ಮಾಜಿ ಸಚಿವ ಏ ಮಂಜು ಕಾಂಗ್ರೆಸ್‌ ಸೇರ್ಪಡೆಗೆ ಸಿದ್ದರಾಮಯ್ಯ ವಿರೋಧ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಶೀತಲ ಸಮರ ಮುಂದುವರೆದಿದೆ. ಅದು ಅರಕಲಗೂಡು ಮಾಜಿ ಶಾಸಕ ಎ ಮಂಜು ವಿಚಾರವಾಗಿ ಮತ್ತೊಮ್ಮೆ ಭುಗಿಲೇಳುವ ಸಂಭವವಿದೆ. ಈ ಹಿಂದೆ ಕಾಂಗ್ರೆಸ್​ನಲ್ಲಿದ್ದು, ಬಳಿಕ ಬಿಜೆಪಿ ಸೇರಿದ್ದ ಎ ಮಂಜು ಇದೀಗ ಬಿಜೆಪಿಗೆ ಗುಡ್ ಬೈ ಹೇಳಿ ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ.
ಹೀಗೆ ಅವರು ಮತ್ತೆ ಕಾಂಗ್ರೆಸ್​ಗೆ ಸೇರ್ಪಡೆಯಾಗಲು ಮನಸು ಮಾಡಲು ಹಲವು ಕಾರಣಗಳು ಇವೆ. ಪ್ರಸ್ತುತ ಹಾಸನ ಜಿಲ್ಲಾ ಬಿಜೆಪಿಯಲ್ಲಿ ಎ ಮಂಜು ಲಿಸ್ಟ್ ಗೆ ಇಲ್ಲ ಎನ್ನುವಂತಾಗಿದೆ. ಇದಕ್ಕೆ ಕಾರಣ ಶಾಸಕ ಪ್ರೀತಂಗೌಡ. ಹಾಸನ ಜಿಲ್ಲಾ ಬಿಜೆಪಿಯಲ್ಲಿ ಹಿಡಿತ ಸಾಧಿಸಿರುವ ಶಾಸಕ ಪ್ರೀತಂಗೌಡ ರಾಜಕೀಯ ಹೊಡೆತಕ್ಕೆ ಎ ಮಂಜು ತತ್ತರಿಸಿದ್ದಾರೆ. ಇತ್ತ ರಾಜ್ಯ ಬಿಜೆಪಿ ನಾಯಕರು ಎ ಮಂಜುಗೆ ಕ್ಯಾರೇ ಎನ್ನುತ್ತಿಲ್ಲ. ಪ್ರಜ್ವಲ್ ರೇವಣ್ಣ ಎದುರು ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತ ಮೇಲೆ ಮಂಜು ರಾಜಕೀಯವಾಗಿ ಕಳೆದು ಹೋಗುತ್ತಿದ್ದಾರೆ. ಹೀಗಾಗಿ 2023ರ ವಿಧಾನಸಭೆ ಚುನಾವಣೆಯದ್ದೆ ಎ ಮಂಜುಗೆ ಚಿಂತೆಯಾಗಿದೆ.
ಅರಕಲಗೂಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ನಿಂತರೆ ಎ ಮಂಜುಗೆ ಸೋಲು ಖಚಿತ. ಇದೇ ಕಾರಣಕ್ಕೆ ಅವರು ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ. ಎ ಮಂಜು ಘರ್ ವಾಪಸಿಗೆ ಡಿಕೆಶಿ ಯೆಸ್ ಅಂದಿದ್ದಾರೆ. ಮಂಜುಗೆ ಟಕೆಟ್ ಕೊಟ್ಟು ಗೆಲ್ಲಿಸಿಕೊಂಡರೆ ಡಿಕೆಶಿ ಬೆನ್ನಿಗೆ ನಿಲ್ಲಬಹುದೆಂಬ ಲೆಕ್ಕಚಾರ ಸಹ ಇದೆ. ಇದೇ ಕಾರಣಕ್ಕೆ ಎ ಮಂಜು ಮತ್ತೆ ಕೈ ಹಿಡಿಯಲು ಡಿಕೆ ಶಿವಕುಮಾರ್ ಸಹಾಯ ಮಾಡಲು ಮುಂದಾಗಿದ್ದಾರೆ. ಆದರೆ ಘರ್ ವಾಪಸಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಎ ಮಂಜು ಬೇಡವೇ ಬೇಡ ಎಂದು ಹಠ ಹಿಡಿದಿದ್ದಾರೆ. ಸಾಲದ್ದಕ್ಕೆ ಅರಕಲಗೂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ಕೂಡ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಎ ಮಂಜುಗೆ ಘರ್ ವಾಪಸಿಗೆ ಭಾರೀ ಹಿನ್ನಡೆ ಆಗಿದೆ.
ಸಿದ್ದರಾಮಯ್ಯ ಅವರು ಎ ಮಂಜು ಪಕ್ಷ ಸೇರ್ಪಡೆ ವಿರೋಧಿಸಲು ಮೂರು ಕಾರಣಗಳಿವೆ. ಹಾಲಿ ಜೆಡಿಎಸ್ ಅರಕಲಗೂಡು ಶಾಸಕ ಎ ಟಿ ರಾಮಸ್ವಾಮಿ ಮೇಲೆ ಸಿದ್ದರಾಮಯ್ಯಗೆ ಒಲವು ಇರುವುದು. ಎಟಿಆರ್ ಬಗ್ಗೆ ಸಾರ್ವಜನಿಕ ಅಭಿಪ್ರಾಯವೂ ಚೆನ್ನಾಗಿದೆ. ಜೊತೆಗೆ ರಾಜಕೀಯವಾಗಿಯೂ ಕ್ಲೀನ್ ಇಮೇಜ್ ಇದೆ. ಇವರನ್ನು ಕಾಂಗ್ರೆಸ್ ಗೆ ಕರೆ ತಂದು ಟಿಕೆಟ್ ಕೊಟ್ರೆ ಗೆಲುವು ಗ್ಯಾರಂಟಿ. ಆ ಬಳಿಕ ತಮ್ಮ ಜೊತೆಗೆ ನಿಲ್ಲುತ್ತಾರೆ ಎಂಬುದು ಸಿದ್ದರಾಮಯ್ಯ ಲೆಕ್ಕಚಾರ. ಒಂದು ವೇಳೆ ಎಟಿಆರ್ ಕೈ ಹಿಡಿಯದಿದ್ದರೆ ಅವರ ಆಪ್ತ ಶಿಷ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡು ಬರುವ ಉದ್ದೇಶ ಅವರಿಗೆ ಇದೆ. ಇದೇ ಕಾರಣಕ್ಕೆ ಎ ಮಂಜು ಘರ್ ವಾಪಸಿಗೆ ಸಿದ್ದರಾಮಯ್ಯ ಅವರು ವಿರೋಧ ತೋರುತ್ತಿದ್ದಾರೆ. ಸಿದ್ದರಾಮಯ್ಯ ವಿರೋಧದಿಂದ ಎ ಮಂಜು ಕಂಗಾಲಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಸಿದ್ದರಾಮಯ್ಯ ಅವರ ನಿವಾಸಕ್ಕೆ ಎ ಮಂಜು ಆಪ್ತರನ್ನು ಕಳಿಸಿಕೊಟ್ಟಿದ್ದರು. ಮತ್ತೆ ಮಂಜುರನ್ನು ಪಾರ್ಟಿಗೆ ತೆಗೆದುಕೊಳ್ಳಿ ಎಂದು ಮನವಿ ಮಾಡಿಸಿದ್ದರು. ಆದರೆ, ಎ ಮಂಜು ಘರ್ ವಾಪಸಿಗೆ ಸದ್ಯಕ್ಕೆ ಸಿದ್ದರಾಮಯ್ಯ ಅವರು ರೆಡ್ ಸಿಗ್ನಲ್ ಕೊಟ್ಟಿದ್ದಾರೆ. ಎ ಮಂಜು ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಡಿಕೆಶಿ ಶತಪ್ರಯತ್ನ ಮಾಡುತ್ತಿದ್ದರು ಸಿದ್ದರಾಮಯ್ಯ ವಿರೋಧದಿಂದಾಗಿ ಅದು ಜಟಿಲವಾಗುತ್ತಿದೆ.

