ಹಾಸನ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನದ ವೇಳೆ ಹಾಕಲಾಗಿದ್ದ ಕೇಸರಿ ಧ್ವಜಾಲಂಕಾರಗಳನ್ನು ಕಿಡಿಗೇಡಿಗಳು ಕಿತ್ತು ಹಾಕಿರುವ ಘಟನೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ.
ಗಣವೇಷಧಾರಿಗಳ ಸ್ವಾಗತಕ್ಕೆ ಹಾಕಲಾಗಿದ್ದ ಕೇಸರಿ ಧ್ವಜಗಳನ್ನು ಕಿತ್ತು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಎಡಬಿಡದೆ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಹೊಳೆನರಸೀಪುರವನ್ನು ಮತ್ತೊಮ್ಮೆ ಕೇಸರಿಮಯ ಮಾಡುವಲ್ಲಿ ಆರ್ ಎಸ್ ಎಸ್ ಕಾಯ೯ಕತ೯ರು ಶ್ರಮಿಸಿದ್ದಾರೆ.
ಭಾನುವಾರ ಮಧ್ಯಾಹ್ನ 3ಗಂಟೆಗೆ ಪಟ್ಪಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಯಲಿದ್ದು, ಧ್ವಜಾಲಂಕಾರ ನಾಶಗೊಳಿಸಿರುವವರ ವಿರುದ್ಧ ಸ್ವಯಂ ಸೇವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.