ಟು ವರ್ಷದಿಂದ ಸೇವೆ ಸಲ್ಲಿಸಿದ್ದಾರೆ ಕೊಡಿ ಎಂದು ಕೇಳಿದ್ರೆ ಶಾಸಕ ರೇವಣ್ಣ ಎಮರ್ಜೆನ್ಸಿ ಮೀಟಿಂಗ್ ಕಾಲ್ ಮಾಡಿ ತಹಸೀಲ್ದಾರ್ ಚೇರ್ ನಲ್ಲಿ ಕುಳಿತು ಒಂದು ಹಿಂಬರಹ ಬರೆಸಿ, ಇವರು ಪ್ರಾಮಾಣಿಕ ನೌಕರರು ಇವರ ಮೇಲೆ ಯಾವುದೆ ಯಾವುದೆ ಚುನಾವಣಾ ಆರೋಪಗಳಿಲ್ಲ ನಿಷ್ಪಕ್ಷಪಾತ ಚುನಾವಣೆ ನಡೆಸುತ್ತಾರೆ ಆದ್ದರಿಂದ ಇವರನ್ನು ವರ್ಗಾವಣೆ ಮಾಡಬಾರದು ಇವರನ್ನು ವರ್ಗಾವಣೆ ಮಾಡಿದರೆ ಚುನಾವಣೆ ನಡೆಸಲು ಆಗುವುದಿಲ್ಲ ಎಂದು ಹಿಂಬರಹ ನೀಡಿದ್ದಾರೆ ಎಂದರು.

ಇಲ್ಲಿನ ಆರ್.ಓ ಕೃಪಾಲಿನಿ ಎಂಬ ಹೆಣ್ಣಮಗಳು ಎಷ್ಟು ಅಸಹಾಯಕಳಾಗಿದ್ದಾಳೆ ಎಂದರೆ ವಾಹನದಲ್ಲಿ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಮಾಡಿ ಪ್ರಚಾರ ಕೈಗೊಂಡಿರುತ್ತಾರೆ ಆದರೆ ಆಕೆ ಪ್ರಕರಣ ದಾಖಲಿಸಿಲ್ಲ ಕಾಂಗ್ರೆಸ್ ನವರು ಬಾಡೂಟ ವ್ಯವಸ್ಥೆ ಮಾಡಿಸಿದ್ದರು ಈ ಬಗ್ಗೆ ಫೋಟೋ ಸಮೇತ ವರದಿ ನೀಡಿದ್ರೂ ಈ ಬಗ್ಗೆ ಕ್ರಮ ಜರುಗಿಸಿಲ್ಲ ಇಂತಹ ಅಧಿಕಾರಿ ನಮಗೆ ಬೇಕಾಗಿಲ್ಲ, ಇಂತಹ ಅಧಿಕಾರಿಗಳನ್ನು ಕೂಡಲೆ ತೆರವುಗೊಳಿಸಬೇಕೆಂದು ಮಾಧ್ಯಮದ ಮುಂದೆ ಒತ್ತಾಯಿಸುತ್ತೇನೆ ಎಂದರು.
ಪೊಲೀಸ್ ಇಲಾಖೆ ಬಳಸಿ ಕೊಂಡು ಚುನಾವಣಾ ಪ್ರಚಾರ ಮಾಡಿದ್ದಾರೆ ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರನ್ನು ಸಹ ನೀಡಿದ್ದೇನೆ, ಅವರ ನಾಮಿನೇಷನ್ ಫೈಲನ್ನು ಸ್ವೀಕರಿಸಬಾರದಾಗಿ ಪತ್ರ ಬರೆಸಿದ್ದೇನೆ.

