Categories: ಹಾಸನ

ನದಿಯಲ್ಲಿ ಕೊಚ್ಚಿಹೋಗುತ್ತಿದ್ದ ವೃದ್ಧ, ಯುವಕನನ್ನು ರಕ್ಷಿಸಿದ ಮೈಸೂರಿನ ಯುವಕ

ಹಾಸನ: ಕೊಣನೂರಿನ ಕಾವೇರಿ ನದಿಯಲ್ಲಿ ನೀರು ಪಾಲಾಗುತ್ತಿದ್ದ ವೃದ್ಧ ಮತ್ತು ಯುವಕನನ್ನು ಗಿರಿಮಂಜು ಎಂಬವರು ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ.
ಭಾನುವಾರ ಸಂಜೆ 6 ಗಂಟೆಯಲ್ಲಿ ಚಿಕ್ಕ ಅರಕಲಗೂಡಿನ ದಾಸೇಗೌಡರು (94) ಕೊಣನೂರಿನ ಕಾವೇರಿ ನದಿಗೆ ಬಿದ್ದು ಜಲಸಮಾಧಿಯಾಗುತ್ತಿದ್ದರು. ಇದನ್ನು ನೋಡಿದ ಹಾಸನದ ನವೀನ್ (23) ಎಂಬ ಯುವಕ ವೃದ್ಧನನ್ನು ರಕ್ಷಿಸಲು ಹೊಳೆಗೆ ಹಾರಿದರು. ಆದರೆ ಅವರು ಸಹ ನೀರಿನ ರಭಸದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದರು. ಇದನ್ನು ಕಂಡು ನದಿ ಬಳಿ ಇದ್ದ ಜನರು ಜೋರಾಗಿ ಕೂಗಲು ಆರಂಭಿಸಿದರು.
ಇದೇ ವೇಳೆ ಮೈಸೂರಿನ ಗಿರಿಮಂಜು ಎಂಬುದು ತೂಗುಸೇತುವೆ ವೀಕ್ಷಿಸುತ್ತಾ ಛಾಯಾಗ್ರಹಣ ಮಾಡುತ್ತಿದ್ದರು. ದಾಸೇಗೌಡರು ಮತ್ತು ನವೀನ್ ನೀರುಪಾಲಾಗುತ್ತಿದ್ದ ಸಂಗತಿ ತಿಳಿದು ಪ್ರಾಣದ ಹಂಗು ತೊರೆದು ರಭಸವಾಗಿ ಹರಿಯುತ್ತಿದ್ದ ನೀರಿಗೆ ಧುಮುಕಿ ಇವರಿಬ್ಬರನ್ನು ರಕ್ಷಿಸಿದರು. ಕೊಣನೂರು ಠಾಣೆ ಪೊಲೀಸರು ಈ ಘಟನೆ ಬಗ್ಗೆ ವಿಚಾರಣೆ ನಡೆಸಿದರು.ಜೀವದ ಹಂಗು ತೊರೆದು ಸಮಯ ಪ್ರಜ್ಞೆಯಿಂದ ಇಬ್ಬರ ಪ್ರಾಣ ರಕ್ಷಿಸಿದ ಗಿರಿಮಂಜು ಅವರ ಸಾಹಸಕ್ಕೆ ಪ್ರಶಂಸೆಗಳು ವ್ಯಕ್ತವಾಗಿವೆ.

Indresh KC

Recent Posts

ಮೈಸೂರಿನ ಸ್ಪಂದನ ಸೇವಾ ಸಂಸ್ಥೆಯಿಂದ ʼಅಕ್ಷಯ ಅನ್ನʼ ಕಾರ್ಯಕ್ರಮ

ಅಕ್ಷಯ ತೃತೀಯ ಅಂದ್ರೆ ಜನರು ಒಡವೆ ವಸ್ತ್ರ ತಗೋಬೇಕು. ಇದರಿಂದ ನಮ್ಮ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ ಇದೆ. ಈ‌…

7 mins ago

ಮರುಬಿಡುಗಡೆಗೆ ತಯಾರಾಗಿದೆ ಉಪೇಂದ್ರ ಅಭಿನಯಿಸಿ, ನಿರ್ದೇಶಿಸಿದ ‘ಎ’ ಸಿನೆಮಾ

ಚುನಾವಣೆ ಹಾಗೂ ಐಪಿಎಲ್ ಕಾರಣದಿಂದ ಹೊಸ ಸಿನಿಮಾಗಳ ಬಿಡುಗಡೆ ಇಲ್ಲವಾದ ಕಾರಣ ಮತ್ತೆ ಹಳೆ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರುಗಳು…

12 mins ago

ಬಸವೇಶ್ವರ ಉದ್ಯಾನವನಕ್ಕೆ ‘ಸಾಂಸ್ಕೃತಿಕ ನಾಯಕ’ ಮರು ನಾಮಕರಣ

ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಬಸವೇಶ್ವರ ಉದ್ಯಾನವನಕ್ಕೆ 'ಸಾಂಸ್ಕೃತಿಕ ನಾಯಕ', ಮರು ನಾಮಕರಣದ ಉದ್ಘಾಟನೆಯನ್ನು ಕರ್ನಾಟಕ ಕಾಲೇಜಿನ ಪೌರ ಕಾರ್ಮಿಕ ಮಹಿಳೆ…

18 mins ago

ಟೂರಿಸ್ಟ್ ಕಾರಿನಲ್ಲಿ ಮೃತದೇಹ ಸಾಗಾಟ: ಚಾಲಕನಿಗೆ ತರಾಟೆ

ಟೂರಿಸ್ಟ್ ಕಾರಿನಲ್ಲಿ ಮೃತದೇಹ ಕೊಂಡೊಯ್ದ ಘಟನೆಯೊಂದು ಉಡುಪಿ ಜಿಲ್ಲೆಯ ಗಡಿಭಾಗ ಶಿರೂರು ಟೋಲ್ ಗೇಟ್ ಬಳಿ ನಡೆದಿದೆ.

28 mins ago

ಕರ್ನಾಟಕದ ಎಲ್ಲಾ ಭಾಷೆಗಳಲ್ಲಿಯೇ ವೈಶಿಷ್ಟ್ಯ ಪಡೆದ ಲಂಬಾಣಿ ಭಾಷೆ

ರಾಜ್ಯದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಏಳು ಭಾಷೆಗಳ ಪೈಕಿ ಲಂಬಾಣಿ ಭಾಷೆಯೂ ಒಂದಾಗಿದ್ದು, ಕಲ್ಯಾಣ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಈ…

39 mins ago

ಜಿಲ್ಲಾಧಿಕಾರಿಗಳಿಂದ ವಿಶ್ವಗುರು ಬಸವಣ್ಣನಿಗೆ ಪುಷ್ಪ ನಮನ

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 891 ಜಯಂತ್ಯೋತ್ಸವ ಅಂಗವಾಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ…

56 mins ago