News Karnataka Kannada
Thursday, April 25 2024
ಹಾಸನ

ಬೇಲೂರಲ್ಲಿ ಚನ್ನಕೇಶವಸ್ವಾಮಿ ದೇವರ ಅದ್ಧೂರಿ ರಥೋತ್ಸವ

Belur
Photo Credit :

ಬೇಲೂರು: ಇಲ್ಲಿನ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ದೇಗುಲದ ಎರಡನೇ ದಿನದ ನಾಡ ರಥೋತ್ಸವ (ದೊಡ್ಡತೇರು) ಲಕ್ಷಾಂತರ ಭಕ್ತರ ನಡುವೆ ವಿಜ್ರಂಭಣೆಯಿಂದ ನಡೆಯಿತು.

ಬೆಳಗ್ಗೆಯಿಂದಲೇ ರಥೋತ್ಸವ ನಡೆಯುತ್ತದೆ ಇಲ್ಲವೋ ಎಂಬ ಗೊಂದಲದಲ್ಲಿದ್ದ ರಥೋತ್ಸವಕ್ಕೆ ಯಾವುದೇ ವಿಘ್ನವಿಲ್ಲದೆ ತನ್ನ ಮೂಲಸ್ಥಾನಕ್ಕೆ ಸಂಜೆ 5-30 ಕ್ಕೆ ತಲುಪಿತು. ಸಮಿತಿಯಲ್ಲಿ ಅಡ್ಡೆಗಾರರನ್ನು ಕೈಬಿಡಲಾಗಿದೆ. ದೇವಾಲಯದ ವ್ಯವಸ್ಥಾಪನಾ ಸಮಿತಿಯಲ್ಲಿ ರಾಜಕೀಯ ಹಿನ್ನಲೆಯಲ್ಲಿ ನಮ್ಮನ್ನು ಕಡೆಗಣಿಸಲಾಗಿದೆ  ಎಂದು ನಾಲ್ಕು ಮೂಲೆ ಅಡ್ಡೆಗಾರರನ್ನು ಗೌರವದಿಂದ ಕಾಣುತ್ತಿಲ್ಲ ಎಂದು ಧರಣಿ ಕೂತಿದ್ದರು.

ಹೀಗಾಗಿ ಮಧ್ಯಾಹ್ನ ಒಂದು ಗಂಟೆಯಾದರೂ ಲಕ್ಷಾಂತರ ಭಕ್ತರು ಬಂದಿದ್ದರೂ ಸಹ ರಥೋತ್ಸವಕ್ಕೆ ಚಾಲನೆ ದೊರೆತಿರಲಿಲ್ಲ. ಶಾಸಕರ ಹಾಗೂ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ.ನಾರಾಯಣಸ್ವಾಮಿ ಪ್ರತಿಭಟನೆ ಕಾರರನ್ನು ಎಷ್ಟೇ ಮನವೊಲಿಸಿದರೂ ಸಹ ಪ್ರತಿಭಟನೆ ಕೈಬಿಡಲು ಒಪ್ಪದಿದ್ದಾಗ ಶಾಸಕರು ಅಡ್ಡೆಗಾರರನ್ನು ಸಮಾಧಾನ ಪಡಿಸಿ ನಿಮಗೆ ನ್ಯಾಯಸಿಗದಿದ್ದರೆ ಈ ಸಮಿತಿ ಸಭೆಗೆ  ನಾನೇ ಬರುವುದಿಲ್ಲ ಎಂದರು. ನಿಮ್ಮ ಜೊತೆ ನಾನಿರುತ್ತೆಡನೆ ಎಂದು ಭರವಸೆ ನೀಡದ ನಂತರ ಪ್ರತಿಭಟನೆ ಕೈಬಿಡಲಾಯಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಲಿಂಗೇಶ್ ವ್ಯವಸ್ಥಾಪನಾ ಸಮಿತಿ ರಚಿಸುವಾಗ ಸ್ಥಳೀಯ ಶಾಸಕರ ಗಮನಕ್ಕೆ ತರಬೇಕು. ಮೇಲಾಧಿಕಾರಿಗಳ ತಪ್ಪಿನಿಂದ ಆಗಿರುವ ಅನಾನುಕೂಲಕ್ಕೆ ಸಂಬಂಧಪಟ್ಟ ಮಂತ್ರಿಗಳ ಗಮನಕ್ಕೆ ತಂದು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲೇ ಬೀಡು ಬಿಟ್ಟ ಪೊಲೀಸ್ ವರಿಷ್ಟಾಧಿಕಾರಿ ಶ್ರೀನಿವಾಸ್ ಗೌಡ ಸ್ಥಳದಲ್ಲೇ‌ ಮೊಕ್ಕಾಂ ಹೂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು