Categories: ಹಾಸನ

ಕೊರೊನಾ ಆತಂಕದಲ್ಲಿ ಡೆಂಗೆ ಚಿಕನ್ ಗುನ್ಯಾದ ಅಂತಹ ಸಾಂಕ್ರಾಮಿಕ ರೋಗ ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ

ಹಾಸನ: ಕೊರೊನಾ ಒಂದು ಮತ್ತು ಎರಡನೇ ಅಲೆಯಲ್ಲಿ 1.10 ಲಕ್ಷ ಜನ ಸೋಂಕಿಗೆ ಒಳಗಾಗಿ 1.08 ಲಕ್ಷ ಜನ ಚೇತರಿಸಿಕೊಂಡಿದ್ದಾರೆ. ಬರೋಬ್ಬರಿ 1346 ಜನ ಜೀವತೆತ್ತಿದ್ದಾರೆ. ಇನ್ನೂ ಕೂಡ ಮೂರನೇ ಹಾಗೂ ನಾಲ್ಕನೇ ಅಲೆಯ ಭಯ ಕಾಡುತ್ತಲೇ ಇದ್ದು, ಜಿಲ್ಲಾಡಳಿತ ಪದೇಪದೆ ಸಭೆ ನಡೆಸಿ ಒಂದಿಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ. ಕೊರೊನಾದಿಂದ ಪಾರಾದರೆ ಸಾಕು ಎನ್ನುವ ಹಂತದಲ್ಲಿ ಡೆಂಗೆ, ಚಿಕೂನ್‌ಗುನ್ಯಾದಂತಹ ಸಾಂಕ್ರಾಮಿಕ ರೋಗ ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ.ಕೊರೊನಾ ಸೋಂಕಿನಿಂದ ತತ್ತರಿಸಿ ಇದೀಗ ಚೇತರಿಸಿಕೊಳ್ಳುವ ಹಂತದಲ್ಲಿ ಡೆಂಗೆ, ಚಿಕೂನ್‌ಗುನ್ಯಾ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿರುವುದು ಜನತೆಯಲ್ಲಿ ಆತಂಕ ಸೃಷ್ಟಿಸಿದೆ.

21 ಡೆಂಗೆ ಪ್ರಕರಣ, ಏಳು ಚಿಕೂನ್‌ಗುನ್ಯಾ, 8 ಮಲೇರಿಯಾ ಪ್ರಕರಣ ವರದಿಯಾಗಿದೆ. ಇನ್ನೊಂದಿಷ್ಟು ಜನ ಜ್ವರ, ಕೆಮ್ಮು, ಮೈಕೈನೋವು ಎಂದು ಔಷಧ ಅಂಗಡಿಗೆ ಹೋಗಿ ಮಾತ್ರೆ ಪಡೆದುಕೊಂಡು ಕಾಯಿಲೆ ಶಮನಗೊಳಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಕೊರೊನಾ ಟೆಸ್ಟ್‌ಗೆ ಮುಂದಾಗುತ್ತಿದ್ದಾರೆ, ಮತ್ತೊಂದಿಷ್ಟು ಜನ ವೈದ್ಯಕೀಯ ಸಲಹೆ ಪಡೆದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜ್ವರ, ಕೆಮ್ಮು ಇತ್ಯಾದಿ ಕಾರಣಗಳನ್ನು ನೀಡುತ್ತಾ, ಮಕ್ಕಳು, ಮನೆ ಮಂದಿ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ.

