Categories: ಹಾಸನ

ಅರಕಲಗೂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಣ

ಹಾಸನ : ಅರಕಲಗೂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಗಂಡು ಶಿಶುವನ್ನ ದುಷ್ಕರ್ಮಿಗಳು ಭಾನುವಾರ ರಾತ್ರಿ ಅಪಹರಣ ಮಾಡಿದ್ದಾರೆ.

ಅಸ್ಸಾಂ ಮೂಲದ ಕೂಲಿ ಕಾರ್ಮಿಕ ಮಹಿಳೆ ಮಗು ಕಳೆದುಕೊಂಡವರು. ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಭಾನುವಾರ ಸಂಜೆ 7 ಗಂಟೆಗೆ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು.

ಕೆಲ ಸಮಯದ ಬಳಿಕೆ ಹೆರಿಗೆ ಆಗಿತ್ತು. ಆ ವೇಳೆ ಮಗು ಅಪಹರಿಸಲು ಹೊಂಚು ಹಾಕಿದ್ದ ನಾಲ್ವರು ಕಿಡಿಗೇಡಿಗಳು ತಡರಾತ್ರಿ 12 ಗಂಟೆ ವೇಳೆಗೆ ಹೆರಿಗೆ ವಾರ್ಡ್​ಗೆ ತೆರಳಿ ಹಸುಗೂಸನ್ನು ಹೊತ್ತೊಯ್ದಿದ್ದಾರೆ. ಮಗು ಅಪಹರಿಸಲು ಬಂದ ನಾಲ್ವರು ಕಳ್ಳರಲ್ಲಿ ಒಬ್ಬರು ನರ್ಸ್ ವೇಶಧಾರಿಯಾಗಿದ್ದ ಬಂದಿದ್ದರು.

ಆಸ್ಪತ್ರೆ ಹಿಂಭಾಗದ ಬಾಗಿಲಿನಿಂದ ಮಗು ಅಪಹರಿಸಿ ಪರಾರಿಯಾಗಿದ್ದಾರೆ. ಆಸ್ಪತ್ರೆ ಸಿಸಿ ಟಿವಿ ಕ್ಯಾಮರಾದಲ್ಲಿ ಕಳ್ಳರ ಮುಖಚಹರೆ ಸೆರೆಯಾಗಿದೆ. ಅರಕಲಗೂಡು ನಗರ ಪೊಲೀಸ್ ಠಾಣೆಗೆ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ದೀಪಕ್ ದೂರು ನೀಡಿದ್ದು, ಕಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Gayathri SG

Recent Posts

ನನಗೆ ಡ್ರಗ್ಸ್​ ನೀಡಿ ಲೈಂಗಿಕ ದೌರ್ಜ್ಯನ್ಯವೆಸಗಿದ್ದಾರೆಂದು ಆರೋಪಿಸಿದ ಸಂಸದೆ

ಮಹಿಳಾ ಸಂಸದೆಯೊಬ್ಬರು ನನಗೆ ರಾತ್ರಿ ವೇಳೆ ಡ್ರಗ್ಸ್​ ನೀಡಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿದ ಘಟನೆ ಆಸ್ಟ್ರೇಲಿಯಾದಲ್ಲಿ ಬೆಳಕಿಗೆ ಬಂದಿದೆ.…

32 seconds ago

ಪ್ರಜ್ವಲ್ ರೇವಣ್ಣ ನನ್ನ ರೇಪ್‌ ಮಾಡಿದ್ದಾರೆ : ಸಂತ್ರಸ್ತೆ ಸ್ಫೋಟಕ ಹೇಳಿಕೆ

ಹಾಸನದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ದೂರು ಕೊಟ್ಟ ಮಹಿಳೆ ಕಿಡ್ನಾಪ್ ಆಗಿದ್ದು,…

12 mins ago

ಮೂರನೇ ಬಾರಿಗೆ ಬಾಹ್ಯಾಕಾಶಕ್ಕೆ ಹಾರಲು ಸಜ್ಜಾದ ಭಾರತ ಸಂಜಾತ ಗಗನಯಾತ್ರಿ ಸುನಿತಾ ವಿಲಿಯಮ್ಸ್

ಭಾರತ ಸಂಜಾತ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮೂರನೇ ಬಾರಿಗೆ ಮಂಗಳವಾರ ಬಾಹ್ಯಾಕಾಶಕ್ಕೆ ಹಾರಲು ಸಜ್ಜಾಗಿದ್ದಾರೆ.

21 mins ago

ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ

ಖ್ಯಾತ ಕೊಂಕಣಿ ಸಾಹಿತಿ ಮತ್ತು ಸಂಘಟಕ, ಕೊಂಕಣಿ ಸಾಹಿತಿ ಮತ್ತು ಕಲಾವಿದ ಸಂಘಟನೆಯ ಅಧ್ಯಕ್ಷ ರೊನಾಲ್ಡ್ ಸಿಕ್ವೇರಾ ಅಲ್ಫಕಾಲದ ಅನಾರೋಗ್ಯದಿಂದ…

22 mins ago

ಆರೋಗ್ಯಯತ ಕಿಡ್ನಿ ನಮ್ಮದಾಗಲು ಏನು ಮಾಡಬೇಕು?

ಯಾವಾಗ ಯಾವ ಕಾಯಿಲೆ ನಮ್ಮನ್ನು ಬಾಧಿಸುತ್ತದೆ ಎಂದು ಹೇಳಲಾಗುವುದಿಲ್ಲ. ಹೀಗಾಗಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದನ್ನು ಮರೆಯಬಾರದು. ಇತ್ತೀಚೆಗಿನ ದಿನಗಳಲ್ಲಿ…

36 mins ago

ಎಸ್​ಎಸ್​ಎಲ್​​ಸಿ ಫಲಿತಾಂಶ ಪ್ರಕಟಿಸಲು ಡೇಟ್‌ ಫಿಕ್ಸ್‌ : ಆನ್​ಲೈನ್‌ನಲ್ಲಿ ಹೀಗೆ ನೋಡಿ

2023-24ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಪ್ರಕಟಕ್ಕೆ ದಿನಗಣನೆ ಶುರುವಾಗಿದೆ. ಕರ್ನಾಟಕ ಪರೀಕ್ಷಾ ಮಂಡಳಿ ಫಲಿತಾಂಶ ಪ್ರಕಟ ಮಾಡಲು ಸರ್ವ…

38 mins ago