Indresh KC

Recent Posts

ಬಿಸಿಲಿನ ಶಾಖಕ್ಕೆ ರಾಯಚೂರಿನಲ್ಲಿ ಐವರು ಬಲಿ : ಹೊತ್ತಿ ಉರಿದ ಕಾರು

ಜಿಲ್ಲೆಯಲ್ಲಿ ಬಿಸಿಲು ಆವರಿಸಿಕೊಂಡಿದ್ದು, ಬಿಸಿಲಿನ ಸಾಖಕ್ಕೆ ಕಳೆದ 24 ಗಂಟೆಗಳ ಅವಧಿಯಲ್ಲಿ ಐವರು ಮೃತಪಟ್ಟಿದ್ದಾರೆ. ಹಾಗೂ ಶಕ್ತಿನಗರದಲ್ಲಿ ಕಾರಿಗೆ ಬೆಂಕಿ…

4 mins ago

ಇಂದು (ಮೇ 04) ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನ

ಜನ ಸಮುದಾಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಡುವ ಅಗ್ನಿ ಶಾಮಕದಳದ ವೀರರನ್ನು ಗೌರವಿಸಲು ಇಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನವನ್ನು…

5 mins ago

ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ಬೀದಿ‌ ಕಾಳಗ : ವಿಡಿಯೋ ವೈರಲ್

ಮಂಗಳೂರಿನ ಹೊರ ವಲಯ ವಳಚ್ಚಿಲ್‌ನ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳು ಜಗಳವಾಡಿಕೊಂಡಿರುವ ಘಟನೆ ನಡೆದಿದೆ. ಕಾಲೇಜ್ ಫೆಸ್ಟ್…

24 mins ago

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ : ಅಮಿತ್‌ ಶಾ ವಿರುದ್ಧ ಕೇಸ್‌ ದಾಖಲು

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ತೆಲಂಗಾಣದಲ್ಲಿ ಕೇಸ್‌ ದಾಖಲಾಗಿದೆ. ಮುಖ್ಯ ಚುನಾವಣಾಧಿಕಾರಿ…

26 mins ago

ಕೇಂದ್ರ ಸಚಿವ ಭಗವಂತ ಖೂಖಾ ಒಬ್ಬ ಸುಳ್ಳಿನ ಸರ್ದಾರ : ಖಂಡ್ರೆ ಆರೋಪ

ನಗರದಲ್ಲಿ ಸಚಿವ ಈಶ್ವರ ಖಂಡ್ರೆ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಖಾ ವಿರುದ್ದ ಬ್ಯಾಟಿಂಗ್ ಮಾಡಿದ್ದಾರೆ.

47 mins ago

ನಾಟಕ ಪ್ರದರ್ಶನದ ವೇಳೆಯೇ ಕುಸಿದು ಬಿದ್ದು ನಟ ಮೃತ್ಯು

ನಟನೊಬ್ಬ ನಟಿಸುತ್ತಾ ವೇದಿಕೆಯ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಯಲಹಂಕದ ಸಾತನೂರು ಗ್ರಾಮದಲ್ಲಿ ನಡೆದಿದೆ.

48 mins ago