Swathi MG

Recent Posts

ಭೂದೇವಿ ಸಮೇತ ಶ್ರೀಲಕ್ಷ್ಮಿವರಾಹಸ್ವಾಮಿಗೆ ಅಭಿಷೇಕ

ವರಹಾ ಜಯಂತಿಯ ಅಂಗವಾಗಿ ಕೃ?ರಾಜಪೇಟೆ ತಾಲ್ಲೂಕಿನ ಕಲ್ಲಹಳ್ಳಿಯ ಭೂದೇವಿ ಸಮೇತ ಶ್ರೀಲಕ್ಷ್ಮಿ ಭೂವರಾಹಸ್ವಾಮಿಯ ಶಿಲಾಮೂರ್ತಿಗೆ ವಿಶೇ? ಅಭಿ?ಕ ನಡೆಯಿತಲ್ಲದೆ, ಸ್ವಾಮಿಯ…

4 hours ago

ನನ್ನ ವಿರುದ್ಧ ದೇವರಾಜೇಗೌಡ ಮಾಡಿರುವ ಆಪಾದನೆಗಳು ಆಧಾರ ರಹಿತ: ಡಿಕೆ ಶಿವಕುಮಾರ್

ಹಾಸನ ವಿಡಿಯೋ ಪೆನ್​ಡ್ರೈವ್​ ಸೂತ್ರಧಾರಿ ಡಿಕೆ ಶಿವಕುಮಾರ್ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿ ಆಡಿಯೋವೊಂದನ್ನು…

5 hours ago

ರಾಜ್ಯದ ಹಲವೆಡೆ ಮುಂದಿನ 5 ದಿನಗಳ ಕಾಲ‌ ಗುಡುಗು ಸಹಿತ ಮಳೆ ಸಾಧ್ಯತೆ

ರಾಜ್ಯದ ಹಲವೆಡೆ ಇಂದಿನಿಂದ ಮೇ 11ರವರೆಗೆ ವರುಣ ಆಗಮನ ಆಗುವ ಮುನ್ಸೂಚನೆ. ಹಾಗೂ ಮುಂದಿನ 5 ದಿನಗಳ ಕಾಲ‌ ಗುಡುಗು…

5 hours ago

ಬೀದರ್ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರು ಮಾವಿನ ಹಣ್ಣಿನ ದರ್ಬಾರ್‌

ಯುಗಾದಿ ಮುಗಿಯುತ್ತಿದ್ದಂತೆ ಎಲ್ಲೆಡೆ ಮಾವಿನ ಹಣ್ಣುಗಳ ದರ್ಬಾರ ಕಂಡುಬರುತ್ತಿದೆದೆ. ಮಾರುಕಟ್ಟೆಗೆ ಮಾವಿನಕಾಯಿ ಹೆಚ್ಚಾಗಿ ಬರುತ್ತಿದೆ. ಸಾಲಾಗಿ ಜೋಡಿಸಿಟ್ಟ ಮಾವಿನ ಹಣ್ಣು…

5 hours ago

ಬಾಲಕಿ ಮೇಲೆ 2 ರಾಟ್‌ವೀಲರ್ ನಾಯಿಗಳಿಂದ ದಾಳಿ: ಮಾಲೀಕ ಅರೆಸ್ಟ್

ಎರಡು ರಾಟ್‌ವೀಲರ್ ನಾಯಿಗಳು ಐದು ವರ್ಷದ ಬಾಲಕಿ ಮೇಲೆ ದಾಳಿ ಮಾಡಿದ ಘಟನೆ ಚೆನ್ನೈನ ಥೌಸಂಡ್ ಲೈಟ್ಸ್ ಪ್ರದೇಶದ ಸಾರ್ವಜನಿಕ…

6 hours ago

ಬೀದರ್: ಬಿಸಿಲಿನ ಝಳಕ್ಕೆ ಚುನಾವಣೆ ಸಿಬ್ಬಂದಿ ತತ್ತರ

ಮಂಗಳವಾರ ನಡೆಯಲಿರುವ ಲೋಕಸಭೆ ಚುನಾವಣೆಗೆ ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸೋಮವಾರ ಮಧ್ಯಾಹ್ನದಿಂದಲೇ ಕರ್ತವ್ಯ ನಿರತ ಸಿಬ್ಬಂದಿ ಮತಗಟ್ಟೆಗೆ…

6 hours ago