ವಿಶೇಷವಾಗಿ ಈಗಾಗಲೆ ಶಾಸಕ ರೇವಣದಣ ರವರು ಮತಗಟ್ಟೆಯನ್ನು ಸ್ವಾಧೀನಪಡಿಸಿಕೊಂಡು ಕಳ್ಳ ಮತದಾನ ಮಾಡಿಸಿದ್ದಾನೆ, ಕಾನೂನು ಉಲ್ಲಂಘನೆ ಮಾಡಿದ್ದಾನೆಂದು ಈ ಅಕ್ರಮಗಳಿಗಾಗಿ ಮೂರು ಜನ ಅಧಿಕಾರಿಗಳು ಸೇವೆಯಿಂದ ಅಮಾನತ್ತಾಗಿದ್ರು, ಭವಾನಿ ರೇವಣ್ಣ ರವರು ಒಂದು ಚಿಕ್ಕ ಮಗುವನ್ನು ಮತಗಟ್ಟೆಯೊಳಗೆ ಕರೆದುಕೊಂಡು ಬಂದು ಬೆರಳಿಗೆ ಶಾಯಿ ಹಾಕಿಸುವಂತಹ ಕೆಲಸ ಮಾಡಿ ಅಕ್ರಮ ಮಾಡಿದ್ದು ಶಾಯಿ ಹಾಕಿದ ಅಧಿಕಾರಿ ಸೇವೆಯಿಂದ ಎರಡು ವರ್ಷ ಅಮಾನತ್ತಾಗಿದ್ರು, ಈ ಎರಡೂ ಕಾನೂನು ಬಾಹಿರ ಅಕ್ರಮ ಮಾಡಿದವರು ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳೆ ಸಾಮನ್ಯ ವ್ಯಕ್ತಿಗಳಲ್ಲ ಎಂದರು. ಪ್ರಜಾಪ್ರತಿನಿಧಿ ಕಾಯ್ದೆಯಡಿ ಜನರಿಂದ ಆಯ್ಕೆಯಾದ ವ್ಯಕ್ತಿ ತಪ್ಪನ್ನು ಎಸಗುವಂತಿಲ್ಲ, ಇವರು ಸರ್ಕಾರಿ ಸೇವಕರಾಗಿರುತ್ತಾರೆ. ಮತ್ತೆ ರೇವಣ್ಣ ರವರು ಪ್ರಚಾರದ ವೇಳೆ ಪುನರಾವರ್ತಿತ ತಪ್ಪನ್ನು ಎಸಗಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಖಡಕ್ಕಾಗಿ ಎಚ್ಚರಿಸಿದರು.

ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇನೆ ಹೆಚ್.ಡಿ ರೇವಣ್ಣ ರವರ ಪುಡಿ ರೌಡಿಗಳು ದಿನಾ ಒಂದು ಕೆಲಸ ಮಾಡುತ್ತಿದ್ದಾರೆ, ಬಾಗೂರು ಮಂಜೇಗೌಡ್ರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಂದರ್ಭದಲ್ಲಿ ಹಳೆಕೋಟೆ ಹೋಬಳಿ ಬಸವನಾಯಕನಹಳ್ಳಿ ಗ್ರಾಮದ ಬಳಿ ಗ್ರಾಮದೊಳಗೆ ಪ್ರವೇಶಿಸದಂತೆ ಮಧು ಎಂಬ ವ್ಯಕ್ತಿ ರಸ್ತೆಗೆ ಮಣ್ಣು ಸುರಿದು ಅವರ ಕಾರನ್ನು ಜಖಂಗೊಳಿಸಿದ್ದರು, ಅದೆ ವ್ಯಕ್ತಿ ವಾಟ್ಸಾಪ್ ಗ್ರೂಪ್ನಲ್ಲಿ ಒಂದು ಸಂದೇಶವನ್ನು ಕಳುಹಿಸುತ್ತಾನೆ ಬಸವನಾಯಕನಹಳ್ಳಿ ಗ್ರಾಮವು ಎಚ್ ಡಿ ರೇವಣ್ಣ ರವರ ಗ್ರಾಮ ಈ ಗ್ರಾಮಕ್ಕೆ ಅನ್ಯ ಪಕ್ಷದವರು ಯಾರು ಸಹ ಪ್ರವೇಶಿಸಬಾರದು ಒಂದು ವೇಳೆ ಪ್ರವೇಶಿಸಿದರೆ ಮುಂದೆ ಆಗುವ ಅನಾಹುತಗಳಿಗೆ ಅವರೇ ಜವಾಬ್ದಾರರು ಎಂಬುದಾಗಿ ಸಂದೇಶವನ್ನು ಕಳಿಸುತ್ತಾನೆ ಗ್ರಾಮಕ್ಕೆ ಮಾಡಿರುವ ಕೆಲಸವನ್ನು ನೋಡಿ ಅವರನ್ನು ಬೆಂಬಲಿಸೋಣ ಎಂದು ಈ ಒಂದು ಮನಸ್ಥಿತಿ ಈ ಕ್ಷೇತ್ರದಲ್ಲಿ ಯಾವ ಮಟ್ಟಕ್ಕೆ ಹೋಗುತ್ತಿದೆ ಇದಕ್ಕೆ ಕಡಿವಾಣ ಹಾಕೋರು ಯಾರೂ ಇಲ್ವ ಎಂದು ಪ್ರಶ್ನಿಸಿದರು.

ಹೊಳೆನರಸೀಪುರ ನಗರ ಹಾಗೂ ಗ್ರಾಮಾಂತರ ಠಾಣೆಯ ಅಧಿಕಾರಿಗಳು ರೇವಣ್ಣನ ಮನೆಯ ಜೀತದಾಳುಗಳಿಗಿಂತ ಕಡೆಯಾಗಿದ್ದಾರೆ, ನಾನು ಹಲವಾರು ಬಾರಿ ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿ ನಗರ ಠಾಣೆ ಪಿಎಸ್‌ಐ ಅರುಣ್ ಹಾಗೂ ಗ್ರಾಮಾಂತರ ಠಾಣೆ ಪಿಎಸ್‌ಐ ರವರನ್ನು ಕರ್ತವ್ಯದಿಂದ ಅಮಾನತು ಪಡಿಸಬೇಕು ಎಂದು ಕೋರಿದ್ದೇನೆ.

