News Karnataka Kannada
Tuesday, April 16 2024
Cricket
ಹಾಸನ

ಹಾಸನ: ಕೆರೆಯಲ್ಲಿ ನೀರು ಕುಡಿಯಲು ಬಂದ ವೇಳೆ ನಿತ್ರಾಣಗೊಂಡು ಕಾಡಾನೆ ಸಾವು

A wild elephant died after he fainted while trying to drink water in a lake in Hassan.
Photo Credit : News Kannada

ಹಾಸನ: ಕಾಫಿ ತೋಟದಲ್ಲಿ ನೀರು ಕುಡಿಯಲು ಬಂದಿದ್ದ ವೇಳೆ ಕುಸಿದು ಬಿದ್ದ ಹೆಣ್ಣಾನೇ ನಿತ್ರಾಣಗೊಂಡು ಸಾವಿಗೀಡಾಗಿರುವ ಘಟನೆ ಮಠಸಾಗರ ಗ್ರಾಮದಲ್ಲಿ ನಡೆದಿದೆ.

ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮದ ಎಬಿಸಿ ಕಾಫಿ ತೋಟದ ಕೆರೆಯಲ್ಲಿ ೨೫ ವರ್ಷ ಪ್ರಾಯದ ಕಾಂತಿ ಎಂಬ ಹೆಸರಿನ ಹೆಣ್ಣಾನೇ ಕಳೆದ ರಾತ್ರಿ ನೀರು ಕುಡಿಯಲು ಬಂದಿದೆ. ಈ ವೇಳೆ ಕುಸಿದು ಬಿದ್ದಿದ್ದು ಮೇಲೆಳಲು ಸಾಧ್ಯವಾಗದೆ ಕೆಸರಿನಲ್ಲಿ ಸಿಲುಕಿಕೊಂಡಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಇಂದು ಬೆಳಗ್ಗೆ ಕಾಡಾನೆಗೆ ಚಿಕಿತ್ಸೆ ನೀಡಿದ್ದರು ಫಲಕಾರಿಯಾ ಗದೆ ಕಾಡಾನೆ ಮೃತಪಟ್ಟಿದೆ.

ಇತ್ತೀಚೆಗಷ್ಟೇ ಮರಿ ಆನೆಗೆ ಜನ್ಮ ನೀಡಿದ್ದ ಕಾಂತಿ ೨೧ ಕಾಡೆನೆಗಳ ಗುಂಪಿನ ಲೀಡರ್ ಆಗಿ ಸಕಲೇಶಪುರ ಆಲೂರು ಭಾಗದಲ್ಲಿ ಸಂಚಾರ ನಡೆಸುತ್ತಿತ್ತು. ಕಾಡಾನೆಗಳ ಗುಂಪಿನ ಚಲನವಲನವನ್ನು ಗಮನಿಸಲು ಅರಣ್ಯ ಇಲಾಖೆಯಿಂದ ಕಾಡಾನೆ ಕಾಂತಿಗೆ ರೇಡಿಯೋ ಕಾಲರನ್ನು ಇತ್ತೀಚಿಗೆ ಅಳವಡಿಸಲಾಗಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು