Categories: ಹಾಸನ

ಸಚಿವ ಸಂಪುಟ ವಿಸ್ತರಣೆಯಲ್ಲಿ ಅಸಮಾಧಾನವಾದರೆ ಮುಖ್ಯಮಂತ್ರಿಗಳು ಮತ್ತು ರಾಜ್ಯಾಧ್ಯಕ್ಷರು ನಿಭಾಯಿಸುತ್ತಾರೆ

ಹಾಸನ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಸಂದರ್ಭ ಪಕ್ಷದಲ್ಲಿ ಯಾವುದೇ ರೀತಿಯ ಅಸಮಾಧಾನಗಳು ಉದ್ಭವವಾದರೂ ಅದನ್ನು ಮುಖ್ಯಮಂತ್ರಿಗಳು ಮತ್ತು ರಾಜ್ಯಾಧ್ಯಕ್ಷರು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ಸಚಿವ ಕೋಟಾ ಶ್ರೀನಿವಾಸಪೂಜಾರಿ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ವೇಳೆ ಕೆಲ ಅಸಮಾಧಾನಗಳು ಪಕ್ಷದಲ್ಲಿ ಉಂಟಾಗಬಹುದು ಸಹಜ ಆದರೆ ಅದನ್ನು ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶವಾಗದಂತೆ ನಿಭಾಯಿಸುವ ಕೆಲಸವನ್ನು ಹಿರಿಯನಾಯಕರು ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ರಾಜಕಾರಣವೇ ಬೇರೆ, ವೈಯಕ್ತಿಕ ಸಂಬಂಧಗಳೇ ಬೇರೆ, ಆನಂದ್ ಸಿಂಗ್, ಡಿಕೆಶಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಕೆಲವೊಂದು ಸಂದರ್ಭಗಳಲ್ಲಿ ಅನಿವಾರ್ಯ ಭೇಟಿಗಳನ್ನು ಮಾಡುತ್ತಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ.

ಪರಿಶಿಷ್ಟ ಜಾತಿ ಮತ್ತು ಪಂಗಡದಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದ್ದು, ನಾಲ್ಕೈದು ವರ್ಷಗಳು ಕಳೆದರೂ ಇದುವರೆಗೂ ಮೋಟರ್ ಅಳವಡಿಸಿರುವುದಿಲ್ಲ. ಇನ್ನೆಷ್ಟು ವರ್ಷ ಬೇಕಾಗುತ್ತದೆ ಎಂಬಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ವಿಧಾನಸಭೆಯಲ್ಲೂ ಕೂಡ ಪ್ರಸ್ತಾಪವಾಗಿದೆ. ಗಂಗಾ ಕಲ್ಯಾಣ ಯೋಜನೆಗೆ ಟೆಂಡರ್ ಕರೆದಾಗ ಯಾರಿಗೆ ಟೆಂಡರ್ ಆಗಿದೆ, ಉಳಿದವರು ನ್ಯಾಯಾಲಯದ ಮೊರೆ ಹೋಗಿದ್ದು, ಮೇಲ್ಮನವಿ ಹೋಗಿ ತಡವಾಗಿದೆ. ಈಗ ಗಂಗಾ ಕಲ್ಯಾಣ ಯೋಜನೆಯಲ್ಲಿ ಅನುಮತಿ ಕೊಟ್ಟು ನಿರ್ದೇಶನ ನೀಡಿದ್ದಾರೆ. ಕೊಳವೆ ಬಾಯಿ ವಿಚಾರದಲ್ಲಿ ಅಕ್ರಮವಾಗಿದೆ ಎಂದು ಎರಡು ಸದನದಲ್ಲೂ ಚರ್ಚೆಯಾಗಿದ್ದು, ಸದನದ ಸಮಿತಿಯನ್ನು ಮಾಡಲಾಗಿದ್ದು, ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ಏನೆನು ಲೋಪ ಆಗಿದೆ ಬಗ್ಗೆ ತನಿಖೆ ಮಾಡಲಾಗುತ್ತಿದೆ. ತನಿಖಾ ವರದಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು. ಕೊಳವೆ ಬಾವಿಗೆ ಯಾರಾರು ಅರ್ಜಿ ಹಾಕಿದ್ದಾರೆ ಅವರ ಖಾತೆಗೆ ನೇರ ಹಣ ಹಾಕುವ ಬಗ್ಗೆ ತೀರ್ಮಾನ ಮಾಡಲಾಗುತ್ತಿದೆ ಎಂದರು. ಇನ್ನು ಮುಂದೆ ಫಲಾನುಭವಿಗಳ ಖಾತೆಗೆ ಹಣ ಬಿಡುಗಡೆ ಮಾಡುವ ಕೆಲಸ ಮಾಡುವುದಾಗಿಯೂ ಅವರು ಭರವಸೆ ನೀಡಿದ್ದಾರೆ.