ಈ ಮಾಧ್ಯಮದ ಮುಂದೆ ನಾನು ಹೇಳುತ್ತಿದ್ದೇನೆ ನಾನು ಕೂಡ ನಿಮ್ಮ ವಿರುದ್ಧ ಪ್ರಬಲ ಅಭ್ಯರ್ಥಿ ಇನ್ನೇನು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ನನ್ನ ಹೆಸರನ್ನು ಘೋಷಣೆ ಮಾಡಲಾಗುತ್ತದೆ ಪಕ್ಷದ ಮೇಲೆ ನಂಬಿಕೆಯಿಂದ ನಾನು ಈ ಮಾತನ್ನು ಹೇಳುತ್ತಿದ್ದೇನೆ
ಶಾಸಕ ರೇವಣ್ಣ ರವರಿಗೆ ಸುಮಾರು ಐದು ವರ್ಷಗಳ ಹಿಂದೆ ನಾನು ಚುನಾವಣಾ ತಕರಾರು ಕೇಸನ್ನು ದಾಖಲಿಸುವಾಗ ಇದೇ ಮಾಧ್ಯಮದವರು ಹಾಸನದಲ್ಲಿ ನನ್ನನ್ನು ಕೇಳಿದ್ದರು ನೀವು ಇಷ್ಟೆಲ್ಲಾ ಹೋರಾಟ ಮಾಡುತ್ತಿದ್ದೀರಲ್ಲ ರೇವಣ್ಣ ರವರ ವಿರುದ್ಧ ನಿಲ್ಲಲು ನಿಮಗೆ ತಾಕತ್ತು ಇದೆಯಾ ಎಂದು ಕೇಳಿದರು ನಾನು ಭ್ರಷ್ಟಾಚಾರ ಮಾಡಿ ದುಡ್ಡನ್ನು ಮಾಡಲು ಇಲ್ಲಿ ಬಂದಿಲ್ಲ ತಾಲಿಬಾನ್ ಸಂಸ್ಕೃತಿಯನ್ನು ಹೊಳೆ ನರಸಿಪುರದಿಂದ ಹೊರಗೆ ತೆಗೆಯಬೇಕೆಂದು ನಾನು ಬಂದಿದ್ದೇನೆ ಎಂದು ರೇವಣ್ಣ ರವರಿಗೆ ಮಾತನಾಡಿದೆ ಎಂದು ಹೇಳಿದರು.

ಮಾಧ್ಯಮ ಮೂಲಕ ಚುನಾವಣಾ ಆಯೋಗಕ್ಕೆ ಹೇಳಲು ಬಯಸುತ್ತೇನೆ, ಯಾವ ಬೂತ್ ಗಳಲ್ಲಿ ಯಾವ ಪಕ್ಷಗಳಿಗೆ ಎಷ್ಟು ಮತಗಳು ಬಂದಿವೆ ಎಂಬುದನ್ನು ನೀಡಿದಾಗ ಗೆದ್ದ ವ್ಯಕ್ತಿಗಳು ಅಂತಹ ಗ್ರಾಮಗಳ ಮೇಲೆ ಕಣ್ಣನ್ನು ಇಡುತ್ತಾರೆ ಉತ್ತಮವಾದ ವೋಟು ಬಂದಿಲ್ಲದ ಗ್ರಾಮಗಳ ಅಭಿವೃದ್ಧಿಯನ್ನು ಮಾಡಬಾರದು ಎಂದು ತೀರ್ಮಾನಿಸುತ್ತಾರೆ ಇಂತಹ ಒಂದು ಕಾರ್ಯ ವಿಶೇಷವಾಗಿ ಹೊಳೆ ನರಸೀಪುರ ಕ್ಷೇತ್ರದಲ್ಲಿ ನಡೆಯುತ್ತಿದೆ ಆದರಿಂದ ಚುನಾವಣಾ ಆಯೋಗಕ್ಕೆ ಹೇಳಲು ಬಯಸುತ್ತೇನೆ ಯಾವುದೇ ಮತಗಟ್ಟೆಯ ಒಟ್ಟು ಮತದಾನದ ಅಂಕಿ ಅಂಶ ನೀಡಬೇಕೆ ಹೊರತು ಪಕ್ಷವಾರು ಅಂಕಿ ಅಂಶ ನೀಡಬಾರದು ಎಂದು ನಾನು ಈ ಸಂದರ್ಭದಲ್ಲಿ ಒತ್ತಾಯಿಸುತ್ತೇನೆ ಎಂದು , ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಕೆಬಿ ಪ್ರಸನ್ನ, ನಾಗರಾಜ್ ಪಟೇಲ್. ಬಿಜೆಪಿ ಮುಖಂಡ ದೇವಾನಂದ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು