Categories: ಹಾಸನ

ಫೇಸ್‌ಬುಕ್‌ ಮೂಲಕ ಪರಿಚಯವಾದ ವ್ಯಕ್ತಿಯಿಂದ14 ಲಕ್ಷ ರೂ ಕಳೆದುಕೊಂಡ ಮಹಿಳೆ

ಹಾಸನ: ಫೇಸ್‌ಬುಕ್‌ ಮೂಲಕ ಪರಿಚಯವಾದ ವ್ಯಕ್ತಿಯಿಂದ ಸರ್ಕಾರಿ ನೌಕರಿಯಲ್ಲಿದ್ದ ಮಹಿಳೆಯೋರ್ವರು 14 ಲಕ್ಷ ರೂ. ಕಳೆದುಕೊಂಡ ಘಟನೆ ಹಾಸನದಲ್ಲಿ ನಡೆದಿದೆ.

ಫೇಸ್‌ಬುಕ್‌‌‌ ಮೂಲಕ ಪರಿಚಯವಾದ ವ್ಯಕ್ತಿಯೋರ್ವ ನಿಮಗೆ ಲಕ್ಕಿ ಡಿಪ್‌‌ ಬಂದಿದೆ ಎಂದು ಸ್ನೇಹ ಬೆಳೆಸಿದ್ದಾನೆ. ಅಲ್ಲದೇ ನಿಮಗೆ ದೊಡ್ಡ ಮೊತ್ತದ ಲೋನ್‌‌ ಕೊಡಿಸುತ್ತೇನೆ ಎಂದು ಹೇಳಿ ಮಹಿಳೆಯನ್ನು ನಂಬಿಸಿದ್ದಾನೆ. ಆದರೆ, ಸಾಲ ನೀಡಬೇಕಾದರೆ ನೀವು ಬೇರೆ ಖಾತೆಗಳನ್ನು ತೆರೆದು ಆ ಖಾತೆಯ ಎಟಿಎಂ, ಪಾಸ್‌ ಬುಕ್‌ ಹಾಗೂ ಹೊಸ ಸಿಮ್‌ ಖರೀದಿಸಿ ಅವುಗಳನ್ನು ನನಗೆ ಕಳುಹಿಸಿ ಎಂದು ನಾಮ ಹಾಕಿದ್ದಾನೆ.

ವ್ಯಕ್ತಿ ಹೇಳಿದ ಮಾತನ್ನು ಮಹಿಳೆ ಚಾಚೂ ತಪ್ಪದೇ ಪಾಲಿಸಿದ್ದು, ಮಹಿಳೆ ತನ್ನ ಸಂಬಂಧಿಗಳಿಂದ ಬೇರೆ ಬ್ಯಾಂಕ್‌ ಖಾತೆ ಓಪನ್‌ ಮಾಡಿಸಿ, ಎಲ್ಲಾ ದಾಖಲೆಗಳನ್ನು ವಂಚಕನಿಗೆ ಕಳುಹಿಸಿದ್ದಾಳೆ. ಅಲ್ಲದೇ, ವಂಚಕ ಹಣ ಕೇಳಿದಾಗಲೆಲ್ಲಾ ಖಾತೆಗೆ ಹಣ ಹಾಕಿದ್ದು, ಮಹಿಳೆ ಬರೋಬ್ಬರಿ 14 ಲಕ್ಷ ರೂ. ಕಳೆದುಕೊಂಡಿದ್ದಾಳೆ.

ಈ ಬಗ್ಗೆ ಹಾಸನ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಪೊಲೀಸರಿಗೆ ಆರೋಪಿಯ ಸುಳಿವು ಪತ್ತೆ ಹಚ್ಚುವುದೇ ಸವಾಲಾಗಿದೆ.

“ಈ ರೀತಿಯಾದ ಘಟನೆ ನಡೆದ 24 ಗಂಟೆಗಳ ಒಳಗೆ ಪೊಲೀಸರಿಗೆ ತಿಳಿಸಿದ್ದಲ್ಲಿ ಮಾತ್ರವೇ ಹಣ ಆರೋಪಿಗಳ ಕೈಸೇರುವುದನ್ನು ತಪ್ಪಿಸಬಹುದು” ಎಂದು ಹಾಸನ ಎಸ್‌‌‌ಪಿ ಎಚ್ಚರಿಸಿದ್ದಾರೆ.

Swathi MG

Recent Posts

ಮತ್ತೊಂದು ಲವ್ ಜಿಹಾದ್ ಪ್ರಕರಣ: ಬಾಲಕಿಯನ್ನು ಪುಸಲಾಯಿಸಿ ಕರೆತಂದ ಯುವಕ

ಹುಬ್ಬಳ್ಳಿಯಲ್ಲಿ  ಅನ್ಯಕೋಮಿನ ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಫುಸಲಾಯಿಸಿ ಬಾಗಲಕೋಟೆ ಜಿಲ್ಲೆಯಿಂದ ಹುಬ್ಬಳ್ಳಿಗೆ ಕರೆದುಕೊಂಡ ಬಂದಿದ್ದಾನೆ.

31 seconds ago

ವಕೀಲರ ಸಂಘದ ಅಧ್ಯಕ್ಷರಾಗಿ ಶಿವಶರಣಪ್ಪ ಪಾಟೀಲ ಆಯ್ಕೆ

2024-25ನೇ ಸಾಲಿಗೆ ನಡೆದ ಜಿಲ್ಲಾ ವಕೀಲರ ಸಂಘದ ಚುನಾವಣೆಯಲ್ಲಿ ಶಿವಶರಣಪ್ಪ ಪಾಟೀಲ ಗೆದ್ದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

21 mins ago

ಈ ವಾರವೂ ಅನಿಶ್ಚಿತ ಸ್ಥಿತಿಯಲ್ಲಿ ಚಿನ್ನದ ಬೆಲೆ: ಇವತ್ತಿನ ದರ ಪಟ್ಟಿ ಹೀಗಿದೆ

ಸತತವಾಗಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು  ಕಳೆದ ವಾರ ಮಿಶ್ರ ಅನುಭವ ನೀಡಿವೆ. ಒಂದು ವಾರದಲ್ಲಿ ಚಿನ್ನದ…

39 mins ago

ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಹೃದಯಾಘಾತದಿಂದ ನಿಧನ

ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ (76) ಅವರು ನಿನ್ನೆ  ರಾತ್ರಿ 1.20ಕ್ಕೆ ನಿಧನರಾಗಿದ್ದಾರೆ.

56 mins ago

ನಾಳೆ ಪ್ರಚಾರ ನಿಮಿತ್ಯ ಕಲಬುರಗಿಯ ಸೇಡಂ ತಾಲೂಕಿಗೆ ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನಾಳೆ ಸೇಡಂಗೆ ಆಗಮಿಸಲಿದ್ದು, ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಪ್ರಚಾರ…

8 hours ago

ಅಧಿಕಾರಕ್ಕಾಗಿ ಮಾನವಿಯತೆ ಮರೆತಿದ್ದಾರೆ ಖಂಡ್ರೆ : ಭಗವಂತ ಖೂಬಾ

ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವ ಈಶ್ವರ ಖಂಡ್ರೆ, ಈ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಲೆಬೆಕೆನ್ನುವ ಉದ್ದೇಶದಿಂದ, ಮನುಷ್ಯತ್ವ, ಮಾನವಿಯತೆ ಮರೆತು ಬಿಟ್ಟಿದ್ದಾರೆ,…

9 hours ago