Swathi MG

Recent Posts

ಗುಜರಾತ್ ವಿರುದ್ಧ ಆರ್‌ಸಿಬಿಗೆ 4 ವಿಕೆಟ್‌ಗಳ ಭರ್ಜರಿ ಜಯ

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ಮಧ್ಯೆ ನಡೆದ ರೋಚಕ ಪಂದ್ಯದಲ್ಲಿ 152 ರನ್ ಗಳಿಸುವ ಮೂಲಕ ಆರ್‌ಸಿಬಿ…

5 hours ago

147 ರನ್​​ಗೆ ಆಲೌಟ್ ಆದ ಗುಜರಾತ್​ ಟೈಟನ್ಸ್​ : ಆರ್​ಸಿಬಿ ವೇಗಿಗಳ ದಾಖಲೆ ಪ್ರದರ್ಶನ

ಚಿನ್ನಸ್ವಾಮಿ​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ರೋಚಕ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​ ತಂಡವನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು 19.3 ಓವರ್​ಗಳಲ್ಲಿ 147…

5 hours ago

ರಾಜೀನಾಮೆ ನೀಡಿದ ಪೇಟಿಎಂ ಸಿಒಒ ಭವೇಶ್ ಗುಪ್ತಾ

ಪೇಟಿಎಂನ ಮಾತೃ ಸಂಸ್ಥೆಯಾಗಿರುವ ಒನ್ 97 ಕಮ್ಯುನಿಕೇಷನ್ಸ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವೇಶ್ ಗುಪ್ತಾ ಅವರು ತಮ್ಮ ಹುದ್ದೆಗೆ…

6 hours ago

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸತ್ತೇಗಾಲ ವಿವಿಧಡೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ…

6 hours ago

ಬೆಂಗಾವಲು ಪಡೆಯ ವಾಹನದ ಮೇಲೆ ಭಯೋತ್ಪಾದಕರ ದಾಳಿ: ಐವರು ಅಧಿಕಾರಿಗಳಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಇಂದು (ಶನಿವಾರ) ಭಾರತೀಯ ವಾಯುಪಡೆ ಬೆಂಗಾವಲು ಪಡೆ ವಾಹನದ ಮೇಲೆ ಭಯೋತ್ಪಾದಕರು ದಾಳಿ…

7 hours ago

ಬಿ.ವೈ ರಾಘವೇಂದ್ರ ಪರ ಮತಯಾಚನೆ ನಡೆಸಿದ ವೇದವ್ಯಾಸ್ ಕಾಮತ್

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರದಲ್ಲಿ ನಡೆದ ಬಿಜೆಪಿಯ ಬೃಹತ್ ರೋಡ್ ಶೋ ನಲ್ಲಿ ಮಂಗಳೂರು ನಗರ ದಕ್ಷಿಣದ ಶಾಸಕರಾದ ವೇದವ್ಯಾಸ್…

7 hours ago